ಕೊರೊನಾ ಭೀತಿ : ಭಾರತದಲ್ಲಿ ನಾಪತ್ತೆಯಾದ್ರು 495 ಇರಾನ್ ಪ್ರವಾಸಿಗರು

0

ನವದೆಹಲಿ : ವಿಶ್ವದಲ್ಲೆಡೆ ಕೊರೊನಾ ವೈರಸ್ ಮರಣ ಮೃದಂಗವನ್ನೇ ಬಾರಿಸುತ್ತಿದೆ. ದಿನೇ ದಿನೇ ಕೊರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದಲ್ಲಿಯೂ ಕೊರೊನಾ ವೈರಸ್ ಭೀತಿಯನ್ನು ಹುಟ್ಟುಹಾಕುತ್ತಿದೆ.

ಈ ನಡುವಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ವಿಶ್ವದಲ್ಲೇ ಮೂರನೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿರೋ ಇರಾನ್ ದೇಶದ 495 ಮಂದಿ ಪ್ರವಾಸಿಗರು ಇದೀಗ ಭಾರತದಲ್ಲಿ ನಾಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ.

ಚೀನಾ ದೇಶದ ಪ್ರಜೆಗಳೇ ವಿಶ್ವದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಇಟಲಿಯಲ್ಲಿಯೂ ಎರಡನೇ ಅತೀ ಹೆಚ್ಚು ಸಂಖ್ಯೆಯಲ್ಲಿ ಬಲಿಯಾಗಿದ್ರೆ ಮೂರನೇ ಸ್ಥಾನದಲ್ಲಿ ಇರಾನ್ ಇದೆ. ಇರಾನ್ ದೇಶದಲ್ಲಿ ಸುಮಾರು 124 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಭಾರತದಲ್ಲಿಯೂ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರೋ ಬೆನ್ನಲ್ಲೇ ಇರಾನ್ ದೇಶದಿಂದ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ಸುಮಾರು 495 ಮಂದಿ ನಾಪತ್ತೆಯಾಗಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕು ಹರಡೋದಕ್ಕೂ ಇರಾನ್ ಪ್ರಜೆಗಳು ನಾಪತ್ತೆಯಾಗಿರೋದಕ್ಕೂ ಕಾರಣವಾಗಿದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ಚೀನಾ ದೇಶದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದ್ರೆ, ಇರಾನ್ ದೇಶದಲ್ಲಿಯೂ ಸೋಂಕು ಕಾಣಿಸಿಕೊಂಡಿತ್ತು. ಆದ್ರೆ ಇರಾನ್ ತನ್ನ ದೇಶದ ಪ್ರಜೆಗಳಿಗೂ ಕೊರೊನಾ ಸೋಂಕು ತಗುಲಿದೆ ಅನ್ನೋ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ. ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಇರಾನ್ ದೇಶದಿಂದ ಸುಮಾರು 495 ಮಂದಿ ಪ್ರವಾಸಕ್ಕೆ ಬಂದಿದ್ದಾರೆ. ಹಲವರ ವಿಸಿಟಿಂಗ್ ವೀಸಾ ಅವಧಿ ಮುಗಿದಿದೆ. ಆದರೆ ಅವರ್ಯಾರೂ ತಮ್ಮ ದೇಶಕ್ಕೆ ವಾಪಾಸಾಗಿಲ್ಲ.

ಅಷ್ಟೊಂದು ಮಂದಿ ಎಲ್ಲಿದ್ದಾರೆ ಅನ್ನೋ ಕುರಿತು ಭಾರತ ಸರಕಾರಕ್ಕೂ ಮಾಹಿತಿಯಿಲ್ಲ. ಈ ನಡುವಲ್ಲೇ ಇರಾನ್ ಪ್ರಜೆಗಳಿಂದಲೇ ಭಾರತದಲ್ಲಿ ಸೋಂಕು ಹರಡಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿತ್ತು. ಭಾರತದಲ್ಲಿ ಪ್ರವಾಸಕ್ಕೆ ಬಂದಿರೋ ಇರಾನ್ ಪ್ರಜೆಗಳಿಗೂ ಕೊರೊನಾ ಸೋಂಕಿದ್ಯಾ ಅನ್ನೋ ಬಗ್ಗೆ ಮಾಹಿತಿಯಿಲ್ಲ. ಇರಾನ್ ದೇಶದಲ್ಲಿ ಹೆಚ್ಚುತ್ತಿರೋ ಕೊರೊನಾ ವೈರಸ್ ಅವಾಂತರಕ್ಕೆ ಹೆದರಿ ಪ್ರವಾಸಿಗರು ದೇಶದಲ್ಲಿ ನಾಪತ್ತೆಯಾಗಿರಬಹುದು ಅಂತಾ ಅಂದಾಜಿಸಲಾಗುತ್ತಿದೆ.

ಆದರೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರವೀಶ್ ಕುಮಾರ್ ಅವರು ಈ ಕುರಿತು ಹೇಳಿಕೆಯನ್ನು ನೀಡಿದ್ದಾರೆ. ಇರಾನ್ ಪ್ರಜೆಗಳಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ತೀರಾ ಕಡಿಮೆ. 495 ಮಂದಿ ಇರಾನ್ ನಿಂದ ಪ್ರವಾಸಕ್ಕೆ ಹೊರಡುವಾಗ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಹೀಗಾಗಿ ಅವರಿಗೆ ಕೊರೊನಾ ವೈರಸ್ ತಗುಲಿರೋ ಸಾಧ್ಯತೆ ತೀರಾ ಕಡಿಮೆ. ಇರಾನ್ ಪ್ರಜೆಗಳು ಎಲ್ಲಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಯಾರು ಕೂಡ ಭಯ ಪಡುವುದು ಬೇಡ ಎಂದಿದ್ದಾರೆ.

ಆದರೆ ಕೊರೊನಾಕ್ಕೆ ಬಲಿಯಾದವರ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿ ನಿಂತಿದೆ. ಮಾತ್ರವಲ್ಲ ಗಲ್ಪ್ ರಾಷ್ಟ್ರಗಳಿಗೂ ಕೂಡ ಕೊರೊನಾ ಇರಾನ್ ದೇಶದಿಂದಲೇ ಹರಡಿದೆ. ಹೀಗಾಗಿ ಇರಾನ್ ಪ್ರವಾಸಿಗರೇ ಇದೀಗ ದೇಶದಲ್ಲಿ ನಾಪತ್ತೆಯಾಗಿರೋದು ನಿಜಕ್ಕೂ ಆತಂಕ ಮೂಡಿಸಿದೆ. ಸರಕಾರ ಪ್ರವಾಸಿಗರನನ್ನ ಪತ್ತೆ ಹಚ್ಚಿದ್ರೆ ಮಾತ್ರ ಜನರಿಗೆ ಎದುರಾಗಿರೋ ಆತಂಕ ನಿವಾರಣೆಯಾಗೋದಕ್ಕೆ ಸಾಧ್ಯ.

Leave A Reply

Your email address will not be published.