Kubbra Sait : ತಾಯಿಯಾಗಲು ನಾನು ಸಿದ್ಧವಿರಲಿಲ್ಲ, ಹೀಗಾಗಿ ಗರ್ಭಪಾತ ಮಾಡಿಸಿದೆ : ಖ್ಯಾತ ನಟಿಯ ಶಾಕಿಂಗ್​ ಹೇಳಿಕೆ

Kubbra Sait : ಸೆಕ್ರೆಡ್​ ಗೇಮ್ಸ್​ ಖ್ಯಾತಿಯ ನಟಿ ಬೆಂಗಳೂರಿನ ಬೆಡಗಿ ಕುಬ್ರಾ ಸೇಠ್​ ತಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದಿಂದಲೇ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸೆಕ್ರೇಡ್​ ಗೇಮ್ಸ್​ನಲ್ಲಿ ಕುಕೂ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ ಬಳಿಕ ಕುಬ್ರಾ ಸೇಠ್​​ರನ್ನು ಸಾಕಷ್ಟು ಸಿನಿಮಾಗಳು ಹಾಗೂ ವೆಬ್​ಸಿರೀಸ್​ಗಳು ಹುಡುಕಿಕೊಂಡು ಬಂದಿವೆ.


ನಟಿ ಹಾಗೂ ಮಾಡೆಲ್​ ಕುಬ್ರಾ ಸೇಟ್​​​ ತಮ್ಮ ಮೊದಲ ಪುಸ್ತಕ ಓಪನ್​ ಬುಕ್​ : ನಾಟ್​ ಕ್ವಿಟ್​ ಎ ಮೆಮೊಯಿರ್​ ಮೂಲಕ ಲೇಖಕಿಯಾಗಿಯೂ ಬದಲಾಗಿದ್ದಾರೆ. ಈ ಪುಸ್ತಕದಲ್ಲಿ ನಟಿ ಕುಬ್ರಾ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯಗಳು, ಶೂಟಿಂಗ್​ ನೆಪದಲ್ಲಿ ಆದ ದೌರ್ಜನ್ಯಗಳು ಹಾಗೂ ಬಾಡಿ ಶೇಮಿಂಗ್​ ಸೇರಿದಂತೆ ಸಾಕಷ್ಟು ವಿಚಾರಗಳನ್ನು ನಟಿ ಕುಬ್ರಾ ಸೇಠ್​ ಹಂಚಿಕೊಂಡಿದ್ದಾರೆ.


ಪುಸ್ತಕದ ಕೊನೆಯಲ್ಲಿ ನಟಿ ಕುಬ್ರಾ ಸೇಠ್​ ತಮ್ಮ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ಘಟನೆಯನ್ನು ವಿವರಿಸಿದ್ದಾರೆ. 2013ರಲ್ಲಿ ಅಂಡಮಾನ್​ನಲ್ಲಿ ನಡೆದ ರಾತ್ರಿಯೊಂದನ್ನು ಕುಬ್ರಾ ಸೇಠ್​ ನೆನಪಿಸಿಕೊಂಡಿದ್ದಾರೆ. ನನಗೆ ಆಗ 30 ವರ್ಷ ವಯಸ್ಸು .ಸ್ಕೂಬಾ ಡೈವಿಂಗ್​ ಅನುಭವ ಪಡೆಯಲೆಂದು ಸ್ನೇಹಿತನೊಂದಿಗೆ ಅಂಡಮಾನ್​ಗೆ ತೆರಳಿದ್ದೆ. ಅಲ್ಲಿ ನಾನು ಆತನೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದೆ. ಪರಿಣಾಮವಾಗಿ ನಾನು ಗರ್ಭಿಣಿಯಾದೆ ಎಂದು ಕುಬ್ರಾ ಬರೆದುಕೊಂಡಿದ್ದಾರೆ.

ನಾನು ಗರ್ಭಿಣಿ ಎಂದು ತಿಳಿದ ಒಂದು ವಾರದ ಬಳಿಕ ಅಬಾಷನ್​ ಮಾಡಿಸಿಕೊಳ್ಳಲು ನಿರ್ಧರಿಸಿದೆ. ತಾಯಿಯಾಗಲು ನಾನಾಗ ಸಿದ್ಧರಿರಳಿಲ್ಲ. ಅದು ನಾನು ಊಹಿಸಿಕೊಂಡ ಅಥವಾ ಕನಸು ಕಾಣುತ್ತಿದ್ದ ಜೀವನದ ಭಾಗ ಕೂಡ ಆಗಿರಲಿಲ್ಲ. ನನಗೆ ನಾನು ಈಗಲೂ ತಾಯಿಯಾಗಲು ಸಿದ್ಧಳಿದ್ದೇನೆ ಎಂದು ಎನಿಸುವುದಿಲ್ಲ. ನನಗೆ ಈ ಮಹಿಳೆಯರಿಗೆ 23 ವರ್ಷದೊಳಗೆ ಮದುವೆಯಾಗುವಂತೆ ಹಾಗೂ 30ರ ಒಳಗಾಗಿ ಮಗು ಮಾಡಿಕೊಳ್ಳುವಂತೆ ಹಾಕಲಾಗುವ ಒತ್ತಡಗಳೇ ಅರ್ಥವಾಗುವುದಿಲ್ಲ ಎಂದು ಕುಬ್ರಾ ಸೇಠ್​ ಹೇಳಿದ್ದಾರೆ.


ಇದೊಂದು ರೀತಿ ಯಾರಿಗೂ ಕಾಣದ ನಿಯಮ ಪುಸ್ತಕವಿದ್ದಂತೆ. ಆದರೆ ನನಗೆ ನಾನು ಇದಕ್ಕೆಲ್ಲ ತಯಾರಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿತ್ತು. ಆ ಕ್ಷಣಕ್ಕೆ ನನಗೆ ನಾನು ಅತ್ಯಂತ ಕೆಟ್ಟ ಮನುಷ್ಯ ಎಂದು ಎನಿಸಿದ್ದು ನಿಜ. ಆದರೆ ಜನರು ಏನು ಅಂದುಕೊಂಡಾರು ಎನ್ನುವುದಕ್ಕಿಂತ ನನಗೆ ಏನು ಅನಿಸುತ್ತಿದೆ ಎಂಬುದೇ ನನಗೆ ಮುಖ್ಯ. ನನ್ನ ಆಯ್ಕೆ ಎಂದಿಗೂ ನಾನೇ. ಒಮ್ಮೊಮ್ಮೆ ನಿಮಗೆ ನೀವೇ ಸಹಾಯ ಮಾಡಿಕೊಳ್ಳುವುದು ಕಷ್ಟವೆನಿಸಿಬಿಡುತ್ತದೆ. ಆದರೂ ಪರವಾಗಿಲ್ಲ. ನೀವು ಮಾಡಲೇಬೇಕು ಎಂದಿದ್ದಾರೆ.

ಇದನ್ನು ಓದಿ : man kills wife : ಹಲ್ಲುಜ್ಜುವ ವಿಚಾರಕ್ಕೆ ಜಗಳ : ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ

ಇದನ್ನೂ ಓದಿ : Sharad Pawar : ಶರದ್​ಪವಾರ್​ಗೆ ಆದಾಯ ತೆರಿಗೆ ಇಲಾಖೆ ನೋಟಿಸ್​ : ಐಟಿಯಿಂದ ಲವ್​ ಲೆಟರ್​ ಬಂದಿದೆ ಎಂದ ಎನ್​ಸಿಪಿ ನಾಯಕ

Kubbra Sait Reveals She Had An Abortion After A One-Night Stand When She Was 30

Comments are closed.