Yoga For Hair Growth : ಕೂದಲು ಉದ್ದ ಬೆಳೆಯಬೇಕೇ? ಹಾಗಾದರೆ ಈ ಯೋಗಾಸನಗಳನ್ನು ಟ್ರೈ ಮಾಡಿ

ಕೂದಲನ್ನು ಉದ್ದ ಬೆಳೆಸಲು(Yoga For Hair Growth) ನೀವು ಕಷ್ಟ ಪಡುತ್ತಿದ್ದರೆ, ನಾವು ಅದಕ್ಕೆ ಒಂದು ಉಪಾಯ ಹೇಳುತ್ತೇವೆ. ಕೂದಲಿಗೆ ಬರೀ ಆರೈಕೆಯೊಂದೇ ಅಲ್ಲ ಬದಲಿಗೆ ಯೋಗಾಸನವನ್ನು ಹೇಳುತ್ತಿದ್ದೇವೆ. ಅದು ನಿಮ್ಮ ಕೂದಲು ಬೆಳೆಯುವುದರ ಜೊತೆಗೆ ರೇಷ್ಮೆಯ ತರಹ ಹೊಳೆಯುವಂತೆ ಮಾಡುತ್ತದೆ. ನಾವು ಹೇಳುವ ಸರಳ ಯೋಗಾಸನಗಳು ಕೂದಲು ಬೆಳೆಯುವುದನ್ನು ವೇಗವಾಗಿಸಿ, ಸುಂದರ, ಹೊಳಪಿನಿಂದ ಕೂಡಿದ ಶಕ್ತಿಯುತ ಕೂದಲು ನಿಮ್ಮದಾಗುತ್ತದೆ. ಅದರ ಜೊತೆಗೆ ಉದುರುವಿಕೆಯನ್ನು ತಡೆದು ಹೊಳಪನ್ನು ನೀಡುತ್ತದೆ.

ಕೂದಲ ಬೆಳವಣಿಗೆಗೆ ಸಹಾಯ ಮಾಡುವ ಯೋಗಾಸನಗಳು :

  • ಅಧೋಮುಖ ಶ್ವಾನಾಸನ
    ಈ ಆಸನವು ಕೈ ಮತ್ತು ಕಾಲುಗಳಿಗೂ ಬಲವನ್ನು ತರುತ್ತದೆ. ಇದು ಶ್ವಾಸಕೋಶವು ತೆರಯುವುಂತೆ ಮಾಡಿ, ಪೂರ್ತಿ ದೇಹಕ್ಕೆ ಆಮ್ಲಜನಕವು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜುಮಾಡುತ್ತದೆ. ಇದರ ಜೊತೆಗೆ ಮೆದುಳಿಗೆ ಹೆಚ್ಚಿನ ರಕ್ತವು ಸಂಚಾರವಾಗುವಂತೆ ಮಾಡುತ್ತದೆ. ಇದರಿಂದ ಕೂದಲಿನ ಬುಡ ಶಕ್ತಿಯುತವಾಗಿ, ಬೆಳಯಲು ಸಹಾಯಮಾಡುತ್ತದೆ.

ಇದನ್ನೂ ಓದಿ : ತೂಕ ಇಳಿಸುತ್ತೆ, ಹೊಟ್ಟೆಯ ಕೊಬ್ಬು ಕರಗಿಸುತ್ತೆ ಈ 9 ಟೀ

  • ಬಾಲಾಸನ
    ‌ಇದು ಪುನರ್‌ಉತ್ತೇಜಿಸುವ ಆಸನವಾಗಿದೆ. ಬಾಲಾಸನವು ಕಾಲುಗಳಿಗೆ ಉತ್ತಮ ಪರಿಣಾಮವನ್ನು ತಂದುಕೊಡುವುದು. ಇದು ನರಮಂಡಲವನ್ನು ಶಾಂತಗೊಳಿಸಿ, ಒತ್ತಡವನ್ನು ನಿವಾರಿಸುತ್ತದೆ.
  • ಕಪಾಲಭಾತಿ
    ಕಪಾಲಭಾತಿ ನರಮಂಡಲಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಲಯಬದ್ಧ ಉಸಿರಾಟ ಮತ್ತು ಹೊಟ್ಟೆಯ ಚಲನೆಯೊಂದಿಗೆ ಒಳಗಿನ ಅಂಗಾಶಗಳು ಸ್ವಚ್ಛವಾಗಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಈ ಯೋಗಾಸನವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಪುನರ್ಯೌವ್ವನಗೊಳಿಸುತ್ತದೆ.
  • ಸರ್ವಾಂಗಾಸನ
    ಈ ಆಸನವು ದೇಹವನ್ನು ಶಾಂತಗೊಳಿಸವು ಪರಿಣಾಮವನ್ನು ಹೊಂದಿದೆ. ಇದು ನರಮಂಡಲವನ್ನು ಪ್ಯಾರಾಸಿಂಪಥೆಟಿಕ್‌ ಮೂಡ್‌ಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಈ ಆಸನದಲ್ಲಿ ಕೆನ್ನೆಯ ಭಾಗವು ಎದೆಯ ಭಾಗದವರೆಗೆ ಬರುವುದರಿಂದ ಥೈರಾಯ್ಡ್‌ ಗ್ಲಾಂಡ್‌ಗಳನ್ನು ಚಿಕ್ಕದಾಗಿಸುತ್ತದೆ.
  • ಶಿರ್ಶಾಸನ
    ಇದು ಕಾಲುಗಳನ್ನು ಮೇಲಕ್ಕೆತ್ತಿ ಉಲ್ಟಾ ನಿಲ್ಲುವ ಆಸನವಾಗಿದೆ. ಇದು ಉತ್ತಮ ದೇಹ ಶುದ್ದೀಕರಣ ಪರಿಣಾಮವನ್ನು ಹೊಂದಿದೆ. ಈ ಆಸನವು ರಕ್ತದ ಹರಿವು ಕುತ್ತಿಗೆಯ ಭಾಗದಲ್ಲಿ ತಡೆಯೊಡ್ಡುವುದನ್ನು ನಿವಾರಿಸುತ್ತದೆ. ಇದರಿಂದ ಮೆದುಳಿಗೆ ರಕ್ತ ಸಂಚಯವಾಗುತ್ತದೆ. ಇದು ನರಮಂಡಲನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Parenting Tips: ನಿಮ್ಮ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆ? ಹಾಗಾದರೆ ಈ ಟಿಪ್ಸ್‌ ಅನುಸರಿಸಿ

(Yoga For Hair Growth simple and easy asanas to increase hair growth)

Comments are closed.