Nokia T21 Tablet ಖರೀದಿಸಲು ಸುಸಮಯ; ಪ್ರೀಬುಕ್ಕಿಂಗ್‌ ಮೇಲೆ ಇದೆ 1,000 ರೂ. ಡಿಸ್ಕೌಂಟ್‌

HMD ಗ್ಲೋಬಲ್ ಒಡೆತನದ ನೋಕಿಯಾ (Nokia) ಮಂಗಳವಾರ ಭಾರತದಲ್ಲಿ ಹೊಸ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ ‘ನೋಕಿಯಾ T21’ (Nokia T21 Tablet) ಅನ್ನು ಬಿಡುಗಡೆ ಮಾಡುವುದರ ಮೂಲಕ ತನ್ನ ಉತ್ಪನ್ನಗಳ ಪೋರ್ಟ್ಫೋಲಿಯೋವನ್ನು ವಿಸ್ತರಿಸಿದೆ. ಈ ಟ್ಯಾಬ್ಲೆಟ್‌ ಅಲ್ಯುಮಿನಿಯಂ ದೇಹ ಮತ್ತು 60 ಪ್ರತಿಶತದಷ್ಟು ಮರುಬಳಕೆಯ ಪ್ಲಾಸ್ಟಿಕ್‌ ಕವರ್‌ ಅನ್ನು ಹೊಂದಿದೆ ಎಂದು ಕಂಪನಿ ಹೇಳುತ್ತಿದೆ. ‌ಇದು 10.3 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ದೀರ್ಘಾವಧಿಯ ಬ್ಯಾಟರಿಯನ್ನು ನೀಡಲಿದೆ. ‘ನೋಕಿಯಾ T20 ಯಶಸ್ಸಿನ ಮೇಲೆ ನಿರ್ಮಿಸಿ, ಹೊಸ Nokia T21 ಅನ್ನು ಕೆಲಸ ಮತ್ತು ಆಟ ಎರಡಕ್ಕೂ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ’ ಎಂದು ಭಾರತ ಮತ್ತು ಮೆನಾ, HMD ಗ್ಲೋಬಲ್‌ ಉಪಾಧ್ಯಕ್ಷ ಸನ್ಮೀತ್ ಸಿಂಗ್ ಕೊಚ್ಚರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ತಿಳಿಸಿದೆ. ಈ ಟ್ಯಾಬ್ಲೆಟ್ ಅನ್ನು WiFi ಮತ್ತು WiFi+LTE ಮಾದರಿಗಳಲ್ಲಿ ನೀಡಲಾಗುತ್ತದೆ.

ನೋಕಿಯಾ T21 ಟ್ಯಾಬ್ಲೆಟ್‌ ಬೆಲೆ ಮತ್ತು ವೈಶಿಷ್ಟ್ಯಗಳು :

ನೋಕಿಯಾ T21 ಟ್ಯಾಬ್ಲೆಟ್‌ ಬೆಲೆ :
ಜನವರಿ 22 ರಿಂದ ನೋಕಿಯಾ T21 ಟ್ಯಾಬ್ಲೆಟ್‌ ರಿಟೇಲ್‌ ಅಂಗಡಿಗಳಲ್ಲಿ ಮತ್ತು ಪ್ರಮುಖ ಔಟ್‌ಲೆಟ್‌ಗಳಲ್ಲಿ ಲಭ್ಯವಿರುತ್ತದೆ. ಈ ಟ್ಯಾಬ್ಲೆಟ್‌ನ WiFi ರೂಪಾಂತರಕ್ಕೆ 17,999 ರೂ. ಮತ್ತು WiFi + LTE ರೂಪಾಂತರಕ್ಕೆ 18,999 ರೂ.ಗಳಾಗಿದೆ ಎಂದು ಕಂಪನಿ ಐಎಎನ್‌ಎಸ್‌ ಗೆ ನೀಡಿದ ವರದಿಯಲ್ಲಿ ತಿಳಿಸಿದೆ.

ನೋಕಿಯಾ T21 ಟ್ಯಾಬ್ಲೆಟ್‌ ವೈಶಿಷ್ಟ್ಯಗಳು :

  • ನೋಕಿಯಾ T21 ಟ್ಯಾಬ್ಲೆಟ್‌ 10.36 ಇಂಚಿನ 2K ಡಿಸ್ಪ್ಲೇ ಯೊಂದಿಗೆ ಬರಲಿದೆ.
  • ಇದು ಚಾರ್ಕೋಲ್‌ ಗ್ರೇ ಬಣ್ಣವನ್ನು ಹೊಂದಿದ್ದು, 4GB RAM ಮತ್ತು 64GB ಸಂಗ್ರಹಣೆಯೊಂದಿಗೆ ಬರಲಿದೆ.
  • ಇದು Unisoc T612 ಆಕ್ಟಾ–ಕೋರ್‌ ಪ್ರೊಸೆಸ್ಸರ್‌ ನಿಂದ ಶಕ್ತಿಯನ್ನು ಪಡೆಯಲಿದೆ. ಮತ್ತು ಆಂಡ್ರಾಯ್ಡ್‌ 12 ಆಪರೇಟಿಂಗ್‌ ಸಿಸ್ಟಮ್‌ನಿಂದ ಕಾರ್ಯ ನಿರ್ವಹಿಸಲಿದೆ.
  • ಈ ಟ್ಯಾಬ್ಲೆಟ್‌ ಫ್ಲ್ಯಾಶ್ ಜೊತೆಗೆ ಹಿಂಬದಿಯಲ್ಲಿ 8MP ಕ್ಯಾಮರಾ ಮತ್ತು ಮುಂಭಾಗದಲ್ಲಿ 8MP ಕ್ಯಾಮರಾವನ್ನು ಒಳಗೊಂಡಿದೆ.
  • ಇದು ಉತ್ತಮ ಬ್ಯಾಟರಿ ಪ್ಯಾಕ್‌ ಹೊಂದಿದೆ. ನೋಕಿಯಾ T21 ಟ್ಯಾಬ್ಲೆಟ್‌ 8200mAh ಬ್ಯಾಟರಿಯನ್ನು ಹೊಂದಿದೆ.ಇದು 800 ಚಾರ್ಜಿಂಗ್ ಸೈಕಲ್‌ಗಳ ನಂತರವೂ 80 ಪ್ರತಿಶತ ಸಾಮರ್ಥ್ಯವನ್ನು ಉಳಿಸಿಕೊಳ್ಳಲಿದೆ.
  • ಇದು ಮೂರು ವರ್ಷಗಳ ಮಂಥ್ಲೀ ಸೆಕ್ಯೂರಿಟಿ ಅಪ್ಡೇಟ್‌ನೊಂದಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ಪ್ರೀಬುಕಿಂಗ್‌ ಡಿಸ್ಕೌಂಟ್‌ :
ಈ ಟ್ಯಾಬ್ಲೆಟ್‌ನ ಪ್ರೀಬುಕಿಂಗ್‌ ಮೇಲೆ ಖರೀದುದಾರರು 1,000 ರೂ. ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಜೊತೆಗೆ 1,999 ರೂ. ಗಳ ಉಚಿತ ಫ್ಲಿಪ್‌ ಕವರ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಜನವರಿ 22 ರಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ರಿಟೇಲ್‌ ಅಂಗಡಿಗಳಲ್ಲೂ ಲಭ್ಯವಿರುತ್ತದೆ.

ಇದನ್ನೂ ಓದಿ : Young Professionals Scheme : ವೃತ್ತಿಪರರಿಗಾಗಿ ಪ್ರಾರಂಭವಾಗಲಿದೆ ಹೊಸ ಯೋಜನೆ; ಎರಡು ವರ್ಷಗಳವರೆಗೆ ಬ್ರಿಟನ್‌ನಲ್ಲಿ ವಾಸ ಮತ್ತು ಕೆಲಸ

ಇದನ್ನೂ ಓದಿ : ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ “ಗಂಧದಗುಡಿ” ಸಿನಿಮಾ ರೀ ರಿಲೀಸ್‌

(Nokia T21 Tablet launched in India. Know the Price, Specification and Discount)

Comments are closed.