ಪುನೀತ್‌ ರಾಜ್‌ಕುಮಾರ್‌ಗೆ ಸರಕಾರದ ಗೌರವ : ಮಾರ್ಚ್ 17 ರಂದು ಅಪ್ಪು ಸ್ಪೂರ್ತಿ ದಿನ ಘೋಷಿಸಿದ ಸಿಎಂ ಸಿದ್ಧರಾಮಯ್ಯ

Appu Spoorti dina March 17th : ಅಪ್ಪು ನೆನಪಿಗಾಗಿ ಸ್ಪೂರ್ತಿ ದಿನ ಆಚರಿಸೋದಾಗಿ ಘೋಷಿಸಿದ್ದರೂ ಆಚರಣೆಗೆ ಬಂದಿರಲಿಲ್ಲ. ಇದೇ ಕಾರಣಕ್ಕೆ ನೊಂದಿದ್ದ ಅಭಿಮಾನಿಗಳಿಗೆ ಸಿದ್ಧು ಸರ್ಕಾರ ಸಿಹಿಸುದ್ದಿ ನೀಡಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar), ಕನ್ನಡದ ಮನೆಮಗ. ಅಪ್ಪು ಅಗಲಿ ಎರಡು ವರ್ಷವಾಗುತ್ತಾ ಬಂದಿದೆ. ಈಗಾಗಲೇ ಅಪ್ಪು ಸಮಾಧಿ ನಿರ್ಮಾಣದ ಸಿದ್ಧತೆಯೂ ನಡೆದಿದೆ. ಆದರೆ ಈ ಎರಡು ವರ್ಷದಲ್ಲಿ ಸರ್ಕಾರ ಕೊಟ್ಟ ಮಾತು ತಪ್ಪಿತ್ತು. ಅಪ್ಪು ನೆನಪಿಗಾಗಿ ಸ್ಪೂರ್ತಿ ದಿನ (Appu Spoorti dina March 17th) ಆಚರಿಸೋದಾಗಿ ಘೋಷಿಸಿದ್ದರೂ ಆಚರಣೆಗೆ ಬಂದಿರಲಿಲ್ಲ. ಇದೇ ಕಾರಣಕ್ಕೆ ನೊಂದಿದ್ದ ಅಭಿಮಾನಿಗಳಿಗೆ ಸಿದ್ಧು ಸರ್ಕಾರ ಸಿಹಿಸುದ್ದಿ ನೀಡಿದೆ.

ಇದೇ ಅಕ್ಟೋಬರ್ 29 ಕ್ಕೆ ನಟ,ಗಾಯಕ ಪುನೀತ್ ರಾಜ್ ಕುಮಾರ್ ತಮ್ಮನ್ನು ಪ್ರೀತಿಸುವ ಅಭಿಮಾನಿಗಳು, ಕುಟುಂಬಸ್ಥರನ್ನು ಅಗಲಿ ಎರಡು ವರ್ಷ. ಪುನೀತ್ ನಿಧನವಾಗಿ ಎರಡು ವರ್ಷ ಕಳೆದರೂ ಇನ್ನೂ ಅಭಿಮಾನಿಗಳ ಪ್ರೀತಿ ಕಡಿಮೆಯಾಗಿಲ್ಲ. ಈಗಲೂ ಅಲ್ಲಲ್ಲಿ ಪುನೀತ್ ಪುತ್ಥಳಿ ನಿರ್ಮಾಣ, ರಕ್ತದಾನ, ಪಾರ್ಕ್ ಮರುನಾಮಕರಣ ಹೀಗೆ ಅಪ್ಪು ನೆನಪನ್ನು ಅಮರವಾಗಿಸುವ ಕೆಲಸಗಳು ನಡೆಯುತ್ತಲೇ ಇದೆ.

Karnataka Govt honors Puneeth Rajkumar CM Siddaramaiah declares Appu Spoorti dina on March 17
Image credit to Original Source

ಇದನ್ನೂ ಓದಿ : ಅನ್ನದಾತನ ಅಂಗಳದಲ್ಲಿ‌ ಪುನೀತ್‌ ರಾಜ್‌ ಕುಮಾರ್ : ರೈತನ ಅಭಿಮಾನಕ್ಕೆ ಮೆಚ್ಚಿದ ಅಪ್ಪು ಪತ್ನಿ ಅಶ್ವಿನಿ

ಈ‌ ಮಧ್ಯೆ ಅಪ್ಪು ನಿಧನದ ವೇಳೆ ಅಸ್ತಿತ್ವದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರದ ಸಿಎಂ ಬಸವರಾಜ್ ಬೊಮ್ಮಾಯಿ ಅಪ್ಪು ನೆನಪಿಗಾಗಿ ಅಪ್ಪು ಜನ್ಮದಿನವಾದ ಮಾರ್ಚ್ 17 ನ್ನು ಸ್ಪೂರ್ತಿ ದಿನವೆಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುಚುವುದಾಗಿ ಘೋಷಿಸಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸ್ಪೂರ್ತಿ ದಿನಾಚರಣೆ ಆಚರಿಸಿರಲಿಲ್ಲ.

ಈಗ ಚುನಾವಣೆ ಬಳಿಕ ಕಾಲ ಬದಲಾಗಿದ್ದು ಸರ್ಕಾರ ಕೂಡ ಬದಲಾಗಿದೆ. ಈ ಮಧ್ಯೆ ಮುಂದಿನ ವರ್ಷದಿಂದ ಅಪ್ಪು ಹುಟ್ಟುಹಬ್ಬದಂದು ಸ್ಪೂರ್ತಿ ದಿನಾಚರಣೆ ಆಚರಿಸಲಾಗುವುದೆಂದು ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ.

ಇದನ್ನೂ ಓದಿ : 3 ವರ್ಷದ ಬಳಿಕ ಅಣ್ಣನ ಸಿನಿಮಾ ರಾಜಾಮಾರ್ತಾಂಡ ಜೊತೆ ಬರ್ತಡೇ: ಧ್ರುವ ಸರ್ಜಾ ಅಭಿಮಾನಿಗಳಿಗೆ ಆಹ್ವಾನ

ಪಿಆರ್‌ಕೆ ಸ್ಟುಡಿಯೋ ಸೇರಿದಂತೆ ಅಭಿಮಾನಿಗಳ ಮುಂದಾಳತ್ವದಲ್ಲಿ ಡಾ.ಪುನೀತಗ ರಾಜ್‌ಕುಮಾರ್ ಸಂಗ್ರಹಣೀಯ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯನವರು, ಹಿಂದಿನ ಸರ್ಕಾರವಂತೂ ಮಾಡಿಲ್ಲ. ನಾವು ಈ ಭಾರಿ ಸ್ಪೂರ್ತಿ ದಿನಾಚರಣೆ ಆಚರಿಸುತ್ತೇವೆ ಎಂದು ಘೋಷಿಸಿದ್ದಾರೆ.

Karnataka Govt honors Puneeth Rajkumar CM Siddaramaiah declares Appu Spoorti dina on March 17
Image Credit to Original Source

ಪುನೀತ್ ರಾಜ್ ಕುಮಾರ್ ಬಗ್ಗೆ ಮನತುಂಬಿ ಮಾತನಾಡಿದ ಸಿಎಂ ಸಿದ್ಧರಾಮಯ್ಯನವರು ಪುನೀತ್ ರಾಜ್ ಕುಮಾರ್ ಕರ್ನಾಟಕ ಕಂಡ ಅಪರೂಪದ ವ್ಯಕ್ತಿತ್ವ. ಅಷ್ಟು ಸರಳ ಸಜ್ಜನಿಕೆಯ ವಿನಯವಂತ ವ್ಯಕ್ತಿಯನ್ನು ಕಾಣುವುದು ಅಪರೂಪ.ಇಡೀ ಕರ್ನಾಟಕದಲ್ಲಿ ಪುನೀತ್ ರಷ್ಟು ಅಭಿಮಾನಿಗಳನ್ನು ಪಡೆದಿದ್ದವರು ಯಾರೂ ಇಲ್ಲ ಎಂದರೇ ಅತಿಶಯೋಕ್ತಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ : ಸಿನಿಮಾ ಶೂಟಿಂಗ್ ಬ್ರೇಕ್ ನಲ್ಲಿ ಹೇಗಿರುತ್ತೆ ಮೇಘನಾ ರಾಜ್ ದಿನಚರಿ ? ಇಲ್ಲಿದೆ ಎಕ್ಸ್‌ಕ್ಲೂಸಿವ್ ವಿಡಿಯೋ

ಪುನೀತ್ ಸಾವು ಕೇವಲ ಅವರ‌ಕುಟುಂಬಕ್ಕೆ ಮಾತ್ರವಲ್ಲ ಕರ್ನಾಟಕಕ್ಕೆ ಆದ ನಷ್ಟ. ಅವರನ್ನು ಸದಾಕಾಲ ಸ್ಮರಿಸುವ ಕೆಲಸ ಸರ್ಕಾರದಿಂದ ಆಗಲಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಅಲ್ಲದೇ ಸ್ಪೂರ್ತಿ ಮುಂದಿನ ವರ್ಷದಿಂದ ಆಚರಿಸಲಿದ್ದೇವೆ ಎಂದು ಸಿದ್ಧು ಘೋಷಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಸಾವಿಗೆ ಎರಡು ವರ್ಷ ಸಂದಿದ್ದು ಅಕ್ಟೋಬರ್ 29 ರಂದು ಪುನೀತ್ ಎರಡನೇ ವರ್ಷದ ಪುಣ್ಯ ಸ್ಮರಣೆ ನಡೆಯಲಿದೆ. ಈಗಾಗಲೇ ಪುನೀತ್ ಸಮಾಧಿ ಸ್ಮಾರಕ ನಿರ್ಮಾಣ ಕಾರ್ಯವೂ ಆರಂಭಗೊಂಡಿದೆ.

ರಾಜ್ಯದಾದ್ಯಂತ ಹಲವೆಡೆ ಪುನೀತ್ ಸ್ಮರಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ರಾಯಚೂರಿನಲ್ಲಂತೂ ಸತ್ಯನಾರಾಯಣ್ಬ ರೈತ ತಮ್ಮ ಎಕರೆಗಟ್ಟಲೇ ಹೊಲದಲ್ಲಿ ಭತ್ತದಲ್ಲಿ ಪುನೀತ್ ರಾಜ್ ಕುಮಾರ್ ಮುಖ ಅರಳಿಸುವ ಮೂಲಕ ಪುನೀತ್ ಎರಡನೇ ಪುಣ್ಯ ತಿಥಿಯಂದು ಇದನ್ನು ಜನರ ವೀಕ್ಷಣೆಗೆ ಅರ್ಪಿಸಲಿದ್ದಾರಂತೆ.

ಒಟ್ಟಿನಲ್ಲಿ ಪುನೀತ್ ರಾಜ್ ಕುಮಾರ್ ಸಾವಿನ ಬಳಿಕವೂ ಕರ್ನಾಟಕದ ಮನೆ ಮನಗಳಲ್ಲಿ ಅಜರಾಮರವಾಗಿದ್ದು, ಈಗ ಸರ್ಕಾರ ಸ್ಪೂರ್ತಿ ದಿನಾಚರಣೆ ಮೂಲಕ ಯುವಕರಲ್ಲಿ ಪುನೀತ್ ಸಾಧನೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಬಿತ್ತುವಂತಹ ಪ್ರಯತ್ನ ಮಾಡಲಿದೆ.

Karnataka Govt honors Puneeth Rajkumar, CM Siddaramaiah declares Appu Spoorti dina (Inspiration Day) on March 17

Comments are closed.