Nani : ತೆಲುಗು ನಟ ನಾನಿ: ಕನ್ನಡಿಗರ ಮನಸ್ಸಿಗೆ ನೋವು ಮಾಡುವ ಉದ್ದೇಶ ನನಗಿಲ್ಲ: ಅವರ ತೆಲುಗು ಭಾಷಾಭಿಮಾನವನ್ನು ಹೊಗಳುವುದೇ ಆಗಿತ್ತು

ನಾನಿ(Nani) ತಕ್ಷಣ ಕ್ಷಮೆ ಕೇಳಬೇಕು. ತೆಲುಗು ಹೀರೋಗಳು ತಮ್ಮ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ನೋಡಬೇಕಾದರೆ, ನಮ್ಮದೇ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಿ. ಅದು ಬಿಟ್ಟು ಕನ್ನಡ ಭಾಷಿಕರ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಟ್ವಿಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ನಡೆದ ‘ಅಂತೆ ಸುಂದರಾನಿಕಿ’ ಟೀಸರ್ ಬಿಡುಗಡೆ ವೇಳೆ ನಟ ನಾನಿಗೆ ನಿಮ್ಮ ಸಿನಿಮಾವನ್ನು ಏಕೆ ಕನ್ನಡದಲ್ಲಿ ಡಬ್ ಮಾಡಿಲ್ಲ ಎಂದು ಪ್ರಶ್ನೆ ಎದುರಾಯಿತು. ಆಗ ನಾನಿ, ‘ಕನ್ನಡ ಪ್ರೇಕ್ಷಕರು ತೆಲುಗು ಸಿನಿಮಾವನ್ನು ಅದರ ಭಾಷೆಯಲ್ಲೇ ನೋಡುತ್ತಾರೆ. ಕನ್ನಡಿಗರಿಗೆ ತೆಲುಗು ಅರ್ಥವಾಗುತ್ತದೆ. ಅವರು ತೆಲುಗು ಸಿನಿಮಾವನ್ನು ತೆಲುಗಿನಲ್ಲಿ ನೋಡುವುದಕ್ಕೆ ಇಷ್ಟಪಡುತ್ತಾರೆ. ಹೀಗಾಗಿ ಡಬ್ ಮಾಡುವ ಅವಶ್ಯಕತೆ ಬರಲಿಲ್ಲ’ ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಅನೇಕರು ಕಾಮೆಂಟ್ ಮಾಡಿ, ನಮಗೆ ತೆಲುಗು ಅರ್ಥವಾಗುವುದಿಲ್ಲ. ತೆಲುಗು ಹೀರೋಗಳಿಗೆ ಕನ್ನಡ ಪ್ರೇಕ್ಷಕರೂ ಬೇಕು ಅಂತಾದರೆ ಕನ್ನಡಕ್ಕೆ ಡಬ್ ಮಾಡಿ ಎಂದು ಖಾರವಾಗಿ ಪ್ರತಿಕ್ರಯಿಸಿದ್ದಾರೆ. ಇದರಿಂದ ಅಧೀರರಾದ ನಾನಿ ತಾವು ಮಾತನಾಡಿದ್ದ ಉದ್ದೇಶ ಏನು ಎಂಬುದನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : CBSE Class 10 boards 2022 : ಸಿಬಿಎಸ್​ಇ 10ನೇ ತರಗತಿ ವಿದ್ಯಾರ್ಥಿಗಳ ಕೊನೆ ಕ್ಷಣದ ಪರೀಕ್ಷಾ ತಯಾರಿ ಹೀಗಿರಲಿ

‘ನಾನು ಹೇಳಿದ್ದು, ಕನ್ನಡಗರ ಹೃದಯವೈಶಾಲ್ಯತೆಯ ಬಗ್ಗೆ. ನನ್ನ ಹಾಗೂ ನಮ್ಮೆಲ್ಲರ ತೆಲುಗು ಸಿನಿಮಾಗಳನ್ನು ಕನ್ನಡಿಗ ಕುಟುಂಬ ಡಬ್ಬಿಂಗ್ ಇಲ್ಲದೆಯೇ ನೋಡಿ, ಬೆನ್ನುತಟ್ಟಿ ಪ್ರೋತ್ಸಾಹಿಸಿದೆ ಎಂದು ನಾನು ಹೇಳಿದ್ದು. ಆದರೆ, ಸಾಮಾಜಿಕ ಜಾಲತಾಣದಲ್ಲಿ ನನ್ನ ಉತ್ತರವನ್ನು ತಿರುಚಿ ಪ್ರಕಟಮಾಡಿ ಕನ್ನಡಿಗರ ಮನಸ್ಸಿಗೆ ಘಾಸಿ ಉಂಟು ಮಾಡಿದೆ’ ನಾನಿ ಸ್ಪಷ್ಟನೆ ನೀಡಿದ್ದಾರೆ.

ನಾನಿ ಹೇಳುವ ಪ್ರಕಾರ, ಕನ್ನಡಿಗರಿಗೆ ನೋವುಂಟುಮಾಡುವುದು ತನ್ನ ಮಾತಿನ ಉದ್ದೇಶ ಆಗಿರಲಿಲ್ಲ. ಬದಲಿಗೆ ಕನ್ನಡಿಗರಲ್ಲಿರುವ ತೆಲುಗಿನ ಅಭಿರುಚಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುವುದೇ ಆಗಿತ್ತು ಎನ್ನುವ ಅಂಶವನ್ನು ಒತ್ತಿ ಹೇಳುವ ಮೂಲಕ ವಿವಾದಕ್ಕೆ ಇತಿಶ್ರೀ ಹೇಳುವ ಪ್ರಯತ್ನವನ್ನು ನಟ ನಾನಿ ಮಾಡಿದ್ದಾರೆ.

ಇದನ್ನೂ ಓದಿ :Pan India: ದುನಿಯಾ ಸೂರಿ : ಚರಿತ್ರೆ ತಿಳಿದಿಲ್ಲ ಅಂದರೆ ಪಾನ್ ಇಂಡಿಯಾ ಅನ್ನೋ ಪದ ಹುಟ್ಟುತ್ತದೆ!

(Nani Telugu Actor Nani has given clarification of his hurt by his comments)

Comments are closed.