Sunil Kumar: ಉಡುಪಿಯಲ್ಲಿ ರಾಜ್ಯದ ಮೊದಲ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನ: ಸಚಿವ ಸುನಿಲ್‌ ಕುಮಾರ್‌

ಉಡುಪಿ: (Sunil Kumar) ರಾಜ್ಯದ ಮೊದಲ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನವು ನಡೆಯಲಿದ್ದು, ಫೆಬ್ರವರಿ ೧೧ ಮತ್ತು ೧೨ ರಂದು ಉಡುಪಿಯ ಎಂ.ಜಿ.ಎ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಸಲಹಾ ಸಮೀತಿಯ ಅಧ್ಯಕ್ಷ ವಿ. ಸುನಿಲ್‌ ಕುಮಾರ್‌ ಹೇಳಿದರು.

ಎಂ.ಜಿ.ಎ ಕಾಲೇಜಿನ ಆವರಣದಲ್ಲಿ ರವೀಂದ್ರ ಮಂಟಪದ ಹಿಂಭಾಗದಲ್ಲಿ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿಯ (Sunil Kumar) ತಾತ್ಕಾಲಿಕ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಯಕ್ಷಗಾನಕ್ಕೆ ತನ್ನದೇ ಆದ ಹಿರಿಮೆ ಹಾಗೂ ಗರಿಮೆ ಇದ್ದು, ತುಳುನಾಡಿನಲ್ಲಿ ಇದಕ್ಕೆ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ಇದೆ. ಯಕ್ಷಗಾನದಲ್ಲಿ ಪ್ರಸ್ತುತ ಇರುವ ಮತ್ತು ಮುಂದಿನ ದಿನಗಳಲ್ಲಿ ಎದುರಾಗುವ ಹೊಸ ರೀತಿಯ ಸವಾಲುಗಳನ್ನು ಎದುರಿಸುವ ಬಗ್ಗೆ ಹೊಸ ಪೀಳಿಗೆಗೆ ಯಕ್ಷಗಾನದ ಮಹತ್ವದ ಬಗ್ಗೆ ತಿಳಿಸಲು ಸೇರಿದಂತೆ ಯಕ್ಷಗಾನದ ಬೆಳವಣಿಗೆ ಕುರಿತಂತೆ ಸಮ್ಮೇಳನದಲ್ಲಿ ಸಮಗ್ರವಾದ ಚರ್ಚೆಗಳು ನಡೆಯಲಿದೆ ಎಂದರು.

ಯಕ್ಷಗಾನ ಕಲಾವಿದರು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಬಳುವಳಿಯನ್ನು ನೀಡಿದ್ದಾರೆ. ಪ್ರಸಂಗಗಳಲ್ಲಿ ಯಾವುದೇ ರೀತಿಯ ಆಂಗ್ಲ ಪದಗಳನ್ನು ಬಳಕೆ ಮಾಡದೇ ಸಂಭಾಷಣೆ ನಡೆಸುತ್ತಾ ಬಂದಿರುವುದು ಒಂದು ಮಹತ್ವವಾದ ಕೆಲಸವೇ ಹೌದು. ಇದು ಅವರ ಪ್ರಬುದ್ದರೆ ಮತ್ತು ಹಿರಿಮೆಯನ್ನು ತೋರುತ್ತದೆ. ಅಲ್ಲದೇ ಈ ಯಕ್ಷಗಾನ ಸಮ್ಮೇಳನವು (Sunil Kumar) ಎಲ್ಲಾ ಸಮ್ಮೇಳನಗಳಿಗೆ ಮಾದರಿಯಾಗುವಂತೆ ನಡೆಯಬೇಕು ಎಂದು ಸಚಿವರು ಹೇಳಿದರು.

ಇನ್ನೂ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದ ಸಚಿವರು, ಇದರ ಅಧ್ಯಕ್ಷರನ್ನಾಗಿ ಡಾ.ಪ್ರಭಾಕರ ಜೋಷಿ ಅವರನ್ನು ಘೋಷಿಸಿದರು. ಅಲ್ಲದೇ ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನಕ್ಕೆ ರಾಜ್ಯ ಸರಕಾರದಿಂದ ಎರಡು ಕೋಟಿ.ರೂ. ಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್‌ ಮಾತನಾಡಿ, ರಾಜ್ಯದಲ್ಲೇ ಪ್ರಥಮ ಬಾರಿಗೆ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನ ನಡೆಯುತ್ತಿದ್ದು, ಇದರ ಅಭೂತಪೂರ್ವ ಯಶಸ್ಸಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದರು, ಯಕ್ಷಗಾನದಲ್ಲಿ ಆಸಕ್ತಿ ಹೊಂದಿದವರು, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಕಾರವನ್ನು ಪಡೆಯಲಾಗುವುದು ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಯಕ್ಷಗಾನ ಸಮ್ಮೇಳನದ ಕಾರ್ಯಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅವರು, ಯಕ್ಷಗಾನವು ಕನ್ನಡ ಭಾಷೆಯ ಸಮೃದ್ದ ಬೆಳವಣಿಗೆಗೆ ಅತೀ ಹೆಚ್ಚಿನ ಕೊಡುಗೆ ನೀಡಿದೆ. ಕನ್ನಡದ ಕಾವ್ಯಗಳನ್ನು ಕಟ್ಟಿ ನಿಲ್ಲಿಸಿದೆ. ಇದುವರೆಗೆ ಐವತ್ತೆರಡು ಮಂದಿ ಯಕ್ಷಗಾನದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಿ.ಎಚ್.ಡಿ. ಪಡೆದುಕೊಂಡಿದ್ದಾರೆ ಎಂದರು.

ಇದನ್ನೂ ಓದಿ : illegal liquor Sale: ಉಡುಪಿಯಲ್ಲಿ ಅಕ್ರಮ ಮಧ್ಯ ಮಾರಾಟ: ನಾಲ್ವರು ವಶಕ್ಕೆ

ಇದನ್ನೂ ಓದಿ : Wikipedia QR Code: ಪ್ರವಾಸಿ ತಾಣಗಳ ಮಾಹಿತಿಗೆ ಇನ್ಮುಂದೆ ಕ್ಯೂ. ಆರ್.ಕೋಡ್‌: ಉಡುಪಿ ಡಿಸಿ ಕೂರ್ಮರಾವ್‌ ಎಂ

ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಸಾಲಿಗ್ರಾಮ ಮತ್ತು ಇತರೆ ಮೇಳಗಳ ಮುಖ್ಯಸ್ಥ ಪಿ.ಕಿಶನ್‌ ಹೆಗ್ಡೆ, ಮಂದಾರ್ತಿ ಯಕ್ಷಗಾನ ಮೇಳದ ಅಧ್ಯಕ್ಷ ಧನಂಜಯ ಶೆಟ್ಟಿ ಹಾಗೂ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮೊ ಸ್ವಾಗತಿಸಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟಾರ್‌ ಶಿವರುದ್ರಪ್ಪ ವಂದಿಸಿದರು. ಹಾಗೂ ಕಾರ್ಯ್ರಮವನ್ನು ಉತ್ತಮ ನಿರೂಪಣೆಯೊಂದಿಗೆ ಮುರಳಿ ಕಡೆಕಾರ್‌ ಅವರು ನಡೆಸಿಕೊಟ್ಟರು.

Sunil Kumar: State’s first comprehensive Karnataka Yakshagana conference in Udupi: Minister Sunil Kumar

Comments are closed.