Vijayalakshmi Darshan : ಸತ್ಯ ಸಿಂಹ ಇದ್ದ ಹಾಗೆ, ಯಾರೂ ರಕ್ಷಿಸಬೇಕಾಗಿಲ್ಲ ಎಂದ ವಿಜಯಲಕ್ಷ್ಮಿ ದರ್ಶನ್!

ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ಹಾಗೂ ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣ ಉಂಟು ಮಾಡಿದ ನೋವಿನಿಂದ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ತಮ್ಮ ಅಭಿಮಾನಿಗಳಿಗೆ ಮನೆಯ ಬಳಿಯೇ ಹುಟ್ಟುಹಬ್ಬದಂದ ದರ್ಶನ ನೀಡಿದ್ದರು. ಹೀಗೆ ಹಲವು ಖುಷಿಗಳಿಗೆ ಕಾರಣವಾಗಿದ್ದ ದರ್ಶನ್ ಹುಟ್ಟುಹಬ್ಬ ದಿನ ಕಳೆದ ನಂತರ ಪುಟ್ಟದೊಂದು ವಿವಾದ ಹಾಗೂ ಆಕ್ರೋಶಕ್ಕೂ ಸಹ ಕಾರಣವಾಗಿದೆ. ಹೌದು, ಕಿರುತೆರೆ ನಟಿ ಮೇಘಾ ಶೆಟ್ಟಿ ಹಾಗೂ ಪವಿತ್ರ ಗೌಡ ಸೇರಿದಂತೆ ಹಲವರು ದರ್ಶನ್ ಅವರ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿದ್ದರು. ಇದು ದರ್ಶನ್‌ ಪತ್ನಿಗೆ ಬೇಸರ ತಂದಿದ್ದು, ಅದರ ಬಗ್ಗೆ ವಿಜಯಲಕ್ಷ್ಮೀ (Vijayalakshmi Darshan) ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೇ ನಟ ದರ್ಶನ್‌ ಹುಟ್ಟುಹಬ್ಬ ಸಂಭ್ರಮಾಚರಣೆಯ ವಿಡಿಯೊವನ್ನೂ ಸಹ ಹಂಚಿಕೊಂಡಿದ್ದ ಮೇಘಾ ಶೆಟ್ಟಿ ಬೃಂದಾವನ ಸಿನಿಮಾದ ‘ಹಾರ್ಟಲ್ಲಿರೋ ಹಾರ್ಮೋನಿಯಂ’ ಹಾಡನ್ನು ಬಳಸಿ ಪೋಸ್ಟ್ ಹಾಕಿದ್ದರು. ಈ ವಿಡಿಯೊ ವಿರುದ್ಧ ನಟ ದರ್ಶನ್ ಧರ್ಮಪತ್ನಿ ವಿಜಯಲಕ್ಷ್ಮಿ ಕಿಡಿಕಾರಿದ್ದರು. ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿದ್ದ ವಿಜಯಲಕ್ಷ್ಮಿ ದರ್ಶನ್ ಇಂತಹ ವಿಡಿಯೊಗಳನ್ನು ಹಂಚಿಕೊಳ್ಳಬೇಡಿ ಎಂದು ಬರೆದುಕೊಂಡು ನೇರವಾಗಿ ಮೇಘಾ ಶೆಟ್ಟಿಗೆ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಸದ್ಯ ಎಲ್ಲರ ಚಿತ್ತ ವಿಜಯಲಕ್ಷ್ಮಿ ದರ್ಶನ್ ಇನ್ಸ್ಟಾಗ್ರಾಮ್ ಖಾತೆ ಮೇಲಿದ್ದು, ಪ್ರತಿ ಸ್ಟೋರಿಯನ್ನೂ ಸಹ ಹಲವು ಸಿನಿ ರಸಿಕರು ಗಮನಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ವಿಜಯಲಕ್ಷ್ಮಿ ದರ್ಶನ್ ಹಾಕಿರುವ ಸ್ಟೋರಿಯೊಂದು ನೆಟ್ಟಿಗರ ಗಮನ ಸೆಳೆದಿದೆ.

ಇದನ್ನೂ ಓದಿ : Kranti Movie OTT : ಸಿನಿಮಾ ಬಿಡುಗಡೆಯಾದ ಒಂದು ತಿಂಗಳಿಗೆ ಓಟಿಟಿಗೆ ಲಗ್ಗೆ ಇಟ್ಟ “ಕ್ರಾಂತಿ”

ಇದನ್ನೂ ಓದಿ : Director Bhagwan : ದೊರೈ, ಅಣ್ಣಾವ್ರು, ವರದಪ್ಪ ಉದಯಶಂಕರ್‌ ಕಳಕೊಂಡು ಒಂಟಿಯಾಗಿದ್ದ ನಿರ್ದೇಶಕ ಭಗವಾನ್

ಇದನ್ನೂ ಓದಿ : TRP rating of serials : ಕನ್ನಡ ಸೀರಿಯಲ್‌ಗಳ ಟಿಆರ್‌ಪಿ ರೇಟಿಂಗ್ ಡಿಟೈಲ್ಸ್ : ಯಾರಿಗೆ ಮೊದಲ ಸ್ಥಾನ? ಯಾರಿಗೆ ಕೊನೆ ಸ್ಥಾನ?

ಹೌದು, ವಿಜಯಲಕ್ಷ್ಮಿ ದರ್ಶನ್ ‘ಸತ್ಯ ಸಿಂಹ ಇದ್ದ ಹಾಗೆ, ಯಾರೂ ರಕ್ಷಿಸಬೇಕಾಗಿಲ್ಲ, ಅದನ್ನು ಸೋಲಲು ಬಿಡಿ, ಅದನ್ನು ಅದೇ ರಕ್ಷಿಸಿಕೊಳ್ಳಲಿದೆ’ ಎಂದು ಬರೆದಿರುವ ಸಾಲುಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸತ್ಯ ಯಾವತ್ತಿಗೂ ಸೋಲುವುದಿಲ್ಲ, ಸಾಯುವುದಿಲ್ಲ, ಅದಕ್ಕೆ ರಕ್ಷಣೆ ಬೇಕಾಗಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ ತಿಳಿಸಿದ್ದು, ಈ ಸ್ಟೋರಿ ಬಗ್ಗೆ ಸದ್ಯ ಚರ್ಚೆ ಜೋರಾಗಿದೆ. ಇನ್ನು ಈ ಎಲ್ಲಾ ವಿದ್ಯಾಮಾನಗಳನ್ನು ಗಮನಿಸಿರುವ ದರ್ಶನ್ ಅಭಿಮಾನಿಗಳು ಮೇಘಾ ಶೆಟ್ಟಿ ಹಾಗೂ ಪವಿತ್ರ ಗೌಡ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳುವಾಗ ಎಚ್ಚರಿಕೆ ಇರಲಿ, ಅಳತೆ ಮೀರಿ ಮನಸ್ಸಿಗೆ ಬಂದ ಹಾಗೆ ಫೋಟೊಗಳನ್ನು ಹಾಕಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.

Like Satya Simha, Vijayalakshmi Darshan said that no one needs to be saved!

Comments are closed.