ಗಿಲ್ಲಿ ನಟರಾಜ್-ಸಿಎಂ ಸಿದ್ದರಾಮಯ್ಯ ಭೇಟಿ; ಬಿಗ್ ಬಾಸ್ ಗೆಲುವಿಗೆ ಅಭಿನಂದನೆ
CM Siddaramaiah | Gilli Nata ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ ಗಿಲ್ಲಿ ನಟರಾಜ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದ ಮೂಲಕ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಟ್ವೀಟ್‌ನಲ್ಲಿ ಏನಿದೆ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಗಿಲ್ಲಿ ನಟರಾಜ್ ಅವರ ಗೆಲುವಿನ ಕುರಿತು ಹರ್ಷ ವ್ಯಕ್ತಪಡಿಸಿದ್ದು, “12ನೇ ಆವೃತ್ತಿಯ ಬಿಗ್ ಬಾಸ್ ವಿಜೇತ ಗಿಲ್ಲಿ ನಟರಾಜ್ ಅವರನ್ನು ಅಭಿನಂದಿಸುತ್ತೇನೆ. ಅವರ ಮುಂದಿನ ಜೀವನವು ಇನ್ನಷ್ಟು ಯಶಸ್ಸು ಮತ್ತು ಸಂತಸದಿಂದ ಕೂಡಿರಲಿ” ಎಂದು ಮನಸಾರೆ ಹಾರೈಸಿದ್ದಾರೆ. ಈ ಅಭಿನಂದನಾ ಸಂದೇಶದ ಜೊತೆಗೆ ಗಿಲ್ಲಿ ನಟರಾಜ್ ಅವ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳಲಾಗಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟರಾಜ್ ಹಾದಿಗೆ ಸಿಕ್ಕ ಮನ್ನಣೆ:
ಮುಖ್ಯಮಂತ್ರಿಗಳು, ಗಿಲ್ಲಿ ನಟರಾಜ್ ಅವರ ಶ್ರಮ ಮತ್ತು ಜನಪ್ರಿಯತೆಯನ್ನು ಗುರುತಿಸಿ ಶುಭ ಕೋರಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ನಾಡಿನ ಜನರ ಮನಗೆದ್ದ ನಟರಾಜ್‌ಗೆ ಸಿಎಂ ನೀಡಿರುವ ಈ ಹಾರೈಕೆ ಅವರ ವೃತ್ತಿಜೀವನಕ್ಕೆ ದೊಡ್ಡ ಬೆಂಬಲ ನೀಡಿದಂತಾಗಿದೆ.
ಅಭಿಮಾನಿಗಳ ಸಂಭ್ರಮ:
ಸಿನಿಮಾ ರಂಗದ ಹಿನ್ನೆಲೆಯುಳ್ಳ ಗಿಲ್ಲಿ ನಟರಾಜ್ ಅವರು ಬಿಗ್ ಬಾಸ್ ಮನೆಯಲ್ಲಿ ತೋರಿದ ತಾಳ್ಮೆ ಮತ್ತು ಟಾಸ್ಕ್ ಹಸಿವು ಅವರನ್ನು ಟ್ರೋಫಿ ಗೆಲ್ಲುವಂತೆ ಮಾಡಿದೆ. ಈಗ ರಾಜ್ಯದ ಮುಖ್ಯಮಂತ್ರಿಗಳೇ ನೇರವಾಗಿ ಅಭಿನಂದಿಸಿರುವುದು ನಟರಾಜ್ ಅವರ ಗೆಲುವಿನ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ “ಜನಸಾಮಾನ್ಯರ ಗೆಲುವು” ಎಂದು ಅಭಿಮಾನಿಗಳು ಈ ವಿಡಿಯೋವನ್ನು ರೀ-ಟ್ವೀಟ್ ಮಾಡುತ್ತಿದ್ದಾರೆ.
ಬಡತನ ಮತ್ತು ಕಷ್ಟದ ಹಾದಿಯಿಂದ ಬಂದ ಗಿಲ್ಲಿ ನಟರಾಜ್‌ಗೆ ಈ ಗೆಲುವು ಚಿತ್ರರಂಗದಲ್ಲಿ ಹೊಸ ಬಾಗಿಲುಗಳನ್ನು ತೆರೆಯಲಿದೆ ಎಂಬ ನಿರೀಕ್ಷೆ ಇದೆ.



