“ಘಜನಿ” ಸಿನಿಮಾ ನಿರ್ಮಾಪಕ ಮಧು ಮಾಂಟೇನಾ ತಂದೆ ನಿಧನ : ಸಂತಾಪ ಸಲ್ಲಿಸಿದ ಸಿನಿತಾರೆಯರು

ಬಾಲಿವುಡ್‌ ಹೆಸರಾಂತ ಸಿನಿಮಾ ನಿರ್ಮಾಫಕ ಹಾಘೂ ವಿತರಕ ಮಧು ಮಾಂಟೇನಾ (Madhu Mantena) ತಂದೆ ಮುರಳಿ ರಾಜು ಇಹಲೋಕವನ್ನು ತ್ಯಜಿಸಿದ್ದಾರೆ. ಕಳೆದ ಹಲವು ದಿನಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಮುರಳಿ ಕೃಷ್ಣ ಚಿಕಿತ್ಸೆ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಮಾರ್ಚ್ 7) ವಿಧಿವಶರಾಗಿದ್ದಾರೆ. “ಘಜನಿ” ಸಿನಿಮಾ ನಿರ್ಮಾಣದಿಂದ ಪ್ರಖ್ಯಾತಿ ಪಡೆದಿರುವ ಮಧು ಮಾಂಟೇನಾ ತಂದೆ ನಿಧನದ ಸುದ್ದಿ ತಿಳಿದ ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಹಾಗೂ ಟಾಲಿವುಡ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಇಬ್ಬರೂ ಸಂತಾಪ ಸಲ್ಲಿಸಿದ್ದಾರೆ.

ಇನ್ನು ನಿರ್ಮಾಪಕ ಮಧು ಮಾಂಟೇನಾ ಬಾಲಿವುಡ್‌ ಮಾತ್ರವಲ್ಲದೇ, ತೆಲುಗು ಹಾಗೂ ಬೆಂಗಾಲಿ ಭಾಷೆಯ ಸಿನಿಮಾಗಳನ್ನು ನಿರ್ಮಾಣ ಮಾಡಿ, ವಿತರಣೆಯನ್ನು ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬಾಲಿವುಡ್ ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಸಿನಿರಂಗದ ನಟ- ನಟಿಯರೊಂದಿಗೂ ಉತ್ತಮ ಬಾಂಧವ್ಯವವನ್ನು ಹೊಂದಿದ್ದಾರೆ. ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ಮಧು ಮಾಂಟೇನಾ ಭಾರತೀಯ ಸಿನಿರಂಗಕ್ಕೆ ಕೊಟ್ಟಿದ್ದಾರೆ.

ಬಾಲಿವುಡ್‌ ಸೂಪರ್‌ಹಿಟ್‌ “ಘಜನಿ” ಸಿನಿಮಾ ನಿರ್ಮಾಣ ಮಾಡುವ ಮೂಲಕ ಆ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2010ರಲ್ಲಿ ಮೂರು ಭಾಷೆಯಲ್ಲಿ ‘ರಕ್ತ ಚರಿತ’ ಸಿನಿಮಾ ಮಾಡಿದ್ದರು. ಅದು ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿತ್ತು. ಕಿಚ್ಚ ಸುದೀಪ್ ಹಾಗೂ ಅಮಿತಾಭ್ ಬಚ್ಚನ್ ಅಭಿನಯದ ‘ರನ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಹಾಗೇ ಬೆಂಗಾಲಿ ಭಾಷೆಯಲ್ಲಿ ‘ಆಟೋಗ್ರಾಫ್’ ಅನ್ನೋ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ : ನಟ ಯಶ್‌ ರಾಧಿಕಾಗೆ ನೀಡಿದ ಮೊದಲ ಗಿಫ್ಟ್ ಯಾವುದು ? ರಾಧಿಕಾ ಶೇರ್ ಮಾಡಿದ್ರು ಎಕ್ಸಕ್ಲೂಸಿವ್ ಪೋಟೋ

ಇದನ್ನೂ ಓದಿ : ಕಚಾ ಬಾದಮ್ ಗಾಯಕ ಭುವನ್ ಬಡ್ಯಾಕರ್ ಸಂಕಷ್ಟ : ವೈರಲ್ ಆಯ್ತು ಪೋಸ್ಟ್‌

ಇದನ್ನೂ ಓದಿ : ನಟ ರಮೇಶ್ ಅಭಿಮಾನಿಗಳಿಗೆ ಸಿಹಿಸುದ್ದಿ : ಮತ್ತೆ ಬರ್ತಿದ್ದಾರೆ ಶಿವಾಜಿ ಸುರತ್ಕಲ್

ಇತ್ತೀಚೆಗೆ ಮಧು ಮಾಂಟೇನಾ ’83’, ‘ಉಡ್ತಾ ಪಂಜಾಬ್’, ‘ಸೂಪರ್‌ 30’ ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಬಾಲಿವುಡ್‌ ನಿರ್ದೇಶಕರಾದ ಅನುರಾಗ್ ಕಶ್ಯಪ್, ವಿಕಾಸ್ ಬೆಹ್ಲ್, ವಿಕ್ರಮಾದಿತ್ಯ ಮೋಟ್ವಾನೆ ಜೊತೆ ಸೇರಿ ಫಾಂಟಮ್ ಫಿಲ್ಮ್ಸ್ ಅನ್ನೋ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಸಂಸ್ಥೆಯ ಮೂಲಕ ಲೂಟೇರಾ (2013), ಕ್ವೀನ್ (2014), ‘ಹಸ್ಸಿ ಥೊ ಫಸ್ಸಿ’ (2014), ಬಾಂಬೆ ವಾಲ್ವೆಟ್, ಅಗ್ಲಿ, ಮಸಾನ್ ಅಂತಹ ಸಿನಿಮಾಗಳನ್ನೂ ನಿರ್ಮಾಣ ಮಾಡಿದ್ದಾರೆ. ಬಿಗ್ ಹಿಟ್‌ಗಳನ್ನೇ ನೀಡಿರುವ ಮಧು ಮಾಂಟೇನಾ ಈಗ ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಇದ್ದಾರೆ. ಹೀಗಾಗಿ ಇಡೀ ಭಾರತೀಯ ಸಿನಿತಂಡ ಮಧು ಮಾಂಟೇನಾ ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿ, ತಂದೆಯ ನಿಧನಕ್ಕೆ ಸಂತಾಪ ಸಲ್ಲಿಸಿದ್ದಾರೆ.

Madhu Mantena: “Ghajani” producer Madhu Mantena’s father passes away: film stars offer condolences

Comments are closed.