Shaheen Shah Afridi Wedding : ಶಾಹೀದ್ ಅಫ್ರಿದಿ ಪುತ್ರಿಯನ್ನು ಮದುವೆಯಾದ ಶಾಹೀನ್ ಶಾ ಆಫ್ರಿದಿ

ಕರಾಚಿ: ಪಾಕಿಸ್ತಾನ ತಂಡದ ಯುವ ಎಡಗೈ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Shah Afridi), ಪಾಕಿಸ್ತಾನದ ದಿಗ್ಗಜ ಆಲ್ರೌಂಡರ್ ಶಾಹೀದ್ ಅಫ್ರಿದಿ ಅವರ ಪುತ್ರಿಯ ಜೊತೆ ಗೃಹಸ್ಥಾಶ್ರಮಕ್ಕೆ (Shaheen Shah Afridi Wedding) ಕಾಲಿಟ್ಟಿದ್ದಾರೆ.ಕರಾಚಿಯಲ್ಲಿ ಶುಕ್ರವಾರ ರಾತ್ರಿ ಕುಟುಂಬ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಶಾಹೀನ್ ಶಾ ಅಫ್ರಿದಿ ಮತ್ತು ಶಾಹೀದ್ ಅಫ್ರಿದಿಯ ಅವರ ಪುತ್ರಿ ಅನ್ಷಾ ಅಫ್ರಿದಿ ಮದುವೆ ನಡೆದಿದೆ.

ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟಿಗರ ಪಾಲಿಗೆ ಇದು ಮದುವೆ ಸೀಸನ್. ಇತ್ತೀಚೆಗಷ್ಟೇ ಪಾಕಿಸ್ತಾನ ತಂಡದ ಮತ್ತೊಬ್ಬ ವೇಗದ ಬೌಲರ್ ಹ್ಯಾರಿಸ್ ರೌಫ್ ಮತ್ತು ಪಾಕ್ ತಂಡದ ಸ್ಟಾರ್ ಆಲ್ರೌಂಡರ್ ಶದಾಬ್ ಖಾನ್ ಮದುವೆಯಾಗಿದ್ದರು. ಇದೇ ವೇಳೆ ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಕೆ.ಎಲ್ ರಾಹುಲ್ ಮತ್ತು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಇತ್ತೀಚೆಗಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು.

22 ವರ್ಷದ ಶಾಹೀನ್ ಶಾ ಅಫ್ರಿದಿ ಮತ್ತು ಅನ್ಷಾ ಅಫ್ರಿದಿ ಅವರ ನಿಖಾ ಕಾರ್ಯಕ್ರಮ ಮತ್ತು ದಿವಾತ್-ಇ-ವಲಿಮಾ (ಮದುವೆ ರಿಸೆಪ್ಷನ್) ಶುಕ್ರವಾರ ನಡೆದಿದೆ. ಅದ್ಧೂರಿ ಮದುವೆ ಕಾರ್ಯಕ್ರಮಕ್ಕೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್, ಮಾಜಿ ನಾಯಕ ಸರ್ಫರಾಜ್ ಅಹ್ಮದ್, ಯುವ ವೇಗಿ ನಸೀಮ್ ಶಾ, ಶದಾಬ್ ಖಾನ್ ಸಹಿತ ಹಲವರು ಸಾಕ್ಷಿಯಾದರು. ಶಾಹೀನ್ ಅಫ್ರಿದಿಯ ನಿಖಾ ಕಾರ್ಯಕ್ರಮದ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ತಂಡದ ಸಹಪಾಠಿ ಶಾಹೀನ್ ಶಾ ಅಫ್ರಿದಿಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಟ್ವಿಟರ್ ಮೂಲಕ ಶುಭ ಹಾರೈಸಿದ್ದಾರೆ.

ಗೆಳೆಯನ ಮದುವೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ರಿಜ್ವಾನ್ ಕೂಡ ವಿಶೇಷ ಟ್ವಿಟರ್ ವೀಡಿಯೊ ಮೂಲಕ ಶಾಹೀನ್ ಅಫ್ರಿದಿಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ : Exclusive: ಧೂಳು ತುಂಬಿದ ಬೆಂಗಳೂರು ಪಿಚ್’ನಲ್ಲಿ ಎಲ್ಲಿ ನೋಡಿದ್ರೂ ಕ್ರ್ಯಾಕ್, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಕಾಂಗರೂಗಳ ಅಭ್ಯಾಸ ಹೇಗಿದೆ ಗೊತ್ತಾ?

ಇದನ್ನೂ ಓದಿ : MS Dhoni Police look: ಪೊಲೀಸ್ ಅವತಾರದಲ್ಲಿ ಎಂ.ಎಸ್ ಧೋನಿ : ಮಾಹಿಯ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ

ಇದನ್ನೂ ಓದಿ : Washington Sundar : ಟೀಮ್ ಇಂಡಿಯಾ ಸ್ಟಾರ್ ವಾಷಿಂಗ್ಟನ್ ಸುಂದರ್‌ಗೆ ಒಂದು ಕಿವಿ ಕಿವುಡು; ಅಚ್ಚರಿಯಾದ್ರೂ ಇದು ಸತ್ಯ

ಅನ್ಷಾ ಅಫ್ರಿದಿ (Ansha Afridi) ಪಾಕಿಸ್ತಾನ ಕ್ರಿಕೆಟ್’ನ ದಿಗ್ಗಜ ಶಾಹೀದ್ ಅಫ್ರಿದಿಯವರ 2ನೇ ಪುತ್ರಿ. ಇಂಗ್ಲೆಂಡ್’ನಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಅನ್ಷಾ ಅಫ್ರಿದಿ 2021ರಲ್ಲಿ ಶಾಹೀದ್ ಶಾ ಅಫ್ರಿದಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Shaheen Shah Afridi Wedding : Shaheen Shah Afridi gets married to Shahid Afridi’s daughter

Comments are closed.