Summer Sarees: ನಿಮಗೆ ಸೀರೆ ಇಷ್ಟವೇ? ಹಾಗಾದರೆ ಸ್ಟೈಲಿಶ್‌ ಆಗಿ ಕಾಣಿಸುವಂತಹ 5 ವಿಧದ ಸೀರೆಗಳ ಪರಿಚಯ ಇಲ್ಲಿದೆ

ಯಾವುದೇ ಭಾರತೀಯರ ಮನೆಯ ಕಪಾಟುಗಳನ್ನು ಒಮ್ಮೆ ನೋಡಿ, ಅಲ್ಲಿ ಸೀರೆಗೆ (Summer Saree)ಪ್ರಮುಖ ಸ್ಥಾನ. ಕೆಲವೊಮ್ಮೆ ಅವು ತಲೆಮಾರುಗಳ ಮೂಲಕ ಹಾದು ಹೋಗುವ ಚರಾಸ್ತಿಯ ಸಂಪತ್ತುಗಳಾಗಿವೆ. ನಮ್ಮ ಬಟ್ಟೆಗಳ ಆಯ್ಕೆ ಋತುಮಾನಗಳಿಗೆ ತಕ್ಕಂತೆ ಮತ್ತು ಕೆಲವೊಮ್ಮೆ ಟ್ರೆಂಡ್‌ಗಳಂತೆ ಬದಲಾಗುತ್ತಲೇ ಇರುತ್ತವೆ. ಆದರೆ ಯಾವು ಬಟ್ಟೆ ಹಾಗೇಯೇ ಇರುತ್ತದೆ ಎಂದರೆ ಅದು ಸೀರೆಗಳು. ಎಥ್ನಿಕ್‌ ವೇರ್‌ ಸೀರೆಗಳು ಖಂಡಿತವಾಗಿಯೂ ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ.

ನಗರಗಳಲ್ಲಿ ಸಂಪೂರ್ಣವಾಗಿ ಬೇಸಿಗೆಯು ಆವರಿಸುತ್ತಿದೆ ಮತ್ತು ತಾಪಮಾನವೂ ನಿರಂತರವಾಗಿ ಏರುತ್ತಲೇ ಇದೆ. ಇಂತಹ ಸಮಯದಲ್ಲಿ ಎಲ್ಲರೂ ತಂಪೆನಿಸುವ ಮತ್ತು ಆರಾಮದಾಯಕವಾದ ಉಡುಗೆಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಆದರೆ ಈ ಆರಾಮದಾಯಕ ಉಡುಗೆಗಳೂ ಸಹ ಸ್ಟೈಲಿಶ್‌ ಆಗಿ ಕಾಣಬೇಕಲ್ಲವೇ? ಅದಕ್ಕೆ ಸೀರೆ ಉತ್ತಮ ಆಯ್ಕೆ ಆಗಬಹುದು.

ನಿಮಗೆ ಸೀರೆ ಇಷ್ಟವೇ? ಹಾಗಾದರೆ ಆರಾಮದಾಯಕವೆನಿಸುವ ಮತ್ತು ಅಷ್ಟೇ ಸ್ಟೈಲಿಶ್‌ ಆಗಿ ಕಾಣಿಸುವಂತಹ 5 ಬಗೆಯ ಸೀರೆಗಳು :

1 ಕಾಟನ್‌ ಸೀರೆಗಳು
ಬೇಸಿಗೆಯ ಫ್ಯಾಶನ್‌ ಸೀರೆ ಎಂದರೆ ಕಾಟನ್‌ ಸೀರೆಗಳು. ಇದು ಅತ್ಯಂತ ಆರಾಮದಾಯಕವಾಗಿದ್ದು ಧರಿಸಲೂ ಸುಲಭ. ಶುದ್ಧ ಮತ್ತು ಮಿಶ್ರಿತ ಕಾಟನ್‌ ಸೀರೆಗಳು ಎಂಬ ವಿಧಗಳಲ್ಲಿ ಮಾರುಕಟ್ಟೆಯಲ್ಲಿ ಈ ಸೀರೆಗಳು ಭಾರೀ ಬೇಡಿಕೆ ಪಡೆದುಕೊಂಡಿವೆ. ಸಿಂಪಲ್‌ ಕಾಟನ್‌ ಸೀರೆಗಳು ಮನಮೋಹಕವಾಗಿ ಕಾಣಿಸುತ್ತವೆ.

2 ಶಿಫಾನ್‌ ಸೀರೆಗಳು
ಸುಲಭವಾಗಿ ಗಾಳಿಗೆ ಹಾರಾಡಬಲ್ಲ ಶಿಫಾನ್‌ ಸೀರೆಗಳು ಹಗುರವಾದ ಸೀರೆಗಳು ಸೌಂದರ್ಯವನ್ನು ಹೆಚ್ಚಿಸಿ ಆಕರ್ಷಕವಾಗಿ ಕಾಣಿಸುತ್ತದೆ. ಬಹಳ ತೆಳುವಾದ ನೂಲುಗಳಿಂದ ಮಾಡಿದ ಸೀರೆಗಳು ಧರಿಸಿದರೆ ದೇಹಕ್ಕೆ ಅಂಟಿಕೊಡಂತೆ ಅನಿಸುತ್ತದೆ. ಸೌಂದರ್ಯದ ಕಾಳಜಿ ಇರುವವರು ಹೆಚ್ಚಾಗಿ ಈ ಸೀರೆಯನ್ನೇ ಆಯ್ದುಕೊಳ್ಳುತ್ತಾರೆ.

3 ಹೂವುಗಳ ಪ್ರಿಂಟ್‌ ಇರುವ ಸೀರೆಗಳು (ಫ್ಲೋರಲ್‌ ಪ್ರಿಂಟ್‌ ಸೀರೆಗಳು)
ಬೇಸಿಗೆ ಮತ್ತು ವಸಂತ ಋತುಗಳಲ್ಲಿ ಅತಿಯಾಗಿ ಇಷ್ಟ ಪಡುವ ಸೀರೆ ಇದಾಗಿದೆ. ಸೂಕ್ಷ್ಮ ಕಾಣಿಸುವ ಹೂವುಗಳಿರುವ ಮತ್ತು ತಾಜಾತನದಿಂದ ಹೂವುಗಳಿರುವ ಪ್ರಿಂಟ್‌ ಸೀರೆಗಳು ಹೆಚ್ಚು ಆಕರ್ಷಕವಾಗಿರುತ್ತವೆ. ಹೆಚ್ಚಾಗಿ ಹಳದಿ, ಗುಲಾಬಿ, ಹಸಿರು ಮತ್ತು ಬಿಳಿಯ ಬಣ್ಣದ ಹೂವುಗಳಿರುವ ಸೀರೆಗಳು ಬೇಸಿಗೆಗೆಂದೇ ಕೆಲವರ ಕಪಾಟುಗಳಲ್ಲಿ ಅಚ್ಚುಕಟ್ಟಾಗಿ ಕುಳಿತಿರುತ್ತವೆ.

4 ರಾ ಸಿಲ್ಕ್‌ ಸೀರೆಗಳು
ಹಬ್ಬ ಹರಿದಿನಗಳೇ ಇರಲಿ ಅಥವಾ ಬೇಸಿಗೆಯ ಮದುವೆಗಳೇ ಇರಲಿ, ರೇಷ್ಮೆ ಸೀರೆಗಳ ಬದಲಿಗೆ ಹಗುರವಾದ ರೇಷ್ಮೆ ರೂಪದ ರಾ ಸಿಲ್ಕ್‌ಗಳೇ ಉತ್ತಮ. ರಾ ಸಿಲ್ಕ್‌ ಸೀರೆಗಳು ರೇಷ್ಮೆ ಸೀರೆಗಳಷ್ಟೇ ನೋಡಲು ಅಂದವಾಗಿದ್ದು, ಆಕರ್ಷಕವಾಗಿ ಕಾಣಿಸುತ್ತವೆ. ರೇಷ್ಮೆ ಸೀರೆಗಳಿಗಿಂತ ಹಗುರವಾಗಿದು ಹೆಚ್ಚು ಆರಾಮದಾಯಕವಾಗಿದೆ.

5 ಲೇಸ್‌ ಸೀರೆಗಳು
ಬಾಲಿವುಡ್‌ನ ಮತ್ತು ನಮ್ಮೆಲರ ಈಗಿನ ಫೆವರೆಟ್‌ ಸೀರೆ ಯಾವುದು ಎಂದು ನಿಮಗೆ ಗೊತ್ತೇ? ಆಕರ್ಷಕ ಮತ್ತು ಸುಂದರವಾಗಿ ಕಾಣಿಸುವುದೇ ಲೇಸ್‌ ಸೀರೆಗಳು. ಮದುವೆ, ಹಬ್ಬ, ಪಾರ್ಟಿಗಳಿಗೆ ಲೇಸ್‌ ಸೀರೆಗಳು ತಪ್ಪು ಆಯ್ಕೆ ಆಗಿರಲು ಸಾಧ್ಯವೇ ಇಲ್ಲ. ಲೇಸ್‌ ಸೀರೆಗಳಲ್ಲಿ ಹೆಚ್ಚಾಗಿ ಕೆಂಪು, ತಿಳಿ ಗುಲಾಬಿ ಮತ್ತು ಐವರಿ ಬಣ್ಣಗಳು ಟ್ರೆಂಡ್‌ ಅನ್ನೇ ಸೃಷ್ಟಿಸಿವೆ.

ಇದನ್ನೂ ಓದಿ : Best Places in Bangalore: ಬೆಂಗಳೂರಿನ ಅತ್ಯುತ್ತಮ 5 ಪ್ರವಾಸಿ ತಾಣಗಳಿವು; ಪ್ರವಾಸಕ್ಕೆಂದು ಪ್ಯಾಕ್ ಮಾಡುವ ಮುನ್ನ ಈ ಮಾಹಿತಿ ತಿಳಿದಿರಲಿ

ಇದನ್ನೂ ಓದಿ : Best fruit face packs : ಬೇಸಗೆಯಲ್ಲಿ ಈ ಹಣ್ಣಿನ ಫೇಸ್ ಪ್ಯಾಕ್ ಬಳಸಿ; ಚರ್ಮದ ಸಮಸ್ಯೆಗಳಿಗೆ ಗುಡ್ ಬೈ ಹೇಳಿ

(Summer Sarees 5 best summer stylish sarees)

Comments are closed.