How To Reduce Belly Fat:ಹೊಟ್ಟೆಯ ಬೊಜ್ಜು ಕರಗಿಸಲು ಉಪಯುಕ್ತ ಜೀರಿಗೆ, ಓಮದ ಕಾಳಿನ ಪಾನೀಯ

(How To Reduce Belly Fat)ಹೊಟ್ಟೆಯಲ್ಲಿರುವ ಬೊಜ್ಜು ಕರಗಿಸಿಕೊಳ್ಳಲು ವ್ಯಾಯಾಮ ಮತ್ತು ಟ್ರಿಟ್ ಮೆಂಟ್‌ ಮಾಡುತ್ತಾರೆ. ಆಧುನಿಕ ಜೀವನಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹಲವಾರು ಜನರಲ್ಲಿ ಹೊಟ್ಟೆ ಬೊಜ್ಜು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಬೊಜ್ಜು ಆರೋಗ್ಯದ ಮೇಲೆ ಪರಿಣಾಮ ಬಿರಿ ದೇಹದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿಯೇ ಪಾನೀಯಾ ತಯಾರಿಸಿಕೊಂಡು ಕುಡಿದರೆ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಬಹುದು. ಈ ಪಾನೀಯಾ ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(How To Reduce Belly Fat)ಬೇಕಾಗುವ ಸಾಮಾಗ್ರಿಗಳು:
ಜೀರಿಗೆ
ಓಮದ ಕಾಳು

ಮಾಡುವ ವಿಧಾನ:
ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿಕೊಂಡು ಒಂದು ಚಮಚ ಜೀರಿಗೆ, ಒಂದು ಚಮಚ ಓಮದ ಕಾಳು ಹಾಕಿ ಕುಡದಿಸಿಕೊಳ್ಳಬೇಕು. ಇದನ್ನು ಲೋಟದಲ್ಲಿ ಸೊಸಿಕೊಂಡು ಉಗುರು ಬೆಚ್ಚ ಆದಮೇಲೆ ಕುಡಿಯಬೇಕು. ದಿನದಲ್ಲಿ ಮೂರು ಬಾರಿ ಈ ಪಾನೀಯಾವನ್ನು ಕುಡಿಯುವುದರಿಂದ ಬೊಜ್ಜು ಕರಗುತ್ತದೆ.

ಹೊಟ್ಟೆಯ ಬೊಜ್ಜು ಇಳಿಸಿಕೊಳ್ಳಲು ಆಹಾರ ಕ್ರಮ ಪಾಲಿಸುವುದರ ಜೊತೆಗೆ ವ್ಯಾಯಾಮ ಮಾಡಬೇಕು. ಹೊಟ್ಟೆ ಕರಗಿಸಲು ವ್ಯಾಯಾಮ ಮಹತ್ತರ ಪಾತ್ರ ವಹಿಸುತ್ತದೆ. ಕೆಲವು ಆಹಾರವನ್ನು ಸೇವನೆ ಮಾಡುವುದರಿಂದ ಹೊಟ್ಟೆ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಮೊಟ್ಟೆಯನ್ನು ತಿನ್ನುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಮೊಟ್ಟೆಯಲ್ಲಿ ಹೇರಳವಾದ ಪ್ರೋಟೀನ್‌ ಅಂಶ ಇರುವುದರಿಂದ ಇದನ್ನು ತಿಂದರೆ ಹಸಿವನ್ನು ನಿಯಂತ್ರಣದಲ್ಲಿ ಇರುವಂತೆ ಮಾಡುತ್ತದೆ. ಹಾಗಾಗಿ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಲು ದಿನಕ್ಕೊಂದು ಮೊಟ್ಟೆಯನ್ನು ತಿನ್ನುವುದು ಉತ್ತಮ. ಬೀನ್ಸ್‌ ನಲ್ಲೂ ಕೂಡ ಪ್ರೊಟೀನ್‌ ಅಂಶ ಹೇರಳವಾಗಿ ಇರುವುದರಿಂದ ಇದನ್ನು ತಿಂದರೆ ಹಸಿವು ಆಗುವುದಿಲ್ಲ ಹಾಗಾಗಿ ಇದನ್ನು ಸೇವನೆ ಮಾಡಿದರೆ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಬಹುದು.

ದಾಲ್ಚಿನಿ ಪುಡಿ
ಒಂದು ಲೋಟ ಹಾಲಿನಲ್ಲಿ ದಾಲ್ಚಿನಿ ಪುಡಿಯನ್ನು ಬೇರೆಸಿ ಕುಡಿಯುವುದರಿಂದ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು.

ಮೆಂತ್ಯೆ ನೀರು
ರಾತ್ರಿ ಬೌಲ್‌ ನಲ್ಲಿ ಮೆಂತ್ಯೆ ಯನ್ನು ನೆನಸಿಟ್ಟುಕೊಂಡು ಬೆಳಿಗ್ಗೆ ಆ ನೀರನ್ನು ಕುದಿಸಿಕೊಂಡು ಕುಡಿಯುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆ ಆಗುತ್ತದೆ.

ಕರಿಬೇವಿನ ಎಲೆ
ಕರಿಬೇವಿನ ಎಲೆಯನ್ನು ನೀರಲ್ಲಿ ತೊಳೆದುಕೊಂಡು ತಿನ್ನುವುದರಿಂದ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡುತ್ತದೆ ಜೊತೆಗೆ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.

ಇದನ್ನೂ ಓದಿ:Pomegranate Peel Tambuli:ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಮಾಡಿ ನೋಡಿ ರುಚಿ ರುಚಿ ತಂಬುಳಿ

ಇದನ್ನೂ ಓದಿ:Deworming Problem Solution:ಪದೇ ಪದೇ ಕಾಡುತ್ತಿರುವ ಜಂತು ಹುಳು ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ

ಬೆಳ್ಳಿಳ್ಳಿ ಮತ್ತು ನಿಂಬೆರಸ ಮಿಶ್ರಣ
ಮೂರು ಎಸಳು ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಹಾಗೆ ಜಗಿದು ನುಂಗಬೇಕು ನಂತರ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿಯಬೇಕು . ಮುಕ್ಕಾಲು ಗಂಟೆ ಆಹಾರವನ್ನು ಸೇವಿಸಬಾರದು.ಪ್ರತಿದಿನ ಹೀಗೆ ಮಾಡುವುದರಿಂದ ಹೊಟ್ಟೆ ಬೊಜ್ಜು ಕಡಿಮೆ ಆಗುತ್ತದೆ.

How To Reduce Belly Fat cumin, oma seed drink is useful to dissolve belly fat

Comments are closed.