ಮತ್ತೆ ತೆರೆಗೆ ಬರಲಿದೆ ದಿಗಂತ್ – ಪವನ್ ಕುಮಾರ್ ಕಾಂಬಿನೇಶನ್‌ನ ‘ಲೈಫು ಇಷ್ಟೇನೆ’ ಸಿನಿಮಾ

ರಿ ರಿಲೀಸ್ ಸದ್ಯ ಹೆಚ್ಚಿನ ಸಿನಿಮಾ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಟ್ರೆಂಡ್ ಆಗಿದೆ. ಈ ಹಿಂದೆಲ್ಲಾ ಆಗೊಮ್ಮೆ ಈಗೊಮ್ಮೆ ಸಿನಿಮಾಗಳು ಮರು ಬಿಡುಗಡೆಯಾಗುತ್ತಿದ್ದವು. ಅದರಲ್ಲೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ ಸಿನಿಮಾಗಳು, ಹೆಚ್ಚು ಕಲೆಕ್ಷನ್ ಮಾಡಿದ್ದ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗ ತಿಂಗಳಗೊಂದು ಸಿನಿಮಾವಾದರೂ ಮರು ಬಿಡುಗಡೆಯಾಗುವುದು ಖಚಿತ. ಅದರಲ್ಲಿಯೂ ತೆಲುಗಿನಲ್ಲಿ ದೊಡ್ಡ ಸ್ಟಾರ್ ನಟರ ಹುಟ್ಟುಹಬ್ಬದ ಪ್ರಯುಕ್ತ ಆ ನಟರ ಸೂಪರ್‌ ಹಿಟ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗಿತ್ತು. ಆ‍ಶ್ಚರ್ಯವೆಂದರೆ ಈ ಸಿನಿಮಾಗಳೂ ಸಹ ಕೋಟಿ ಕೋಟಿ ಗಳಿಸಿದವು. ಇದೀಗ ಸ್ಯಾಂಡಲ್‌ವುಡ್‌ ನಿರ್ದೇಶಕ ಪವನ್ ಕುಮಾರ್ ಈ ಕುರಿತು ಪೋಸ್ಟ್ (Lifeu Ishtene movie) ಹಂಚಿಕೊಂಡಿದ್ದಾರೆ.

ಹೀಗೆ ಸೂಪರ್‌ ಹಿಟ್‌ ಸಿನಿಮಾಗಳಿಂದಲೂ ಗಳಿಕೆ ಬರುತ್ತಿದೆ ಎಂಬುದನ್ನು ತಿಳಿದ ತೆಲುಗು ಸಿನಿಮಾ ನಿರ್ಮಾಪಕರು ಹಾಗೂ ವಿತರಕರು ಮತ್ತಷ್ಟು ಸಿನಿಮಾಗಳನ್ನು ಮರು ಬಿಡುಗಡೆ ಮಾಡಲು ನಿರ್ಧರಿಸಿದರು. ಇನ್ನು ಕೆಲ ಸಿನಿಮಾಗಳನ್ನು ದುಡ್ಡು ಮಾಡಲು ಮರು ಬಿಡುಗಡೆ ಮಾಡಿದರೆ, ಇನ್ನೂ ಕೆಲ ಸಿನಿಮಾಗಳನ್ನು ಸಂದರ್ಭಕ್ಕೆ ತಕ್ಕಂತೆ ಜನರಿಗೆ ಮನರಂಜನೆ ನೀಡಲು ಮರು ಬಿಡುಗಡೆ ಮಾಡಲಾಗುತ್ತದೆ. ಇದೀಗ ಅಂತಹದ್ದೇ ಸಿನಿಮಾವಾದ ದಿಗಂತ್ ನಟನೆಯ ಲೈಫು ಇಷ್ಟೇನೆ ಮರುಬಿಡುಗಡೆಯಾಗಲು ಸಿದ್ಧವಾಗಿದೆ.

ಹೌದು, 2011ರಲ್ಲಿ ತೆರೆಕಂಡಿದ್ದ ಪವನ್ ಕುಮಾರ್ ನಿರ್ದೇಶನದ ಮೊದಲ ಸಿನಿಮಾ ಲೈಫು ಇಷ್ಟೇನೆ ಸಿನಿಮಾವನ್ನು ಆಯ್ದ ಸಿನಿಮಂದಿರಗಳಲ್ಲಿ ಇದೇ ಫೆಬ್ರವರಿ 10ರಂದು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ನಿರ್ದೇಶಕ ಪವನ್ ಕುಮಾರ್ ಪೋಸ್ಟ್ ಹಂಚಿಕೊಂಡಿದ್ದು, ಪ್ರೇಮಿಗಳ ದಿನಾಚರಣೆಯ ವಾರದ ಪ್ರಯುಕ್ತ ಲೈಫು ಇಷ್ಟೇನೆ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಹಾಗೂ ಪಂಚರಂಗಿ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದರು.

ಇದನ್ನೂ ಓದಿ : ದೊಡ್ಮನೆ ಹುಡ್ಗ ಯುವರಾಜ್‌ ಕುಮಾರ್‌ ಜೊತೆ ಪಠಾಣ್ ಸಕ್ಸಸ್ ಆಚರಿಸಿದ ಶಾರುಖ್ ಫ್ಯಾನ್ಸ್

ಇದನ್ನೂ ಓದಿ : ದೊಡ್ಮನೆ ಹುಡ್ಗ ಯುವರಾಜ್‌ ಕುಮಾರ್‌ ಜೊತೆ ಪಠಾಣ್ ಸಕ್ಸಸ್ ಆಚರಿಸಿದ ಶಾರುಖ್ ಫ್ಯಾನ್ಸ್

ಇದನ್ನೂ ಓದಿ : Meghana Raj Chiranjeevi Sarja : ಪಯಣ ಪ್ರೀತಿಯ ಜೊತೆಗೆ : ಮೇಘನಾ ರಾಜ್‌ -ಚಿರಂಜೀವಿ ಸರ್ಜಾ ಹೊಸ ಪೋಟೋ ವೈರಲ್

ಇನ್ನು ಲೈಫು ಇಷ್ಟೇನೆ ಬಳಿಕ ಲೂಸಿಯಾ ಹಾಗೂ ಯು ಟರ್ನ್ ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದ ಪವನ್ ಕುಮಾರ್ ಲೈಲಾ ಹಾಗೂ ಕುಡಿ ಎಡಮೈತೆ ಎಂಬ ವೆಬ್ ಸರಣಿಗಳನ್ನೂ ಸಹ ನಿರ್ದೇಶಿಸಿದ್ದರು. ಇನ್ನು ಯು ಟರ್ನ್ ಬಳಿಕ ಯಾವುದೇ ಸಿನಿಮಾವನ್ನೂ ಸಹ ನಿರ್ದೇಶಿಸದಿದ್ದ ಪವನ್ ಕುಮಾರ್ ಈಗ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಧೂಮಮ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಹಾಗೂ ಅಪರ್ಣ ಬಾಲಮುರಳಿ ನಾಯಕ – ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

Lifeu Ishtene movie : Diganth-Pawan Kumar combination movie ‘Lifeu Ishtene’ will hit the screen again

Comments are closed.