ಬುಧವಾರ, ಏಪ್ರಿಲ್ 30, 2025
HomeCinemaKhushbu Sundar : ಫಿಟ್ ಅಂಡ್ ಯಂಗ್ ಆಗಿ ಕಾಣುತ್ತಿದ್ದಾರೆ ಖುಷ್ಬೂ ಸುಂದರ್: ಇದರ ಸೀಕ್ರೆಟ್...

Khushbu Sundar : ಫಿಟ್ ಅಂಡ್ ಯಂಗ್ ಆಗಿ ಕಾಣುತ್ತಿದ್ದಾರೆ ಖುಷ್ಬೂ ಸುಂದರ್: ಇದರ ಸೀಕ್ರೆಟ್ ಆದ್ರೂ ಏನು?

- Advertisement -

ತಮಿಳು ನಟಿ ಖುಷ್ಬೂ ಸುಂದರ್ (Khushbu Sundar) ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಆಗಿದ್ದರೆ ಸುಮಾರು ನಾಲ್ಕು ದಶಕಗಳಿಂದ ಸಕ್ರಿಯವಾಗಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿತೆರೆಯಲ್ಲಿ ಸಾಕಷ್ಟು ಪ್ರಮಾಣದ ಹೆಸರು ಗಳಿಸಿದ ಬಳಿಕ, ಇದೀಗ ಕಿರುತೆರೆಯ ಡಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಇದರ ಜೊತೆಗೇ ನಿರ್ಮಾಪಕಿಯಾಗಿಯೂ , ರಾಜಕೀಯ ರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ.

ವೈರಲ್ ಆಗಿದ್ದದ್ರು ಯಾಕೆ?
ಪ್ರಸ್ತುತ ಡ್ಯಾನ್ಸ್ ವರ್ಸಸ್ ಡ್ಯಾನ್ಸ್ 2 ರಿಯಾಲಿಟಿ ಜಡ್ಜ್ ಆಗಿರುವ ಖುಷ್ಬೂ, ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಿಂದಾಗಿ ಸುದ್ದಿಯಲ್ಲಿದ್ದಾರೆ. 2 ದಿನಗಳ ಹಿಂದೇ ತಮ್ಮ ವೈಟ್ ಲಾಸ್ ಜರ್ನಿ ಹಾಗೂ ಟ್ರಾನ್ಸ್ ಫಾರ್ಮೇಶನ್ ಕುರಿತು ಫೋಟೋ ಅಪ್ಲೋಡ್ ಮಾಡಿ “ಅಂದು ಮತ್ತು ಇಂದು, 20 ಕೆಜಿ ಕಳಕೊಂಡೆ. ಈಗ ಆರೋಗ್ಯವೂ ಚೆನ್ನಾಗಿದೆ ಮತ್ತು ಫಿಟ್ ಆಗಿದ್ದೇನೆ. ನಾನು ನಿಮ್ಮನ್ನು ಫಿಟ್ ಆಗಿರಲು ಪ್ರೇರೇಪಿಸುತ್ತೇನೆ. ಯಾಕೆಂದರೆ ಆರೋಗ್ಯವೇ ಭಾಗ್ಯ” ಎಂದು ಕ್ಯಾಪ್ಷನ್ ನೀಡಿದ್ದಾರೆ.

ಈ ಹಿಂದೆಯೂ ಒಮ್ಮೆ ಫೋಟೋ ಪೋಸ್ಟ್ ಮಾಡಿ ” ಅಂದಿಗೂ ಇಂದಿಗೂ ಕೇವಲ15 ಕೆಜಿ ವ್ಯತ್ಯಾಸ, ಜಾಸ್ತಿಯೇನಿಲ್ಲ” ಎಂದಿದ್ದರು. ಆ ಪೋಸ್ಟ್ ಕೂಡ ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಈ ಬಾರಿಯ ತಮ್ಮ ಪೋಸ್ಟ್ ನಲ್ಲಿ ಜನರಿಗೂ ಹೆಲ್ತಿ ಹಾಗೂ ಸದಾ ಫಿಟ್ ಆಗಿರಿ ಎಂದು ಕರೆ ನೀಡಿದ್ದಾರೆ. ಈ ಪೋಸ್ಟ್ ಗೆ ಐವತ್ತು ಸಾವಿರಕ್ಕೂ ಅಧಿಕ ಲೈಕ್ಸ್ ದೊರೆತಿದ್ದು, ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಶುಭಾಶಯ ಕೋರಿದ್ದಾರೆ. “ಮೊದಲಿಗಿಂತ ಇನ್ನಷ್ಟು ಯಂಗ್ ಆಗಿದ್ದೀರಿ”, “ಈ ಟ್ರಾನ್ಸ್ಫಾರ್ಮಶನ್ ಸೀಕ್ರೆಟ್ ಏನು” ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ತಮ್ಮ ಕಮೆಂಟ್ ಒಂದಕ್ಕೆ ಪ್ರತಿಕ್ರಿಯಿಸಿ “ಎರಡು ಗಂಟೆಗಳ ವರ್ಕೌಟ್ ಹಾಗೂ ಕಟ್ಟುನಿಟ್ಟಾದ ಡಯೆಟ್ ನಿಂದಾಗಿ ಈ ರೀತಿ ವೈಟ್ ಲಾಸ್ ಮಾಡಲು ಸಾಧ್ಯವಾಯ್ತು” ಎಂದಿದ್ದಾರೆ.
ಜೂನ್ 2020 ರಲ್ಲೂ ಒಮ್ಮೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ “ಬಹಳಷ್ಟು ಜನ ನನ್ನತ್ರ ತೂಕದ ಇಳಿಕೆಯ ಬಗ್ಗೆ ಕೇಳಿದ್ದಾರೆ. ಇದಕ್ಕೆ ಲಾಕ್ ಡೌನ್ ಮುಖ್ಯ ಕಾರಣ. ಎಪ್ಪತ್ತು ದಿನಗಳ ಕಾಲ ಮನೆಯಲ್ಲಿಯೇ ಕಾಲ ಕಳೆದೆ. ಈ ಸಂದರ್ಭದಲ್ಲಿ ಮನೆ ಕೆಲಸ ಎಲ್ಲ ನಾನೇ ಮಾಡುತ್ತಿದ್ದೆ. ಇದರ ಜೊತೆಗೆ ಯೋಗ ಕೂಡ ನನಗೆ ಉಪಕರವಾಯ್ತು. ಆಹಾರವನ್ನು ನಾನು ಜಾಗೃತಿಯಿಂದ ಸೇವಿಸುತ್ತಿದ್ದೆ” ಎಂದು ಬರೆದಿದ್ದರು. ಈ ಬಾರಿ ಮಾತ್ರ ಖುಷ್ಬೂ ಮೊದಲಿಗಿಂತ ಸಾಕಷ್ಟು ಯಂಗ್ ಆಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ: Aadhaar : ಕನ್ನಡದಲ್ಲೇ ನವೀಕರಿಸಬಹುದು ಆಧಾರ್‌ ಕಾರ್ಡ್‌ ಮಾಹಿತಿ

( Khushbu Sundar shares there to here pic 20kgs lighter I m at my healthiest best)

RELATED ARTICLES

Most Popular