Corona Rules Break : ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಫೈನ್ : 14 ಕೋಟಿ ದಂಡ‌ ಸಂಗ್ರಹಿಸಿದ ಬಿಬಿಎಂಪಿ

ಕೊರೋನಾ ಮೂರನೇ ಅಲೆಯ ಭೀತಿಯಲ್ಲಿದ್ದ ರಾಜ್ಯಕ್ಕೆ ಓಮಿಕ್ರಾನ್ ಭೀತಿ ಎದುರಾಗಿದ್ದು ಸರ್ಕಾರ ಮತ್ತೆ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಿದ್ಧತೆಯಲ್ಲಿದೆ. ಮಾತ್ರವಲ್ಲದೇ ಈಗಾಗಲೇ ಜಾರಿಯಲ್ಲಿರೋ ಮಾಸ್ಕ್ ಕಡ್ಡಾಯ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸದವರಿಗೆ (Corona Rules Break) ದಂಡ ವಿಧಿಸುವ ಮೂಲಕ ಶಾಕ್ ನೀಡ್ತಿದೆ. ಬಿಬಿಎಂಪಿ ( BBMP ) ವ್ಯಾಪ್ತಿಯಲ್ಲೇ ಇದುವರೆಗೂ ಮಾಸ್ಕ್ ನಿಯಮ ಪಾಲಿಸದವರಿಂದ ಬಿಬಿಎಂಪಿ ಬರೋಬ್ಬರಿ 14.82 ಕೋಟಿ ರೂಪಾಯಿ ಫೈನ್ ಕಲೆಕ್ಟ್ ಮಾಡಿದೆ.

ರಾಜ್ಯದಲ್ಲಿ ನಿಧಾನಗತಿಯಲ್ಲಿ ಕೊರೋನಾ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರಕ್ಕೆ ಆತಂಕ ಹೆಚ್ಚಿದೆ.ರಾಜಕೀಯ ಕಾರ್ಯಕ್ರ‌ಮ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶದಲ್ಲಿ ಜನರು ಕಡ್ಡಾಯ ಮಾಸ್ಕ್ ನಿಯಮ ಪಾಲಿಸದೇ ಓಡಾಡಲಾರಂಭಿಸಿದ್ದು ಕೊರೋನಾ ಆತಂಕದ ಭಯವೇ ಮಾಯವಾದಂತಿದೆ. ಆದರೆ ರಾಜ್ಯ ರಾಜಧಾನಿ ಬಿಬಿಎಂಪಿ ಮಾರ್ಷಲ್ಗಳು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ಮೆರೆಯುವವರಿಗೆ ಬಿಸಿ ಮುಟ್ಟಿಸಲಾರಂಭಿಸಿದ್ದು ಸಾರ್ವಜನಿಕ ಸ್ಥಳದಲ್ಲಿ ಕೊರೋನಾ ನಿಯಮ ಉಲ್ಲಂಘಿಸುವವರಿಂದ 250 ರೂಪಾಯಿ ದಂಡ ವಸೂಲಿ ಮಾಡಲಾರಂಭಿಸಿದ್ದಾರೆ.

ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆ, ಯಶ್ವಂತಪುರ ಮಾರ್ಕೆಟ್, ಎಪಿಎಂಸಿ ಮಾರ್ಕೆಟ್ ,ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣದ ಹೊರಭಾಗಗಳಲ್ಲಿ ಬಿಬಿಎಂಪಿ ಮಾರ್ಷಲ್ ಗಳು ಮಾಸ್ಕ್ ಕಡ್ಡಾಯ ನಿಯಮವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದ್ದು, ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸಿ ಹಣ ಸಂಗ್ರಹಿಸಲಾಗುತ್ತಿದೆ.

250 ರೂ. ದಂಡದಂತೆ ಬಿಬಿಎಂಪಿ 4 ದಿನದಲ್ಲಿ ಸುಮಾರು 6 ಲಕ್ಷ 31 ಸಾವಿರದ 500 ರೂಪಾಯಿ ಹಣ ಸಂಗ್ರಹಿಸಿದೆ. ಅಂತರ ಪಾಲಿಸದವರಿಂದ 1,17,750 ರೂ. ಹಣ ದಂಡ ವಸೂಲಿ ಮಾಡಿದ್ದಾರೆ. ಒಟ್ಟಿನಲ್ಲಿ ಎಲ್ಲ ನಿಯಮಗಳಿಂದ ಒಟ್ಟು 7,49,250 ರೂಪಾಯಿ ದಂಡ ವಸೂಲಿಯಾಗಿದೆ. ಕೊರೋನಾ ನಿಯಮಗಳ ಉಲ್ಲಂಘನೆ ಮಾಡಿದವರಿಂದಲೇ ಇದುವರೆಗೂ ಬಿಬಿಎಂಪಿ ಅಧಿಕಾರಿಗಳು ಒಟ್ಟು 14,82,75,211 ರೂ. ವಸೂಲಿ ಮಾಡಿದ್ದಾರೆ.

ಕೇವಲ ದಂಡ ವಸೂಲಿ ಮಾತ್ರವಲ್ಲದೇ ಕೊರೋನಾ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಸರ್ಕಾರ ಮತ್ತೊಮ್ಮೆ ನೈಟ್ ಕರ್ಪ್ಯೂ ಪದ್ಧತಿ ಜಾರಿಗೆ ತರಲು ಚಿಂತನೆ ನಡೆಸಿದ್ದು ಇದಲ್ಲದೆ ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಮೇಲೂ‌ ನಿರ್ಬಂಧ ಹೇರುವ ಸಾಧ್ಯತೆ ಇದೆ. ಇಂದು ಕೂಡಾ ಬೆಂಗಳೂರಿನ ಮಾರುಕಟ್ಟೆಗಳಿಗೆ ಮಾಸ್ಕ್ ಹಾಕದೆ ಬರುವ ಜನರಿಗೆ ಬಿಬಿಎಂಪಿ ದಂಡ ವಿಧಿಸುತ್ತಿದೆ. ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್​ ಧರಿಸದವರಿಗೆ 250 ರೂ. ದಂಡ ಹಾಕುತ್ತಿದ್ದಾರೆ.

ಇದನ್ನೂ ಓದಿ : ಓಮಿಕ್ರಾನ್​ ಸೋಂಕಿಗೆ ಇತ್ತೀಚಿಗೆ ಒಳಗಾದ ರಾಷ್ಟ್ರಗಳು ಯಾವುವು ಗೊತ್ತಾ..? ಸಾವಿನ ಪ್ರಮಾಣದ ಬಗ್ಗೆ ವಿಶ್ವಸಂಸ್ಥೆ ಹೇಳಿದ್ದೇನು..? ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಚಿಕ್ಕಮಗಳೂರಿನ ವಸತಿ ಶಾಲೆಯ 40 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಇದನ್ನೂ ಓದಿ : ಕೊರೋನಾ ಎರಡನೇ ಅಲೆ ನಡುವೆಯೇ ಡೆಲ್ಟಾ ಪ್ಲಸ್ ಭೀತಿ…! ಅತ್ಯಂತ ಅಪಾಯಕಾರಿಯಂತೆ ಈ ವೈರಸ್….!!

(Corona Rules Break is Fine, BBMP collected Rs 14 crore fine)

Comments are closed.