Get Healthy Thick Hair :ಆರೋಗ್ಯಕರ ದಟ್ಟ ಕೂದಲು ಪಡೆಯಲು ರುಚಿಯಾದ ಜ್ಯೂಸ್‌ ಕುಡಿಯಿರಿ

(Get Healthy Thick Hair)ಉದ್ದ ದಟ್ಟವಾದ ಕೂದಲು ಪಡೆಯಲು ಎಲ್ಲಾ ಮಹಿಳೆಯರಲ್ಲೂ ಆಸೆ ಇರುತ್ತದೆ. ಅದಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿ ಕೂದಲು ಆರೈಕೆ ಮಾಡುತ್ತಾರೆ. ಆಧುನಿಕ ಜೀವನ ಶೈಲಿಯಿಂದಾಗಿ ಕೂದಲು ಉದುರುವುದು, ಬೇಗನೆ ಕೂದಲು ಬಿಳಿ ಆಗುವುದು ಇನ್ನು ಹಲವು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.ಯಾವುದೇ ರೀತಿ ಹಾನಿ ಆಗದಂತೆ ಕೂದಲನ್ನು ರಕ್ಷಿಸಿಕೊಳ್ಳುವುದಕ್ಕೆ ಈ ಕೆಳಗೆ ಸೂಚಿಸಿದ ಜ್ಯೂಸ್‌ ಕುಡಿಯಿರಿ. ಈ ಜ್ಯೂಸ್‌ ತಯಾರಿಸಲು ಯಾವೆಲ್ಲಾ ಪದಾರ್ಥ ಬಳಸುತ್ತಾರೆ ಹಾಗೂ ಈ ಜ್ಯೂಸ್‌ ತಯಾರಿಸುವುದು ಹೇಗೆ ಎಂಬ ಮಾಹಿತಿಯ ಕುರಿತು ತಿಳಿಯೋಣ.

(Get Healthy Thick Hair)ಬೇಕಾಗುವ ಸಾಮಾಗ್ರಿಗಳು:

  • ಬಾದಾಮಿ
  • ಕಡಲೆಕಾಯಿ
  • ಕುಂಬಳಕಾಯಿ ಬೀಜ
  • ಗೋಡಂಬಿ
  • ಎಳ್ಳು
  • ಖರ್ಜೂರ
  • ಬಾಳೆಹಣ್ಣು
  • ಹಾಲು

ಮಾಡುವ ವಿಧಾನ

ಬೌಲ್‌ ಗೆ ಬಾದಾಮಿ, ಕಡಲೆಕಾಯಿ,ಕುಂಬಳಕಾಯಿ ಬೀಜ,ಗೋಡಂಬಿ,ಎಳ್ಳು,ಖರ್ಜೂರ ಹಾಕಿ ರಾತ್ರಿ ನೆನಸಿಟ್ಟುಕೊಳ್ಳಬೇಕು. ನಂತರ ನೆನಸಿಟ್ಟ ಪದಾರ್ಥವನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು , ಬಾಳೆಹಣ್ಣು, ಹಾಲು ಹಾಕಿ ರುಬ್ಬಿಕೊಂಡರೆ ರುಚಿಯಾದ ಜ್ಯೂಸ್‌ ಸವಿಯಲು ರೆಡಿ. ಪ್ರತಿದಿನ ಈ ಜ್ಯೂಸ್‌ ಕುಡಿಯುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.

ಬಾದಾಮಿ
ಬಾದಾಮಿಯಲ್ಲಿ ವಿಟಮಿನ್‌ ಇ ಅಧಿಕವಾಗಿ ಇರುವುದರಿಂದ ಇದನ್ನು ಸೇವನೆ ಮಾಡಿದರೆ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು.ಬಾದಾಮಿಯಲ್ಲಿ ಹೇರಳವಾಗಿ ಮೆಗ್ನೀಶಿಯಂ,ಖನಿಜ ಅಂಶ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ಪ್ರತಿದಿನ ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಒಣ ಚರ್ಮ ಹೊಂದಿರುವವರು ಬಾದಾಮಿಯಿಂದ ಲೋಷನ್‌ ಮಾಡಿಕೊಂಡು ತ್ವಚೆಗೆ ಹಚ್ಚುವುದರಿಂದ ವಿಟಮಿನ್‌ ಎ ಮತ್ತು ಇ ಅಂಶವನ್ನು ಪೂರೈಸುವ ಮೂಲಕ ಹೊಳೆಯುವ ಚರ್ಮವನ್ನು ನೀಡುತ್ತದೆ.

ಇದನ್ನೂ ಓದಿ:Hair Fall Problem Tips : ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಚಿಂತೆ ಬೇಡ ಈ ಟಿಪ್ಸ್‌ ಅನುಸರಿಸಿ

ಇದನ್ನೂ ಓದಿ:Ayurvedic drink: ಚಳಿಗಾಲದಲ್ಲಿ ಕಾಡುವ ರೋಗಗಳಿಗೆ ಆಯುರ್ವೇದಿಕ್ ಪಾನೀಯಗಳು ಉತ್ತಮ

ಇದನ್ನೂ ಓದಿ:Carambola Fruit Health Tips:ಸುಟ್ಟಗಾಯ, ನೋವಿಗೆ ಬಳಸಿ ದಾರೆಹುಳಿ ಎಣ್ಣೆ

ಎಳ್ಳು
ಎಳ್ಳು ಪ್ರೋಟಿನ್‌, ಜಿಂಕ್‌, ಐರನ್‌ ಅಂಶಗಳನ್ನು ಹೊಂದಿರುವುದರಿಂದ ಹಲವು ಕೂದಲಿನ ಸಮಸ್ಯೆಯನ್ನು ಗುಣಪಡಿಸುತ್ತದೆ. ಎಳ್ಳನ್ನು ಯಾವುದಾದರು ರೂಪದಲ್ಲಿ ಸೇವನೆ ಮಾಡುವುದರಿಂದ ಕೂದಲು ದಪ್ಪವಾಗಿ ಬೆಳೆಯುವುದು ಅಷ್ಟೇ ಅಲ್ಲದೆ ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಚರ್ಮದ ಸಮಸ್ಯೆಗಳನ್ನು ಪರಿಹಾರ ಮಾಡುವಂತಹ ಗುಣವನ್ನು ಹೊಂದಿದೆ. ಇದನ್ನು ಪುಡಿಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಕಲೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆಗೂ ಕೂಡ ಪರಿಹಾರ ನೀಡುತ್ತದೆ. ಎಳ್ಳಿನಿಂದ ತಯಾರಿಸಿದ ಉಂಡೆಯನ್ನು ತಿನ್ನುವುದರಿಂದ ಹೆಚ್ಚಿನ ಆರೋಗ್ಯದ ಲಾಭವನ್ನು ಪಡೆದುಕೊಳ್ಳಬಹುದು.

Get Healthy Thick Hair Drink delicious juice to get healthy thick hair

Comments are closed.