Kannada Upcoming Films: ಬರ್ತಿವೆ ಬಿಗ್ ಸ್ಟಾರ್ ಚಿತ್ರಗಳು…2021ರ ಅಂತ್ಯದಲ್ಲಿ ಚಿತ್ರಮಂದಿರಕ್ಕೆ ಹೋಗಲು ಕಾರಣಗಳಿವು

ಡಿಸೆಂಬರ್ ತಿಂಗಳಲ್ಲಿ ಸಾಲು ಸಾಲು ಚಿತ್ರಗಳು (Kannada Upcoming Films) ಬಿಡುಗಡೆಗೆ ನಿಂತುಕೊಂಡಿವೆ. ಈ ಹಿಂದೆ ಅಕ್ಟೋಬರ್ ನ ದಸರಾ, ದೀಪಾವಳಿಗಳು ಬಂದರೆ ಸಿನಿಮಾ ಹಬ್ಬ ಶುರುವಾಗಿಬಿಡೋದು. ಆದರೆ, ಈ ಸಲ ಕೋವಿಡ್ ಕಾಟದಿಂದಾಗಿ ಸೆಟ್ಟೇರಿದ ಸಿನಿಮಾಗಳು ಮುಗಿದಿಲ್ಲ. ಪೂರೈಸಿದ ಸಿನಿಮಾಗಳು ಬಿಡುಗಡೆಗೆ ಯೋಚಿಸುತ್ತಿವೆ. ಇವೆಲ್ಲದರ ಮಧ್ಯೆಯೂ, ದರ್ಶನ್ ಅಭಿನಯದ ರಾಬರ್ಟ್, ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ್ದವು.


ನವೆಂಬರ್ ಕೊನೆವಾರದಲ್ಲಿ, ಗರುಡ ಗಮನ ವೃಷಭವಾಹನ, ಡಿಸೆಂಬರ್ ಮೊದಲ ವಾರದಲ್ಲಿ ಮದಗಜಗಳು ತೆರೆಕಂಡಿವೆ. ಗರುಡ ಗಮನ ನಿರೀಕ್ಷಿತ ಮಟ್ಟವನ್ನು ಮೀರಿ ಹಿಟ್ ಮೇಲೆ ಅವರೇಕಾಳಾಗಿದೆ. ರಮೇಶ್ ಅಭಿನಯದ 100 ಜನ ಮೆಚ್ಚುಗೆ ಗಳಿಸಿ ಯಶಸ್ವಿಯಾಗಿ ಓಡುತ್ತಿದೆ. ಇದ್ದಕ್ಕಿದ್ದಂತೆ ಎದ್ದು ಬಂದ ಗಣೇಶ್ ಅಭಿನಯದ ಸಖತ್ ಸುದ್ದಿಮಾಡಿದೆ. ಇನ್ನು ಡಿಸೆಂಬರ್ 10ಕ್ಕೆ ಶರಣ್ ಅಭಿನಯದ ಅವತಾರ್ ಪುರುಷ, ಬಡವ ರಾಸ್ಕಲ್ ಒಟ್ಟೊಟ್ಟಿಗೆ ತೆರೆಗೆ ನಿಲ್ಲಲು ಸಿದ್ದವಾಗಿದೆ. ರಚಿತಾ ರಾಮ್ ಅಭಿನಯದ ಐ ಲವ್ ಯೂ ರಚ್ಚು ಡಿಸೆಂಬರ್ 31ಕ್ಕೆ ತೆರೆಗೆ ಬರಲಿದೆ. ಈ ಮಧ್ಯೆ ಜಗ್ಗೇಶ್ ಅಭಿನಯದ ತೋತಾಪುರಿ ತೆರೆಗೆ ತರುವ ಮಾತುಗಳು ಕೇಳಿಬರುತ್ತಿವೆಯಾದರೂ, ಯಾವತ್ತೂ ಅನ್ನೋದು ಇನ್ನೂ ನಿಗದಿಯಾಗಿಲ್ಲ. ಡಿಸೆಂಬರ್ 24 ರಂದು ನಿಖಿಲ್ ಕುಮಾರಸ್ವಾಮಿ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ ರೈಡರ್ ಕೂಡ ತೆರೆಕಾಣಲು ಸಿದ್ಧವಾಗಿದೆ.

ಐ ಲವ್‌ಯೂ ರಚ್ಚು, ಹೊಸ ವರ್ಷ ಜನವರಿ 1, 2022 ಮತ್ತು ಸುತ್ತಮುತ್ತಲ ರಜೆಯನ್ನು ಗುರಿಯಾಗಿಸಿಕೊಂಡಿದ್ದರೆ, ರೈಡರ್ ಚಿತ್ರವನ್ನು ಕ್ರಿಸ್‌ಮಸ್ ರಜೆಯನ್ನು ಕೇಂದ್ರವಾಗಿರಿಸಿಕೊಂಡು ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.

ಹಾಗೆ ನೋಡಿದರೆ, 2019ರಲ್ಲಿ ಬಿಡುಗಡೆಗೊಂಡ ಸೀತಾರಾಮ ಕಲ್ಯಾಣದ ನಂತರ ನಿಖಿಲ್ ಕುಮಾರಸ್ವಾಮಿ ಅವರ ಯಾವಚಿತ್ರವೂ ಬಿಡುಗಡೆಯಾಗಿಲ್ಲ. ಕುರುಕ್ಷೇತ್ರದಲ್ಲಿ ಅವರು ಪೂರ್ಣ ಪ್ರಮಾಣದ ನಾಯಕನಾಗಿರಲಿಲ್ಲ. ಸೀತಾರಾಮ ಕಲ್ಯಾಣದ ನಂತರ ನಿಖಿಲ್ ರೈಡರ್ ಒಪ್ಪಿಕೊಂಡಿದ್ದರಾದರೂ, ಲಾಕ್ ಡೌನ್‌ನಿಂದ ಚಿತ್ರೀಕರಣವಾಗಿರಲಿಲ್ಲ. ಮೂರು ವರ್ಷಗಳ ಸುದೀರ್ಘ ಅಂತರದ ನಂತರ ನಿಖಿಲ್ ಅಭಿನಯದ ರೈಡರ್ ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೇ ಬಿಡುಗಡೆಯಾಗಲು ಸಿದ್ಧವಾಗಿದೆ.

ರೈಡರ್ ಚಿತ್ರದ ನಾಯಕಿಯಾಗಿ ಕಾಶ್ಮೀರಾ ಪರದೇಸಿ ನಟಿಸಿದ್ದಾರೆ, ದತ್ತಣ್ಣ, ಚಿಕ್ಕಣ್ಣ, ರಾಜೇಶ್ ನಟರಂಗ ಅವರ ಅಭಿನಯವಿದೆ. ಚಿತ್ರಕ್ಕೆ ಸಂಗೀತ ಅರ್ಜುನ್ ಜನ್ಯ ಅವರದ್ದು. ವಿಜಯ್ ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಂದ್ರು ಮನೋಹರ್ ನಿರ್ಮಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಬಿಗ್ ಸ್ಟಾರ್ ಚಿತ್ರಗಳು ಪ್ರೇಕ್ಷಕರನ್ನು ಮನರಂಜಿಸಲಿವೆ.

ಇದನ್ನೂ ಓದಿ: Aresa Dankanaka : ಅರೇಸ ಡಂಕಣಕ ! ಬಿಡುಗಡೆಯಾಗಿದೆ ಪುನೀತ್ ರಾಜ್‌ಕುಮಾರ್ ಹಾಡಿರುವ ಹಾಡು ಕೇಳಿದ್ರಾ?

ಇದನ್ನೂ ಓದಿ : Puneeth Rajkumar dream project Gandhada Gudi : ಪುನೀತ್ ರಾಜ್ ಕುಮಾರ್ ಕನಸು : ಗಂಧದಗುಡಿ ಟೀಸರ್ ತೆರೆಗೆ

(Kannada Upcoming Films hit to theatre in 2021 year end)

Comments are closed.