Kiccha Sudeep : ರೈತನ ಮಗನ ಕಷ್ಟಕ್ಕೆ ಸ್ಪಂದಿಸಿದ ಕಿಚ್ಚ ಸುದೀಪ್ : ಕಾಲೇಜ್ ಪೀಸ್ ಕಟ್ಟಿದ ಬಾದ್ ಷಾ

ಸಿನಿಮಾ ಸ್ಟಾರ್ ಗಳು ಅಂದ್ರೇ ಜನರಿಗೆ, ಯುವಜನತೆಗೆ ಹುಚ್ಚು ಅಭಿಮಾನ. ಆದರೆ ಈ ಅಭಿಮಾನವನ್ನು ಪ್ರೀತಿಯನ್ನು ಅಷ್ಟೇ ಗೌರವದಿಂದ ಸ್ವೀಕರಿಸಿ ಅಭಿಮಾನಿಗಳ, ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ನಾಯಕರು ಕೆಲವೇ ಕೆಲವು ಸೆಲೆಬ್ರೆಟಿಗಳು. ಈ ಸಾಲಿನಲ್ಲಿ ಮೊದಲು ನಿಲ್ಲುವ ನಾಯಕ ಕಿಚ್ಚ ಸುದೀಪ್ (Kiccha Sudeep). ಸದಾ ಅಗತ್ಯ ಉಳ್ಳವರ ಸಹಾಯಕ್ಕೆ ಧಾವಿಸುವ ಸುದೀಪ್ ಬಡ ರೈತನ ಮಗನ ಕಷ್ಟಕ್ಕೆ ಸ್ಪಂದಿಸಿ ಕೈಹಿಡಿದು ನಡೆಸಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ರಾಮಕೃಷ್ಣ ಮತ್ತು ಜ್ಯೋತಿ ದಂಪತಿಯ ಪುತ್ರ ಗಿರೀಶ್ ಕುಮಾರ್ ಜಿ.ಆರ್ ಹಾಸನದ ಕಾಲೇಜೊಂದರಲ್ಲಿ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದಾರೆ. ಗಿರೀಶ್ ತಂದೆ ರಾಮಕೃಷ್ಣ ಕೃಷಿಕರಾಗಿದ್ದು ಜಮೀನಿನಲ್ಲಿ ರಾಗಿ ಬೆಳೆದಿದ್ದರು. ಆದರೆ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ರಾಗಿ ಬೆಳೆ ಕೈಸೇರಿಲ್ಲ. ಹೀಗಾಗಿ ರೈತ ರಾಮಕೃಷ್ಣ ಮಗನ ಫೀಸ್ ಕಟ್ಟಲು ಸಾಧ್ಯವಾಗದೇ ಕಂಗಲಾಗಿದ್ದರು.

ಹಾಸನದಲ್ಲಿ ಓದುತ್ತಿದ್ದ ಗಿರೀಶ್ ಕಾಲೇಜ್ ಫೀಸ್ ಪಾವತಿಸಲೇಬೇಕಿತ್ತು. ಇಲ್ಲದಿದ್ದರೇ ಪರೀಕ್ಷೆಗೆ ಹಾಜರಾಗಲು ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ಗಿರೀಶ್ ಹಲವರ ಬಳಿ ಸಾಲ ಕೇಳಿದ್ದರು. ಆದರೆ ಯಾರು ಸಹಾಯಕ್ಕೆ ಮುಂದೇ ಬಂದಿರಲಿಲ್ಲ. ಕೊನೆಗೆ ಹಾಸನ ಜಿಲ್ಲಾ ಸುದೀಪ್ ಅಭಿಮಾನಿಗಳ ಸಂಘದ ಮೊರೆ ಹೋದ ಗಿರೀಶ್ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ತಕ್ಷಣ ವಿದ್ಯಾರ್ಥಿ ಕಷ್ಟಕ್ಕೆ ಸ್ಪಂದಿಸಿದ ಹಾಸನ ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷರು ಸುದೀಪ್ ರನ್ನು ಸಂಪರ್ಕಿಸಿ ಸಮಸ್ಯೆ ಹೇಳಿಕೊಂಡಿದ್ದಾರೆ.

ತಕ್ಷಣ ವಿದ್ಯಾರ್ಥಿಯನ್ನು ಬೆಂಗಳೂರಿಗೆ ಕರೆಸಿಕೊಂಡ ನಟ ಸುದೀಪ್ ವಿದ್ಯಾರ್ಥಿ ಕಾಲೇಜಿಗೆ ಪಾವತಿಸಬೇಕಿದ್ದ 21 ಸಾವಿರ ರೂಪಾಯಿ ಶುಲ್ಕಕ್ಕೆ ಚೆಕ್ ನೀಡಿ ಕಳುಹಿಸಿದ್ದಾರೆ. ಸುದೀಪ್ ನೀಡಿದ ಚೆಕ್ ನಿಂದ ಫೀಸ್ ಪಾವತಿಸಿದ ಗಿರೀಶ್ ನಿರಾಂತಕದಲ್ಲಿ ಪರೀಕ್ಷೆ ಎದುರಿಸಿದ್ದಾನೆ. ಮಾತ್ರವಲ್ಲ ಬಡ ರೈತನ ಮಗನ ಕಷ್ಟಕ್ಕೆ ಸ್ಪಂದಿಸಿದ ಸುದೀಪ್ ಸಹಾಯವನ್ನು ಸ್ಮರಿಸುತ್ತಿದ್ದಾನೆ.

ಇದೇ ಮೊದಲಲ್ಲ, ಈ ಹಿಂದೆ ಹಲವಾರು ಭಾರಿ ಈ ರೀತಿ ಸುದೀಪ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಮಾತ್ರವಲ್ಲ ಕರೋನಾ ಸಂಕಷ್ಟದಲ್ಲಿ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರು, ತಂತ್ರಜ್ಞರಿಗೂ ಸುದೀಪ್ ಸಹಾಯಹಸ್ತ ಚಾಚಿದ್ದರು. ಮಾತ್ರವಲ್ಲ ಹಲವು ಸರ್ಕಾರಿ ಶಾಲೆಗಳನ್ನು ಪುನೀತ್ ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದಾರೆ.

ಇದನ್ನೂ ಓದಿ :‌ Special gift Sudeep : ಬಾಲಿವುಡ್ ನಿಂದ ಬಾದಶಾ ಸುದೀಪ್ ಗೆ ಬಂತು ಸ್ಪೆಶಲ್ ಗಿಫ್ಟ್

ಇದನ್ನೂ ಓದಿ : Sudeep : ಸುದೀಪ್ ಗಾಗಿ ಅಭಿಮಾನಿಗಳ ಉರುಳುಸೇವೆ : ಕಿಚ್ಚನಿಗೆ ಅಂತಹದ್ದೇನಾಯ್ತು ಗೊತ್ತಾ?!

( Kiccha Sudeep, a farmer’s son, responded to the plight: Bad Shah, who built college fees)

Comments are closed.