ಟೀಮ್ ಇಂಡಿಯಾ ಹೊಸ ಕ್ಯಾಪ್ಟನ್ ಬುಮ್ರಾಗೆ ಧೋನಿಯೇ ಸ್ಫೂರ್ತಿ

ಲಂಡನ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ (India Vs England Test) ಭಾರತ ತಂಡ ವೇಗಿ ಜಸ್ಪ್ರೀತ್ ಬುಮ್ರಾ (new captain jasprit bumrah) ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದೆ. ಖಾಯಂ ಕ್ಯಾಪ್ಟನ್ ರೋಹಿತ್ ಶರ್ಮಾ ಕೋವಿಡ್”ನಿಂದ ಚೇತರಿಸಿಕೊಳ್ಳದ ಕಾರಣ ಟೀಮ್ ಇಂಡಿಯಾವನ್ನು ಬುಮ್ರಾ ಮುನ್ನಡೆಸುತ್ತಿದ್ದಾರೆ.

ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಜಸ್ಪ್ರೀತ್ ಬುಮ್ರಾ ಅವರಿಗಿದು ನಾಯಕತ್ವದಲ್ಲಿ ಮೊದಲ ಸವಾಲು. ಈ ಹಿಂದೆ ಕನಿಷ್ಠ ತಮ್ಮ ರಾಜ್ಯ ತಂಡವನ್ನು ಮುನ್ನಡೆಸಿದ ಅನುಭವವೂ ಬುಮ್ರಾಗಿಲ್ಲ. ದೇಶೀಯ ಕ್ರಿಕೆಟ್’ನಲ್ಲಿ ಗುಜರಾತ್ ಮತ್ತು ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಜಸ್ಪ್ರೀತ್ ಬುಮ್ರಾ, ಒಂದೇ ಒಂದು ಪಂದ್ಯದಲ್ಲಿ ಇಲ್ಲಿಯವರೆಗೆ ನಾಯಕತ್ವ ವಹಿಸಿಲ್ಲ. ಅಷ್ಟೇ ಏಕೆ, ಜ್ಯೂನಿಯರ್ ಕ್ರಿಕೆಟ್”ನಲ್ಲಿ ತಂಡವೊಂದರ ನಾಯಕತ್ವ ವಹಿಸಿದ ಅನುಭವವೂ ಬುಮ್ರಾಗಿಲ್ಲ. ಆದರೆ ಈಗ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಸಿಕ್ಕಿದೆ.

ನಾಯಕತ್ವದ ಅನುಭವವೇ ಇಲ್ಲದ ಬುಮ್ರಾಗೆ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni is inspiration for Jaspreet Bumrah) ಅವರೇ ಸ್ಫೂರ್ತಿ. ಈ ವಿಚಾರವನ್ನು ಸ್ವತಃ ಬುಮ್ರಾ ಅವರೇ ಹೇಳಿಕೊಂಡಿದ್ದಾರೆ. “ಎಂ.ಎಸ್ ಧೋನಿ ಅವರೊಂದಿಗೆ ಈ ಹಿಂದೊಮ್ಮೆ ಮಾತನಾಡಿದ್ದು ನನಗೆ ಚೆನ್ನಾಗಿ ನೆನಪಿದೆ. ‘ನಾನು ಭಾರತ ತಂಡವನ್ನು ಮುನ್ನಡೆಸುವ ಮುನ್ನ ನನಗೆ ಯಾವುದೇ ತಂಡದ ನಾಯಕತ್ವ ವಹಿಸದ್ದ ಅನುಭವವಿರಲಿಲ್ಲ’ ಎಂದು ಧೋನಿ ನನಗೆ ಹೇಳಿದ್ದರು. ಈಗ ಧೋನಿಯವರು ಸಾರ್ವಕಾಲಿಕ ಶ್ರೇಷ್ಠ ನಾಯಕರ ಪೈಕಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ”.

  • ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ.

ಕಳೆದ ವರ್ಷ ಕೋವಿಡ್ ಕಾರಣದಿಂದ ಮೊಟಕುಗೊಂಡಿದ್ದ ಇಂಗ್ಲೆಂಡ್ ಮತ್ತು ಭಾರತ ನಡುವಿನ 5 ಪಂದ್ಯಗಳ ಟೆಸ್ಟ್ (India Vs England Test Series) ಸರಣಿಯ ಅಂತಿಮ ಪಂದ್ಯ ಇದಾಗಿತ್ತು, ಸರಣಿಯಲ್ಲಿ ಭಾರತ 2-1ರಲ್ಲಿ ಮುನ್ನಡೆಯಲ್ಲಿದೆ. ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಇಂಗ್ಲೆಂಡ್ ನೆಲದಲ್ಲಿ ಭಾರತ 15 ವರ್ಷಗಳ ನಂತರ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ.

ಟೆಸ್ಟ್ ಕ್ರಿಕೆಟ್”ನಲ್ಲಿ ಭಾರತ ತಂಡವನ್ನು ಮುನ್ನಡೆಸುವುದು ಅತೀ ದೊಡ್ಡ ಗೌರವ ಎಂದು 28 ವರ್ಷದ ಬಲಗೈ ವೇಗಿ ಬುಮ್ರಾ ಹೇಳಿದ್ದಾರೆ. ಉಪನಾಯಕ ಕೆ.ಎಲ್ ರಾಹುಲ್ ಕೂಡ ಗಾಯಾಳು ಪಟ್ಟಿ ಸೇರಿರುವ ಕಾರಣ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಬುಮ್ರಾಗೆ ಲಭಿಸಿದೆ. ಮಾಜಿ ನಾಯಕ ಕಪಿಲ್ ದೇವ್ ಅವರ ನಂತರ ಟೆಸ್ಟ್ ಕ್ರಿಕೆಟ್”ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಮೊದಲ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ. ಭಾರತ ಪರ 29 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ, ಇನ್ನಿಂಗ್ಸ್ ಒಂದರಲ್ಲಿ 8 ಬಾರಿ 5 ವಿಕೆಟ್ ಸಹಿತ ಒಟ್ಟು 123 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ : KL Rahul Health Report : ರಾಹುಲ್‌ಗೆ ಜರ್ಮನಿಯಲ್ಲಿ ಆಪರೇಷನ್ ಸಕ್ಸಸ್.. ಪ್ರಿಯತಮನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಪ್ರೇಯಸಿ

ಇದನ್ನೂ ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

Dhoni is the inspiration for Team India’s new captain jasprit bumrah

Comments are closed.