Kantara Hindi OTT : “ಕಾಂತಾರ” ಹಿಂದಿ ಓಟಿಟಿ ರಿಲೀಸ್‌ ಡೇಟ್ಸ್‌ ಫಿಕ್ಸ್‌ : ನೆಟ್‌ಫ್ಲಿಕ್ಸ್‌ಗೆ ಲಗ್ಗೆ ಇಟ್ಟ ಕನ್ನಡದ ಮೊದಲ ಸಿನಿಮಾ

ಸ್ಯಾಂಡಲ್‌ವುಡ್‌ನ “ಕಾಂತಾರ” ಸಿನಿಮಾ ಈಗಾಗಲೇ ಸಿನಿಮಂದಿರಗಳಲ್ಲಿ ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿದೆ. (Kantara Hindi OTT)ಅದರ ಜೊತೆಯಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಓಟಿಟಿಗೂ ಲಗ್ಗೆ ಇಟ್ಟಿದ್ದು ಸಖತ್‌ ಸದ್ದು ಮಾಡಿದೆ. ಆದರೂ ಕೂಡ ಸಿನಿಮಾ ಮಂದಿರಗಳಲ್ಲಿ ಕಾಡಬೆಟ್ಟು ಶಿವನ ಆರ್ಭಟ ಮುಂದುವರೆದಿದೆ. ಇದೀಗ “ಕಾಂತಾರ” ಹಿಂದಿ ನೆಟ್‌ಫ್ಲಿಕ್ಸ್‌ ಸ್ಟ್ರೀಮಿಂಗ್‌ ಆಗುವ ಸಮಯ ಹತ್ತಿರ ಬಂದಿದೆ.

“ಕಾಂತಾರ” ಸಿನಿಮಾ ಸೆಪ್ಟೆಂಬರ್‌ 30ರಂದು ಬಿಡುಗಡೆ ಆಗಿದ್ದು, ರೂ.400 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಬಾಕ್ಸ್‌ಆಫೀಸ್‌ ಕಲೆಕ್ಷನ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಎರಡದು ವಾರಗಳ ನಂತರ ಬೇರೆ ಭಾಷೆಗಳಿಗೂ ಡಬ್‌ ಆಗಿ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಈ ಸಿನಿಮಾ ಹಿಂದಿಗೆ ಡಬ್‌ ಆಗಿ ಅದ್ಭುತ ಯಶಸ್ಸನ್ನು ಕಂಡಿತ್ತು. “ಕಾಂತಾರ” ಬಾಲಿವುಡ್‌ನಲ್ಲಿ ೫೦ ದಿನ ಪೂರೈಸಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇಂತಹ ಸಮಯದಲ್ಲೇ ಸಿನಿಮಾವನ್ನು ಓಟಿಟಿ ಫ್ಲಾರ್ಟ್‌ಫಾರ್ಮಾಗೆ ತರುವ ಪ್ರಯತ್ನ ಶುರುವಾಗಿದೆ.

“ಕಾಂತಾರ” ಸಿನಿಮಾ ಹಿಂದಿಗ ಡಬ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಬಿಟೌನ್‌ ಸೂಪರ್‌ ಸ್ಟಾರ್‌ಗಳ ಸಿನಿಮಾಗಳಿಗೂ ಪೈಪೋಟಿ ನೀಡಿ ಸಿನಿಮಾ ಬಾಕ್ಸ್‌ ಆಫೀಸ್‌ ಶೇಕ್‌ ಮಾಡಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರು ಸಿನಿತಂಡದ ಶ್ರಮಕ್ಕೆ ಬಹುಪರಾಕ್‌ ಹೇಳಿದ್ದಾರೆ. ಈಗಾಗಲೇ “ಕಾಂತಾರ” ನಾಲ್ಕು ಭಾಷೆಗಳಲ್ಲಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಆದರೆ ಹಿಂದಿಯಲ್ಲಿ ಡಿಸೆಂಬರ್‌ 9ಕ್ಕೆ ನೆಟ್‌ಫ್ಲಿಕ್ಸ್‌ಗೆ ಸ್ಟ್ರೀಮಿಂಗ್‌ ಆಗಲಿದೆ. ಹಿಂದಿಗೆ ಡಬ್‌ ಆಗಿ ನೆಟ್‌ಫ್ಲಿಕ್ಸ್‌ ಲಗ್ಗೆ ಕೊಡುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ “ಕಾಂತಾರ” ಸಿನಿಮಾ ಪಾತ್ರವಾಗಿದೆ. ನೆಟ್‌ಫ್ಲಿಕ್ಸ್‌ ಮೂಲಕ ಪ್ರಪಂಚದ ಮೂಲೆ ಮೂಲೆಗೆ ಕರಾವಳಿ ಸೊಗಡು ತಲುಪಲಿದೆ.

ಇದನ್ನೂ ಓದಿ : Directed by Natesh Hegde: “ಕಾಂತಾರ” ಮತ್ತು “ಆರ್‌ಆರ್‌ಆರ್‌” ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಿರ್ದೇಶಕ ನಟೇಶ್‌ ಹೆಗ್ಡೆ

ಇದನ್ನೂ ಓದಿ : Padaraya Movie : ಪಾದರಾಯ ಸಿನಿಮಾದಲ್ಲಿ ಕಿಚ್ಚ ಸುದೀಪ್ : ತೆರೆಗೆ ಬರಲಿದೆ ನೈಜ ಘಟನೆಯ ಸಿನಿಮಾ

ಇದನ್ನೂ ಓದಿ : S.K Bhagavan: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

ಪ್ರೇಕ್ಷಕರ ಒತ್ತಾಯ ಮೇರೆಗೆ ಅಕ್ಟೋಬರ್‌ 14ಕ್ಕೆ ಕಾಂತಾರ ಹಿಂದಿಗೆ ಡಬ್‌ ಆಗಿ ತೆರೆ ಕಂಡಿತ್ತು. ಸಾಧಾರಣ ಓಪನಿಂಗ್‌ ಪಡೆದುಕೊಂಡಿದ್ದ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆದಿದೆ. ಎಲ್ಲಾ ಸಿನಿರಂಗದಲ್ಲೂ ಸಿಕ್ಕಾಪಟ್ಟೆ ಸ್ಟ್ರಾಂಗ್‌ ಆಗಿ ಸಿನಿಮಂದಿರಗಳಲ್ಲಿ ಉಳಿದುಕೊಂಡಿತ್ತು. ಮಧ್ಯಮ ಮಟ್ಟದ ಬಜೆಟ್‌ ಸಿನಿಮಾವೊಂದು ಅದರಲ್ಲೂ ಕನ್ನಡ ಸಿನಿಮಾ ಡಬ್‌ ವರ್ಷನ್‌ ಈ ತರಹ ಸದ್ದು ಮಾಡಿದ್ದು ಬಾಲಿವುಡ್‌ ಬಾಕ್ಸ್‌ ಆಫೀಸ್‌ ಪಂಡಿತರಿಗೂ ಅಚ್ಚರಿ ತಂದಿತ್ತು. ಸಿನಿಮಾ ಹಿಂದಿಯಲ್ಲಿ 80 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ.

“Kantara” Hindi OTT Release Dates Fix: First Kannada Movie to Hit Netflix

Comments are closed.