ದಸರಾ ಹಬ್ಬಕ್ಕೆ ಧೂಳೆಬ್ಬಿಸುತ್ತಾ ಕೆಜಿಎಫ್ ಚಾಪ್ಟರ್-2

0

ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಅಭಿಮಾನಿಗಳು ಎದುರು ನೊಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇಷ್ಟರಲ್ಲೇ ಸಿನಿಮಾ ತೆರೆಗೆ ಬರಬೇಕಾಗಿತ್ತು. ಆದ್ರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೆಜಿಎಫ್ -2 ರಿಲೀಸ್ ಯಾವಾಗ ಅನ್ನೋದೆ ಗೊಂದಲದಲ್ಲಿದೆ.

ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಕೆಜಿಎಫ್ -2 ಚಿತ್ರತಂಡ ಸಿನಿಮಾದ ಚಿತ್ರೀಕರಣವನ್ನು ಭರದಿಂದ ನಡೆಸುತ್ತಿದೆ. ಕೆಜಿಎಫ್ ಚಾಪ್ಟರ್ 1 ಸೂಪರ್ ಡೂಪರ್ ಹಿಟ್ ಆದ ಬಳಿಕ ಸಿನಿಮಾ ದೇಶದಾದ್ಯಂತ ಸಂಚಲನವನ್ನು ಮೂಡಿಸಿತ್ತು.

ಭಾರತದ ಸಿನಿಮಾ ಇತಿಹಾಸದಲ್ಲಿಯೇ ಹಲವು ದಾಖಲೆಗಳು ಬರೆದಿರುವ ಕೆಜಿಎಫ್ -1 ಸಿನಿಮಾದಿಂದಾಗಿಯೇ ಚಾಪ್ಟರ್ -2 ಸಹಜವಾಗಿಯೇ ಕುತೂಹಲವನ್ನು ಮೂಡಿಸಿದೆ. ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾದಲ್ಲಿ ಬಹುತಾರಾಗಣವಿದೆ.

ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಮಿಂಚಿದ್ದರೆ. ರವೀನಾ ಟಂಡನ್ ಪ್ರಧಾನ ಮಂತ್ರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅನಂತ್ ನಾಗ್ ಪಾತ್ರದಲ್ಲಿ ಪ್ರಕಾಶ್ ರೈ ಬಣ್ಣ ಹಚ್ಚುತ್ತಿದ್ದಾರೆ.

ಕೆಜಿಎಫ್ ಸಿನಿಮಾ ತಂಡ ದಿನಕ್ಕೊಂದು ಹೊಸ ವಿಚಾರಗಳನ್ನು ಬಿಟ್ಟುಕೊಡುತ್ತಿದೆ. ಕೆಜಿಎಫ್ -1 ಸಿನಿಮಾವನ್ನು ವಿಭಿನ್ನವಾಗಿ ತೋರಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ -2 ಬಗ್ಗೆಯೂ ಹಲವು ಕುತೂಹಲಕಾರಿ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಜಿಎಫ್ ಚಾಪ್ಟರ್ -2 ಮೂಲಕ ರಾಕಿ ಬಾಯ್ ಅವತಾರವನ್ನು ಟೀಸರ್ ಮೂಲಕ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ದಸರಾಗೆ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಾಗಂತ ಈ ಕೆಜಿಎಫ್ ತಂಡ ಈ ಬಗ್ಗೆ ಹೇಳಿಕೊಂಡಿಲ್ಲ.

ಆದರೆ ಟ್ವಿಟ್ಟರ್​ನಲ್ಲಿ ಯಶ್ ಅಭಿಮಾನಿಗಳು ದಸರಾಗೆ ಕೆಜಿಎಫ್ 2 ಟೀಸರ್ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳುತ್ತಿದ್ದಾರೆ. ಮಾತ್ರಲ್ಲದೆ ಈ ಬಗ್ಗೆ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ದಸರಾ ಹಬ್ಬದ ಸಮಯದಲ್ಲಿ ಚಿತ್ರತಂಡಗಳು ಏನಾದರೊಂದು ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡುತ್ತದೆ. ಅದರಂತೆ ಕೆಜಿಎಫ್ 2 ಸಿನಿಮಾ ತಂಡ ಕೂಡ ಈ ಬಗ್ಗೆ ಸಿಹಿ ಹಂಚಿಕೊಳ್ಳಲಿದೆ ಎಂಬ ಅನುಮಾನ ಕಾಡುತ್ತಿದೆ.

ಮುಂಬರುವ ವರ್ಷ ಕೆಜಿಎಫ್ 2 ಸಿನಿಮಾ ತೆರೆಗೆ ಬರಲಿದೆ. ಅಭಿಮಾನಿಗಳು ತದಿಗಾಲಿನಲ್ಲಿ ನಿಂತು ರಾಕಿ ಭಾಯ್​ ಅನ್ನು ಸ್ವಾಗತಿಸಲು ಕಾದುಕುಳಿತ್ತಿದ್ದಾರೆ

Leave A Reply

Your email address will not be published.