ಗಿಲ್ಲಿಗೆ ಹೊಡೆದ ರಿಷಾಗೆ ಮನೆಯಿಂದ ಸಿಗುತ್ತಾ ಗೇಟ್ ಪಾಸ್ ? ಸ್ಪರ್ಧಿಗಳ ನಿರ್ಧಾರವೇ ಅಂತಿಮ!

Bigg boss kannada : ಬಿಗ್ ಬಾಸ್ ಶೋ.. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಶೋ ಜನರಿಗೆ ತುಂಬಾ ಇಷ್ಟ. ಅದರಲ್ಲೂ ವೀಕೆಂಡ್ ಸುದೀಪ್‍ಗಾಗಿ ಎಷ್ಟೋ ಜನ ಈ ಕಾರ್ಯಕ್ರಮ ನೋಡ್ತಾರೆ. ಸುದೀಪ್ ಸ್ಪರ್ಧಿಗಳಿಗೆ ಹೇಳುವ ಬುದ್ದಿ ಮಾತು. ಖಡಕ್ ವಾರ್ನಿಂಗ್ ಎಲ್ಲರಿಗೂ ಇಷ್ಟ ಆಗುತ್ತೆ. ಅದೇ ರೀತಿ ಗಿಲ್ಲಿಗೆ ಹೊಡೆದ ರಿಷಾಗೆ ಇವತ್ತು ಕ್ಲಾಸ್ ತೆಗೆದುಕೊಂಡಿದ್ದಾರೆ. ರಿಷಾ ಇರಬೇಕೋ ಬೇಡವೋ ಮನೆಯವರೇ ನಿರ್ಧಾರ ಮಾಡಿ ಎಂದು ಒಂದು ಟಾಸ್ಕ್ ಕೊಟ್ಟಿದ್ದಾರೆ. ಏನದು ನೋಡಿ.

Bigg boss kannada : ಗಿಲ್ಲಿ-ರಿಷಾ ಮಧ್ಯೆ ಏನಾಗಿತ್ತು ?

ಗಿಲ್ಲಿ ನಟ ಮತ್ತು ರಿಷಾ ಸ್ನಾನದ ವಿಚಾರ ಮತ್ತು ಬಾಕೆಟ್ ವಿಚಾರವಾಗಿ ಜಗಳವಾಡಿದ್ದಾರೆ. ಗಿಲ್ಲಿ ಸ್ನಾನಕ್ಕೆ ಹೋಗಬೇಕಿತ್ತು. ಆದ್ರೆ ರಿಷಾ ಹೋಗಿ ಡೋರ್ ಹಾಕಿಕೊಳ್ಳುತ್ತಾರೆ. ಬಾಕೆಟ್ ಸಹ ಕೊಡಲ್ಲ. ಅದಕ್ಕೆ ಗಿಲ್ಲಿ ಕೋಪ ಮಾಡಿಕೊಂಡು ರಿಷಾ ಬಟ್ಟೆಗಳನ್ನು ಬಾತ್ ರೂಮ್‍ಗೆ ತಂದು ಹಾಕುತ್ತಾರೆ. ಅದಕ್ಕೆ ಇಬ್ಬರಿಗೂ ಮಾತಿಗೆ ಮಾತು ಬೆಳೆಯುತ್ತೆ.

ಕೋಪದಲ್ಲಿ ಗಿಲ್ಲಿಗೆ ಕೈ ಮಾಡಿದ ರಿಷಾ

ಇಬ್ಬರು ಮಾತನಾಡುತ್ತಾ, ರಿಷಾ ಕೋಪ ಮಾಡಿಕೊಂಡು ಗಿಲ್ಲಿಗೆ ಹೊಡೆಯುತ್ತಾರೆ. ಮನೆಯವರು ಸಹ ಅದನ್ನು ನೋಡ್ತಾರೆ. ನಂತರ ರಿಷಾ ಗಿಲ್ಲಿ ಬಟ್ಟೆಗಳನ್ನು ಹರಡುತ್ತಾರೆ. ಅಲ್ಲದೇ ನಾನು ತಮಾಷೆಗೆ ಹೊಡೆದೆ ಎಂದು ಹೇಳ್ತಾರೆ. ಆದ್ರೂ ಪ್ರೇಕ್ಷಕರು ರಿಷಾರನ್ನು ಹೊರಗೆ ಕಳಿಸಿ ಎನ್ನುತ್ತಿದ್ದಾರೆ.

ವೀಕೆಂಡ್‍ನಲ್ಲಿ ಚರ್ಚೆ

ಇನ್ನು ಬಿಗ್ ಬಾಸ್ ಪ್ರಸಾರವಾಗುವ ವೇಳೆ, ಈ ಎಲ್ಲಾ ವಿಚಾರಗಳನ್ನು ವಾರಾಂತ್ಯದಲ್ಲಿ ಸುದೀಪ್ ಅವರ ಚರ್ಚೆ ಮಾಡ್ತಾರೆ ಎಂದಿದ್ದಾರೆ. ಅದೇ ರೀತಿ ಇಂದು ಸುದೀಪ್ ಗಿಲ್ಲಿಗೆ ಹೊಡೆದ ವಿಷಯ ಚರ್ಚೆ ಮಾಡ್ತಾ ಇದ್ದಾರೆ.

Bigg boss kannada : ಸುದೀಪ್ ಖಡಕ್ ಮಾತು

ಒಬ್ಬರ ಮೇಲೆ ಕೈ ಎತ್ತಿದರೆ ಅದು ಈ ಬಿಗ್ ಬಾಸ್ ಮನೆಯಲ್ಲಿ ಓಕೆ ಇಲ್ಲ. ದೇವರು ಕೊಟ್ಟಿರೋ ಕೈಗಳನ್ನು ಒಳ್ಳೆಯದಕ್ಕೆ ಇಲ್ಲ ಗೆಲ್ಲೋದಕ್ಕೆ , ಎರಡರಲ್ಲಿ ಒಂದಕ್ಕೆ ಉಪಯೋಗಿಸಿ. ಒಬ್ಬ ಹುಡುಗ ಇದೇ ತರ ಹುಡುಗಿಗೆ ಹೊಡೆದಿದ್ರೆ ಏನೇನ್ ಆಗಿರೋದು? ಇನ್ಮುಂದೆ ಈ ರೀತಿ ಬಿಗ್ ಬಾಸ್ ಮನೆಯಲ್ಲಿ ನಡೆಯಬಾರದು. ಅದಕ್ಕೆ ಈಗ ಶಂಕು ಸ್ಥಾಪನೆ ಈಗ ಆಗುತ್ತೆ. ಯೆಲ್ಲೋ ಕಾರ್ಡ್ ಕೊಟ್ಟು ವಾರ್ನಿಂಗ್ ಮಾಡಿ. ಇಲ್ಲ ರೆಡ್ ಕಾರ್ಡ್ ಕೊಟ್ಟು ಕಳಿಸಿ ಎಂದು ನಿರ್ಧಾರವನ್ನು ಸುದೀಪ್ ಸ್ಪರ್ಧಿಗಳಿಗೆ ಬಿಟ್ಟಿದ್ದಾರೆ.

ಕೆಲವರು ರೆಡ್ ಕಾರ್ಡ್ ತೋರಿಸಿದ್ದಾರೆ. ಇನ್ನೂ ಕೆಲವರು ಯೆಲ್ಲೋ ಕಾರ್ಡ್ ತೋರಿಸಿದ್ದಾರೆ. ಹಾಗಾದ್ರೆ ರಿಷಾ ಹೋಗ್ತಾರಾ ಅಂತ ಇವತ್ತಿನ ಸಂಚಿಕೆಯಲ್ಲಿ ನೋಡಬೇಕು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories