ಬಿಗ್ ಬಾಸ್ ವಿನ್ನರ್ ಅನೌನ್ಸ್! 98 ದಿನಗಳಲ್ಲಿ ಕೋಟಿ ದುಡಿದ ಚೆಲುವೆ

Malayalam Bigg boss Winner : ಈಗಲಂತೂ ಎಲ್ಲಿ ಕೇಳಿದರೂ ʼಬಿಗ್‌ ಬಾಸ್‌ʼ ಶೋದೇ ಹವಾ. ಯಾವ ಭಾಷೆಯಲ್ಲಿ ನೋಡಿದರೂ ಬಿಗ್‌ ಬಾಸ್‌ದೇ ಹಾವಳಿ ಅಂದ್ರೂ ತಪ್ಪಾಗಲ್ಲ. ಈ ವರ್ಷವೂ ಕೂಡಾ ಎಲ್ಲಾ ಭಾಷೆಯಲ್ಲಿ ಬಿಗ್‌ ಬಾಸ್‌ ಆರಂಭಗೊಂಡಿದ್ದು, ಸುಮಾರು ಅರ್ಧದಷ್ಟು ದಿನ ಕಳೆದು ಹೋಗಿದೆ. ಇನ್ನು ಮಲಯಾಳಂ ಭಾಷೆಯಲ್ಲಿ ತೊಂಭತ್ತೆಂಟು ದಿನಗಳು ಪೂರ್ಣಗೊಂಡಿದ್ದು ವಿನ್ನರ್‌ ಅನೌನ್ಸ್‌ಮೆಂಟ್‌ ಕೂಡಾ ಆಗಿದೆ.

ಹಿಂದಿಯಲ್ಲಿ ಸಲ್ಮಾನ್‌ ಖಾನ್‌ ಅವರು ಬಿಗ್‌ಬಾಸ್‌ ನಿರೂಪಣೆಯಲ್ಲಿದ್ದಾರೆ. ತಮಿಳಿನಲ್ಲಿ ವಿಜಯ್‌ ಸೇತುಪತಿ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇನ್ನು ಕನ್ನಡದಲ್ಲಿ ಸುದೀಪ್‌ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ಈಗಾಗಲೇ 44 ದಿನಗಳು ಪೂರ್ಣಗೊಂಡಿದೆ. ವಾರ ಕಳೆಯುತ್ತಿದ್ದಂತೆ ಒಬ್ಬೊಬ್ಬರೇ ಮನೆಯಿಂದ ಹೊರಬರುತ್ತಿದ್ದಾರೆ. ಈ ವರ್ಷದ ಕನ್ನಡದ ಬಿಗ್‌ಬಾಸ್‌ ವಿನ್ನರ್‌ ಯಾರಾಗಬಹುದು ಎಂದು ಪ್ರೇಕ್ಷಕರೆಲ್ಲ ಕುತೂಹಲದಿಂದ ಕಾಯುತ್ತಿದ್ದಾರೆ.

ನಿನ್ನೆ ನವೆಂಬರ್‌ 10 ರಂದು ಮಲಯಾಳಂ ಬಿಗ್‌ ಬಾಸ್‌ ಸೀಸನ್‌ 7 ಮುಕ್ತಾಯವಾಗಿದೆ. ಭರ್ಜರಿಯಾಗಿ ನಡೆದ ಗ್ರಾಂಡ್‌ ಫಿನಾಲೆಯಲ್ಲಿ ವಿನ್ನರ್‌ ಯಾರು ಎಂಬುದನ್ನು ಘೋಷಿಸಲಾಗಿದ್ದು, ನಿರೂಪಕಿಯಾಗಿ ಹೆಸರು ಮಾಡಿದ್ದ ಕಿರುತೆರೆ ನಟಿ ಅನುಮೋಲ್‌ ವಿನ್ನರ್ ಪಟ್ಟವನ್ನು ಸ್ವೀಕರಿಸಿದ್ದಾರೆ.

ಈ ಬಾರಿಯ ಮಲಯಾಳಂ ಬಿಗ್‌ ಬಾಸ್‌ನಲ್ಲಿ ಜನಸಾಮಾನ್ಯರಿಗೂ ಕೂಡಾ ಅವಕಾಶವನ್ನು ನೀಡಿದ್ದರು. ವ್ಲಾಗರ್‌ ಮತ್ತು ಬರಹಗಾರರಾದ ಅನೀಶ್‌ ಟಿಎ ಈ ಬಾರಿ ಬಿಗ್‌ ಬಾಸ್‌ಗೆ ಆಯ್ಕೆ ಆಗಿದ್ದರು. ಅವರು ಜನರ ಮನಸ್ಸು ಗೆದ್ದು ಸೀಸನ್‌ 7ರ ರನ್ನರ್‌ ಅಪ್‌ ಆಗಿರುವುದು ವಿಶೇಷ.

ಇದನ್ನೂ ಓದಿ: ಗಿಲ್ಲಿಗೆ ಹೊಡೆದ ರಿಷಾಗೆ ಮನೆಯಿಂದ ಸಿಗುತ್ತಾ ಗೇಟ್‌ ಪಾಸ್‌?

ವಿನ್ನರ್‌ ಅನುಮೋಲ್‌ ಅವರಿಗೆ ಬಿಗ್‌ ಬಾಸ್‌ನಿಂದ 42.5 ಲಕ್ಷ ಬಹುಮಾನ ಸಿಕ್ಕಿದೆ. ಜೊತೆಗೆ ಹೊಸದಾದ ಎಸ್‌ಯುವಿ ಕಾರ್ ಅನ್ನು ಗಿಫ್ಟ್‌ ನೀಡಲಾಗಿದೆ.

ವರದಿಯ ಪ್ರಕಾರ ಅನುಮೋಲ್‌ ಅವರು ದಿನಕ್ಕೆ 50 ಸಾವಿರ ರೂ. ಸಂಭಾವನೆ ಕೇಳಿದ್ದರು. ತೊಂಭತ್ತೆಂಟು ದಿನ ಬಿಗ್‌ ಬಾಸ್‌ ಮನೆಯಲ್ಲಿದ್ದ ಅವರಿಗೆ ಈಗಾಗಲೇ 50 ಲಕ್ಷ ಸಂಭಾವನೆ ಸಿಕ್ಕಿರುತ್ತದೆ. ಜೊತೆಗೆ ವಿನ್ನರ್‌ ಬಹುಮಾನ ಸೇರಿ 1 ಕೋಟಿ ರೂ. ಗಳಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ರನ್ನರ್‌ ಅಪ್‌ ಆಗಿರುವ ಅನೀಶ್‌ ಅವರಿಗೆ ಎರಡು ಲಕ್ಷದ ಫೋನನ್ನು ಉಡುಗೊರೆಯಾಗಿ ನೀಡಲಾಗಿದೆ, ಜೊತೆಗೆ ಮನೆಗೆ ಬೇಕಾಗುವ ವಸ್ತುಗಳನ್ನು ಬಹುಮಾನ ರೂಪದಲ್ಲಿ ನೀಡಲಾಗಿದೆ.

ಅದೇ ರೀತಿ ಕನ್ನಡದ ಬಿಗ್‌ ಬಾಸ್‌ ಕೂಡಾ ತುಂಬಾ ಭರ್ಜರಿಯಿಂದ ಸಾಗುತ್ತಿದೆ. ಒಬ್ಬರಿಗಿಂತ ಒಬ್ಬರು ಫೈಪೋಟಿಯಲ್ಲಿಯೇ ಇದ್ದಾರೆ. ಕನ್ನಡದ ಈ ಸೀಸನ್‌ನ ವಿನ್ನರ್‌ ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories