Electric elephant: ಕೇರಳದ ದೇಗುಲಕ್ಕೆ ಬಂತು ಎಲೆಕ್ಟ್ರಿಕ್‌ ಆನೆ!: ಫೆ 26 ರಂದು ದೇವಸ್ಥಾನಲ್ಲೆ ಅರ್ಪಣೆ

ತಿರುವನಂತಪುರ: (Electric elephant) ದೇವಸ್ಥಾನದ ಉತ್ಸವಗಳಲ್ಲಿ ಆನೆ ಮೆರವಣಿಗೆ ನೋಡುವುದು ಕಣ್ಣಿಗೆ ಆನಂದ. ಆದರೆ ಆ ಆನೆಗಳನ್ನು ಸಾಕುವುದು ತುಂಬಾ ಕಷ್ಟ ಹಾಗೂ ದುಬಾರಿಯ ಕೆಲಸ. ಕೊಲವೊಮ್ಮೆ ದೇವಾಲದ ಉತ್ಸವದ ಸಮಯದಲ್ಲಿ ಆನೆಗಳು ನೀಡುವ ಉಪಟಳಕ್ಕೆ ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಬೇಸತ್ತು ಹೋಗುತ್ತಾರೆ. ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯಲು ಮುಂದಾಗಿರುವ ಕೇರಳದ ದೇವಾಲಯ ಇಲೆಕ್ಟ್ರಿಕ್‌ ಆನೆಯನ್ನು ಪರಿಚಯಿಸುತ್ತಿದೆ.

ದೇವಾಲಯದ ಆಚರಣೆಗಳಿಗೆ ಆನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವಲ್ಲಿ ಹೆಚ್ಚುತ್ತಿರುವ ವೆಚ್ಚಗಳು ಹಾಗೂ ಆನೆಗಳಿಂದ ಮನವನ ಮೇಲೆ ಹೆಚ್ಚುತ್ತಿರುವ ದಾಳಿಗಳು ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಬಳಿಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಾಲಯದಲ್ಲಿ ಇ-ಆನೆ ನಿರ್ಮಿಸಲು ಪ್ರೇರೇಪಿಸಿತು.ಲೋಹ, ರಬ್ಬರ್ ಶೀಟ್‌ಗಳು ಮತ್ತು ಮೋಟಾರ್‌ಗಳನ್ನು ಬಳಸಿ ತಯಾರಿಸಲಾದ ಸುಮಾರು 11 ಅಡಿ ಎತ್ತರದ ಇ-ಆನೆ ತನ್ನ ತಲೆ, ಕಿವಿ ಮತ್ತು ಬಾಲವನ್ನು ಚಲಿಸುಂತೆ ಮಾಡಲಾಗಿದೆ. ಅದರ ಪಾದಗಳಿಗೆ ಚಕ್ರಗಳನ್ನು ಜೋಡಿಸಿ ಅದನ್ನು ಎಳೆಯುವ ಮೂಲಕ ಚಲಿಸುವಂತೆ ಮಾಡಬಹುದು. ನಾಲ್ಕು ಜನರು ಅದರ ಮೇಲೆ ಕುಳಿತುಕೊಳ್ಳಬಹುದು.ಇ-ಆನೆಗೆ ಇರಿಂಜದಪ್ಪಿಲ್ಲಿ ರಾಮನ್ ಎಂದು ಹೆಸರಿಸಲಾಗಿದ್ದು, ಇದು ಕೇರಳದ ತೆಚಿಕೊಟ್ಟುಕಾವು ರಾಮಚಂದ್ರನ್ ಎಂಬ ಜನಪ್ರಿಯ ಆನೆಯನ್ನು ಹೋಲುತ್ತದೆ.

ಇದು ಮೊದಲ ಇ-ಆನೆಯಾಗಿರಬಹುದು. ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಆಚರಣೆಗೆ ಬಳಸುತ್ತಾರೆ. ಚಾಲಕುಡಿಯ ಸ್ಥಳೀಯರಾದ ಪ್ರಶಾಂತ, ಸ್ಯಾಂಟೋ, ಜಿನೇಶ ಮತ್ತು ರಾಬಿನ್ ಎಂಬ ನಾಲ್ವರು ಶಿಲ್ಪಿಗಳು ಇದನ್ನು ತಯಾರಿಸಿದ್ದಾರೆ. ‘ಮಾವುತ ಸೊಂಡಿಲಿನ ಚಲನವಲನವನ್ನು ನಿಯಂತ್ರಿಸುವ ರೀತಿಯಲ್ಲಿ ಆನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು 11 ಅಡಿ ಎತ್ತರವಿದೆ. 800 ಕೆ.ಜಿ ತೂಕವಿದೆ. ಅದರ ಸೊಂಡಿಲ ಮೂಲಕವೂ ನೀರು ಸಿಂಪಡಿಸಬಹುದು ಎಂದು ಪ್ರಶಾಂತ ಹೇಳಿದ್ದಾರೆ. ಭಕ್ತರು ಕಾಣಿಕೆ ನೀಡುವ ರೋಬೋಟಿಕ್ ಆನೆಯ ನಿರ್ಮಾಣ ವೆಚ್ಚ 5 ಲಕ್ಷ ರೂ.ಗಳು ಎಂದು ಹೇಳಲಾಗಿದೆ. ಇದೇ ತಿಂಗಳ 26 ರಂದು ಇರಿಂಜದಪ್ಪಿಲ್ಲಿ ರಾಮನ್‌ ಆನೆಯ ಪ್ರತಿಷ್ಠಾಪನೆ ಇರಿಂಜಲಕುಡ ಸಮೀಪದ ಕಲ್ಲೇತುಂಕಾರ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : ಹಸಿವೇ ತಡೆಯೋದಿಲ್ಲ ಶೀಕೃಷ್ಣ: ಬಾರಿ, ಬಾರಿ ನಡೆಯುತ್ತೆ ನೈವೇದ್ಯ ಸೇವೆ, ಕೈ ಮುಗಿದ್ರೆ ಬರೋದಿಲ್ಲ ಊಟಕ್ಕೆ ಕುತ್ತು

ಇದನ್ನೂ ಓದಿ : Entry of the new Brahmaratha: ನೀಲಾವರದ ಮಹಿಷಮರ್ಧಿನಿ ಸನ್ನಿಧಾನಕ್ಕೆ ನೂತನ ಬ್ರಹ್ಮರಥದ ಪುರಪ್ರವೇಶ

ಇದನ್ನೂ ಓದಿ : ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ 2023: ಹಿಂದೂಗಳಿಗೆ ಆದರ್ಶವಾಗಿದ್ದ ವ್ಯಕ್ತಿತ್ವ ಶಿವಾಜಿ

Electric elephant: Electric elephant came to the temple in Kerala!: Offering in the temple on February 26

Comments are closed.