India Split Captaincy: ವಿಶ್ವಕಪ್ ನಂತರ ರೋಹಿತ್ ಶರ್ಮಾ ನಿವೃತ್ತಿ, ಭಾರತಕ್ಕೆ ಇಬ್ಬರು ಕ್ಯಾಪ್ಟನ್ಸ್; ಬಿಸಿಸಿಐ ಮೆಗಾ ಪ್ಲಾನ್

ಬೆಂಗಳೂರು: (India Split Captaincy) ಐಸಿಸಿ ಏಕದಿನ ವಿಶ್ವಕಪ್ (ICC men’s ODI World Cup) ಟೂರ್ನಿಯ ನಂತರ ಟೀಮ್ ಇಂಡಿಯಾದ ಇಬ್ಬರು ನಾಯಕರು ಬರಲಿದ್ದಾರೆ.ಈ ಬಾರಿಯ ಏಕದಿನ ವಿಶ್ವಕಪ್ ಮುಂದಿನ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿದ್ದು, ವಿಶ್ವಕಪ್ ನಂತರ ನಾಯಕ ರೋಹಿತ್ ಶರ್ಮಾ (Rohit Sharma) ಟಿ20 ಕ್ರಿಕೆಟ್’ನಿಂದ ನಿವೃತ್ತಿಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ನಾಯಕತ್ವವನ್ನೂ ಬಿಟ್ಟುಕೊಡಲಿದ್ದಾರೆ.

ಮುಂದಿನ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಾರಿಯ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯಲಿದ್ದು, ವಿಶ್ವಕಪ್ ನಂತರ ನಾಯಕ ರೋಹಿತ್ ಶರ್ಮಾ (Rohit Sharma) ಟಿ20 ಕ್ರಿಕೆಟ್’ನಿಂದ ನಿವೃತ್ತಿಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ನಾಯಕತ್ವವನ್ನೂ ಬಿಟ್ಟುಕೊಡಲಿದ್ದಾರೆ. ಹೀಗಾಗಿ ಟೆಸ್ಟ್ ತಂಡದ ನಾಯಕತ್ವವನ್ನು ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರಿಗೆ ವಹಿಸಲು ಬಿಸಿಸಿಐ ಪ್ಲಾನ್ ಮಾಡ್ತಿದೆ. ಏಕದಿನ ತಂಡದ ನಾಯಕತ್ವವನ್ನು ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ (Hardik Pandya) ಕಟ್ಟಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಏಕದಿನ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಪ್ರತ್ಯೇಕ ನಾಯಕರನ್ನು ನೇಮಕ ಮಾಡಲು ಬಿಸಿಸಿಐ ಮುಂದಾಗಿದೆ ಎಂದು ತಿಳಿದು ಬಂದಿದೆ.

“ಖಂಡಿತಾ ಈ ಪ್ಲಾನ್ ಬಿಸಿಸಿಐ ಮುಂದೇ ಇದ್ದೇ ಇದೆ. ನಾಯಕತ್ವದ ಬಗ್ಗೆ ವಿಶ್ವಕಪ್ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಶ್ವಕಪ್ ಟೂರ್ನಿಯ ನಂತರ ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಹಾರ್ದಿಕ್ ಪಾಂಡ್ಯಗೆ ಏಕದಿನ ತಂಡದ ಉಪನಾಯಕನ ಜವಾಬ್ದಾರಿ ನೀಡಲಾಗಿದ್ದು, ಅವರೇ ರೋಹಿತ್ ಉತ್ತರಾಧಿಕಾರಿಯಾಗುವ ಸಾಧ್ಯತೆಯಿದೆ. ಟೆಸ್ಟ್ ತಂಡದ ಉಪನಾಯಕ ಕೆ.ಎಲ್ ರಾಹುಲ್’ಗೆ ರೋಹಿತ್ ನಂತರ ಟೆಸ್ಟ್ ನಾಯಕತ್ವ ವಹಿಸುವ ಚಿಂತನೆ ಬಿಸಿಸಿಐ ಮುಂದಿದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೀಗ 36 ವರ್ಷ ವಯಸ್ಸು. ಹೀಗಾಗಿ ಭಾರತ ತಂಡದ ಭವಿಷ್ಯದ ದೃಷ್ಟಿಯಿಂದ ನಾಯಕತ್ವದಿಂದ ರೋಹಿತ್ ಶರ್ಮಾ ಕೆಳಗಿಳಿಯಲಿದ್ದಾರೆ. ಅಷ್ಟೇ ಅಲ್ಲ, ಅಂತರಾಷ್ಟ್ರೀಯ ಟಿ20ಗೆ ವಿದಾಯ ಹೇಳುವ ಸಾಧ್ಯತೆಯಿದೆ. ಮುಂದಿನ ಒಂದೆರಡು ವರ್ಷ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಆಡಲು ರೋಹಿತ್ ಶರ್ಮಾ ನಿರ್ಧರಿಸಿದ್ದು, ಯುವ ನಾಯಕರ ನಾಯಕತ್ವದಲ್ಲಿ ಆಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಪ್ರಿನ್ಸ್ ಶುಭಮನ್ ಗಿಲ್’ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : Virat Kohli 25000 Runs : ಇವತ್ತೇ 25 ಸಾವಿರದ ಮೈಲುಗಲ್ಲು ನೆಡ್ತಾರಾ ಕಿಂಗ್ ಕೊಹ್ಲಿ? 25000ಕ್ಕೆ ಬೇಕು 111 ರನ್

ಇದನ್ನೂ ಓದಿ : Karnataka under 14 cricket team : ಕರ್ನಾಟಕ ಅಂಡರ್-14 ತಂಡಕ್ಕೆ ರಾಹುಲ್ ದ್ರಾವಿಡ್ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ನಾಯಕ

India Split Captaincy: Rohit Sharma retires after World Cup, two captains for India; BCCI mega plan

Comments are closed.