KCN Mohan passes away : ಸ್ಯಾಂಡಲ್‌ವುಡ್‌ ಹಿರಿಯ ನಿರ್ಮಾಪಕ ಕೆಸಿಎನ್‌ ಮೋಹನ್‌ ಇನ್ನಿಲ್ಲ

ಕನ್ನಡ ಸಿನಿರಂಗದಲ್ಲಿ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿ, ಪ್ರದರ್ಶಕರಾಗಿಯೂ ಗುರುತಿಸಿಕಂಡಿದ್ದ ಕೆಸಿಎನ್‌ ಮೋಹನ್‌ (KCN Mohan passes away) ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಕೆಸಿಎನ್‌ ಮೋಹನ್‌ ಆವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೋಹನ್‌ ಅವರು ಸಾವನ್ನಪ್ಪಿದ್ದಾರೆ.

ನವರಂಗ್‌, ಊರ್ವಶಿ ಸಿನಿಮಂದಿರಗಳ ಮಾಲೀಕರಾಗಿರುವ ಇವರು ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದರು. ಅಷ್ಟೇ ಅಲ್ಲದೇ ಚಿತ್ರ ವಿತರಣೆ ಉದ್ಯಮದಲ್ಲಿಯೂ ಸಕ್ರಿಯರಾಗಿದ್ದರು. ಕೆಸಿಎನ್‌ ಮೋಹನ್‌ ಅವರು ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ ಆರಾಮ ಆಗಿ ಮರಳಿದ್ದರು. ಆದರೆ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆ ನೋವಿನ ಕಾರಣದಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಈ ಬಾರಿ ಚಿಕಿತ್ಸೆ ಫಲಕಾರಿಯಾಗದೇ ಇಂದು (ಜುಲೈ 2) ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Kiccha 46 Teaser : ಸ್ಯಾಂಡಲ್‌ವುಡ್‌ ನಟ ಸುದೀಪ್‌ ಅಭಿನಯದ ಕಿಚ್ಚ 46 ಟೀಸರ್‌ ರಿಲೀಸ್‌

ಇದನ್ನೂ ಓದಿ : Jo Lindner died‌ : ಪೊಗರು ಸಿನಿಮಾ ಖ್ಯಾತಿಯ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ ಸಾವು

ಮೃತ ಮೋಹನ್‌ ಅವರು ಪತ್ನಿ ಪೂರ್ಣಿಮಾ ಅವರನ್ನು ಕೆಲ ವರ್ಷಗಳ ಹಿಂದೆಯಷ್ಟೇ ಕಳೆದುಕೊಂಡಿದ್ದರು. ಇದೀಗ ಅವರು ಓರ್ವ ಪುತ್ರ ಹಾಘೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

KCN Mohan passes away : Senior Sandalwood producer KCN Mohan is no more

Comments are closed.