Katrina Kaif : ಕತ್ರಿನಾ ಕೈಫ್ ಅಣ್ಣ ಒಲಿಂಪಿಕ್ಸ್ ಸ್ಟಾರ್ ಮೈಕೆಲ್ ಫೆಲ್ಪ್ಸ್‌ : Google ಮಹಾ ಎಡವಟ್ಟು

ಬಾಲಿವುಡ್ ನಟಿ ಕತ್ರಿನಾ ಕೈಫ್ ವಿಕ್ಕಿ ಕೌಸಲ್ ಜೊತೆ ಮದುವೆ ಆಗ್ತಾ ಇರೋದು ಸುದ್ದಿಯಾಗಿತ್ತು. ಆದ್ರೀಗ ಕತ್ರಿನಾ (Katrina Kaif) ತಮ್ಮ ಸಹೋದರರ ಹೆಸರಿನ ವಿಚಾರದಲ್ಲಿ ಬಾರೀ ಸುದ್ದಿಯಲ್ಲಿದ್ದಾರೆ. ಕತ್ರಿನಾ ‘ಸಹೋದರ’ ಒಲಿಂಪಿಕ್ಸ್ ಸ್ಟಾರ್ ಮೈಕೆಲ್ ಫೆಲ್ಪ್ಸ್ ಎಂದು ಗೂಗಲ್ ಹೇಳಿದೆ. ಗೂಗಲ್‌ನಲ್ಲಿ(Google) ಕತ್ರಿನಾ ಕೈಫ್‌ ಸಹೋದರ ಅಂತಾ ಟೈಮ್‌ ಮಾಡಿದ್ರೆ ಅಲ್ಲಿ ಮೈಕೆಲ್ ಫೆಲ್ಪ್ಸ್ ( Michael Phelps ) ಪೋಟೋ ತೋರಿಸುತ್ತಿದೆ. ಈ ವಿಚಾರ ಇದೀಗ ವೈರಲ್‌ ಆಗಿದೆ.

ಮೈಕೆಲ್ ಫೆಲ್ಪ್ಸ್ ಈಜಿನಲ್ಲಿ ಈಗಾಗಲೇ ಸಾಧನೆಯ ಶಿಖರವೇರಿದ್ದಾರೆ. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತನ ಹೆಸರು ಕೇಳದವರೇ ಬಲು ಅಪರೂಪ. ‘ಕತ್ರಿನಾ ಕೈಫ್ ಸಹೋದರ’ ಎಂಬ ಪದದ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ರೆ ಮೈಕೆಲ್ ಡ್ಯುರಾನ್ ಎಂದು ತೋರಿಸುತ್ತದೆ. ಆದರೆ ಆದರೆ ಬಾಲಿವುಡ್ ನಟಿ ಮತ್ತು ಚಾಂಪಿಯನ್ ಈಜುಗಾರ ಮೈಕೆಲ್ ಫೆಲ್ಪ್ಸ್‌ ಪೋಟೋವನ್ನು ತೋರಿಸುತ್ತಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಡಿಸೆಂಬರ್ 9 ರಂದು ಸವಾಯಿ ಮಾಧೋಪುರದಲ್ಲಿ ವಿವಾಹವಾಗಲಿದ್ದಾರೆ. ಕತ್ರಿನಾ ಕೈಫ್‌ ಅವರ ತಾಯಿ ಸುಝೇನ್ ಟರ್ಕೋಟ್, ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರು ಜೊತೆಗಿರುವ ಪೋಟೋ ವೈರಲ್‌ ಆಗಿದೆ.

ನಿರ್ದೇಶಕ ಕಬೀರ್ ಖಾನ್ ಅವರ ಮನೆಯಲ್ಲಿ ದೀಪಾವಳಿಯಂದು ಕತ್ರಿನಾ ಮತ್ತು ವಿಕ್ಕಿ ಕೌಶಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿವೆ. ಡಿಸೆಂಬರ್ 9 ರಂದು ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಎಂಬ ರಾಜಮನೆತನದಲ್ಲಿ ಇಬ್ಬರೂ ವಿವಾಹವಾಗಲಿದ್ದಾರೆ.

ಇದನ್ನೂ ಓದಿ : ಅರೇಸ ಡಂಕಣಕ ! ಬಿಡುಗಡೆಯಾಗಿದೆ ಪುನೀತ್ ರಾಜ್‌ಕುಮಾರ್ ಹಾಡಿರುವ ಹಾಡು ಕೇಳಿದ್ರಾ?

ಇದನ್ನೂ ಓದಿ : GGVV : ಗರುಡ ಗಮನ, ವೃಷಭ ವಾಹನ : ಶತಮಾನಗಳ ಜಾನಪದ ಹಾಡಿನ ಸಾಂಸ್ಕೃತಿಕ ಮೌಲ್ಯವನ್ನು ಹಿಂಸೆಯ ಸಂಭ್ರಮಕ್ಕೆ ಬದಲಾಯಿಸುವುದು ಸರಿಯೆ?

(Katrina Kaif ‘Brother’ Is Olympics Star Michael Phelps, Google says)

Comments are closed.