Vani Jayaram passed away : ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಇನ್ನಿಲ್ಲ

ಭಾರತ ಸಿನಿರಂಗದ ಖ್ಯಾತ ಹಿನ್ನಲೆ ಗಾಯಕಿ ವಾಣಿ ಜಯರಾಂ (Vani Jayaram passed away) ಇಹಲೋಕವನ್ನು ತ್ಯಜಿಸಿದ್ದಾರೆ. ಅವರು ದಕ್ಷಿಣ ಭಾರತೀಯ ಸಿನಿರಂಗದ ಹಿನ್ನಲೆ ಗಾಯಕಿಯಾಗಿ ಪ್ರಸಿದ್ದಿಯನ್ನು ಪಡೆದಿದ್ದಾರೆ.

ತಮಿಳುನಾಡಿನ ಚೆನ್ನೈನ ತಮ್ಮ ಮನೆಯಲ್ಲಿ ವಾಣಿ ಜಯರಾಂ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರಕಾರ ಅವರಿಗೆ ಪದ್ಮಭೂಷಣ ಪ್ರಶ್ತಿಯನ್ನು ಘೋಷಿಸಿತ್ತು. ವಾಣಿಜಯರಾಂ ಕನ್ನಡ, ಹಿಂದಿ ತೆಲುಗು, ತಮಿಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ ಹಾಗೂ ಬಂಗಾಳಿ ಭಾಷೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹಾಡಗಳನ್ನು ತಮ್ಮ ಅದ್ಭುತ ಕಂಠಸಿರಿಯಿಂದ ಹಾಡಿದ್ದಾರೆ. ವಾಣಿ ಜಯರಾಂ ಅವರು 1945ರಲ್ಲಿ ತಮಿಳುನಾಡಿನ ವೆಲ್ಲೋರ್‌ ಎಂಬಲ್ಲಿ ಜನಿಸಿದರು. ಇವರು ಬಾಲ್ಯದಿಂದಲೇ ಸಂಗೀತದಲ್ಲಿ ಸಾಕಷ್ಟು ಅಭಿರುಚಿ ಹೊಂದಿದ್ದರು.

ಇದನ್ನೂ ಓದಿ : Meghana Raj Chiranjeevi Sarja : ಪಯಣ ಪ್ರೀತಿಯ ಜೊತೆಗೆ : ಮೇಘನಾ ರಾಜ್‌ -ಚಿರಂಜೀವಿ ಸರ್ಜಾ ಹೊಸ ಪೋಟೋ ವೈರಲ್

ಇದನ್ನೂ ಓದಿ : ದೊಡ್ಮನೆ ಹುಡ್ಗ ಯುವರಾಜ್‌ ಕುಮಾರ್‌ ಜೊತೆ ಪಠಾಣ್ ಸಕ್ಸಸ್ ಆಚರಿಸಿದ ಶಾರುಖ್ ಫ್ಯಾನ್ಸ್

ಇದನ್ನೂ ಓದಿ : ಮತ್ತೆ ತೆರೆಗೆ ಬರಲಿದೆ ದಿಗಂತ್ – ಪವನ್ ಕುಮಾರ್ ಕಾಂಬಿನೇಶನ್‌ನ ‘ಲೈಫು ಇಷ್ಟೇನೆ’ ಸಿನಿಮಾ

ಜೊತೆಗೆ, ಅವರು ಸಾವಿರಾರು ಭಕ್ತಿಗೀತೆಗಳು ಮತ್ತು ಖಾಸಗಿ ಆಲ್ಬಂಗಳನ್ನು ರೆಕಾರ್ಡ್ ಮಾಡಿದರು ಮತ್ತು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಏಕವ್ಯಕ್ತಿ ಸಂಗೀತ ಕಚೇರಿಗಳಲ್ಲಿ ಭಾಗವಹಿಸಿದರು. ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಆಗಿದ್ದ ವಾಣಿ ಜಯರಾಂ ಅವರು ತಮ್ಮ ವ್ಯಾಸಂಗ ವನ್ನು ಪೂರ್ಣಗೊಳಿಸಿದ ಮೇಲೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದರು. ವಿವಾಹ ಬಳಿಕ ಚೆನ್ನೈನಿಂದ ವಾಣಿಜ್ಯ ನಗರಿ ಮುಂಬೈಗೆ ಸ್ಥಳಾಂತರಗೊಂಡ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದು ಅದನ್ನು ಕರಗತ ಮಾಡಿಕೊಂಡರು. ಇವರಿಗೆ ಸಂಗೀತ ಕ್ಷೇತ್ರಕ್ಕೆ ಅವರ ಪತಿ ಸಾಥ್‌ ನೀಡಿದರು.

ಇದನ್ನೂ ಓದಿ : Vadiraja Swami: ಹಯವದನ ನಿರ್ದೇಶನದಲ್ಲಿ ಬೆಳ್ಳಿತೆರೆ ಮೇಲೆ ಬರಲಿದೆ ಶ್ರೀ ವಾದಿರಾಜ ಸ್ವಾಮಿಗಳ ಜೀವನಾಧಾರಿತ ಕಥೆ

Vani Jayaram passed away : Vani Jayaram, the famous playback singer of Indian cinema, has left this world.

Comments are closed.