Mangala Gowari Maduve : 3000 ಎಪಿಸೋಡ್‌ ಬಳಿಕ ಮುಕ್ತಾಯವಾಗ್ತಿದೆ ಮಂಗಳಗೌರಿ ಮದುವೆ

ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಟಿಆರ್‌ಪಿ ಗಳಿಸುವ ಮೂಲಕ ಕಿರುತೆರೆಯಲ್ಲೇ ಹೊಸ ಸಂಚಲನವನ್ನು ಮೂಡಿಸಿದ ಧಾರಾವಾಹಿ ಮಂಗಳಗೌರಿ ಮದುವೆ(Mangala Gowari Maduve).ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶನಿವಾರದವರೆಗೂ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿತ್ತು. ಸರಿ ಸುಮಾರು ಕಳೆದೊಂದು ದಶಕಗಳ ಕಾಲ ಕರ್ನಾಟಕದಾದ್ಯಂತ ಮನೆ ಮನಗಳನ್ನು ಗೆದ್ದಿದೆ. ಆದ್ರೀಗ ಧಾರಾವಾಹಿ ಈಗ ಮುಗಿಯುವ ಹಂತಕ್ಕೆ ಬಂದಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಪುಟ್ಟಗೌರಿ ಮದುವೆ ಮೂಲಕ ಈ ಸೀರಿಯಲ್‌ ಪ್ರಾರಂಭವಾಗಿತ್ತು. ಇಂದು ಮೂರು ಸಾವಿರ ಎಪಿಸೋಡ್‌ಗಳನ್ನು ಪೂರೈಸಿಕೊಂಡು ದಶಕ ಸಂಭ್ರಮಾಚರಣೆಯ ಮೂಲಕ ಇಂದು ಸಂಜೆ 5 ಗಂಟೆಗೆ ಪ್ರಸಾರವಾಗುವ ಸಂಚಿಕೆಯಲ್ಲಿ ಕೊನೆಗೊಳ್ಳುತ್ತಿದೆ. ಪುಟ್ಟಗೌರಿ ಸೀರಿಯಲ್‌ ಪ್ರಾರಂಭವಾದಾಗ ಪುಟ್ಟ ಗಾರಿ ಪಾತ್ರದಲ್ಲಿ ಸಾನ್ಯ ಅಯ್ಯರ್‌ ಕಾಣಿಸಿಕೊಂಡಿದ್ದರು. ಇದರ ಪ್ರಮೋಶನ್‌ನ್ನು ಮಾಡಿದ್ದು ನಟ ಕಿಚ್ಚ ಸುದೀಪ್. ನಂತರದ ದಿನಗಳಲ್ಲಿ ಪುಟ್ಟ ಗೌರಿ ದೊಡ್ಡವಳಾದ ಮೇಲೆ ಈ ಪಾತ್ರವನ್ನು ರಂಜನಿ ರಾಘವನ್‌ ನಿರ್ವಹಿಸುತ್ತಿದ್ದರು. ಪುಟ್ಟಗೌರಿ ಇದ್ದಾಗಲೇ ಹೆಚ್ಚು ಜನಮನ್ನಣೆಯನ್ನು ಪಡೆದ ಧಾರಾವಾಹಿ ದೊಡ್ಡ ಗೌರಿ ಆಗಮನದ ನಂತರ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಜನರು ಯಾವುದನ್ನೂ ತಪ್ಪಿಸಿದ್ದರೂ ಈ ಧಾರಾವಾಹಿಯನ್ನು ತಪ್ಪಿಸುವುದಿಲ್ಲವಾಗಿತ್ತು.

ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಪಾತ್ರಗಳನ್ನು ಜನರ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಿತ್ತು. ಮನೆಯ ಯಜಮಾನಿಯ ಸ್ಥಾನದಲ್ಲಿ ಅಜ್ಜಮ್ಮನ ಪಾತ್ರ, ಅಜ್ಜಮ್ಮನ ಪ್ರೀತಿಯ ಮೊಮ್ಮಗ ಮಹೇಶನ ಪಾತ್ರ ಹಾಗೂ ಇನ್ನಿತರ ಪಾತ್ರಗಳು ಎಲ್ಲಾ ಧಾರಾವಾಹಿ ಪ್ರಿಯರನ್ನು ಗಮನ ಸೆಳೆಯುತ್ತಿತ್ತು. ಆಗಿನ ಕಾಲದಲ್ಲಿ ಬಾಲ್ಯವಿವಾಹ ಒಂದು ಸಂಪ್ರದಾಯ ಪದ್ಧತಿಯಾಗಿತ್ತು. ಈ ಸೀರಿಯಲ್‌ ಕೂಡ ಅಲ್ಲಿಂದ ಶುರುವಾಗಿ ಅದರಿಂದ ಆಗುವ ಕಥಾಹಿನ್ನಲೆಯನ್ನು ಒಳಗೊಂಡಿತ್ತು. ಈ ಸೀರಿಯಲ್‌ನ ಪ್ರಾರಂಭದಲ್ಲಿ ಏನೂ ತಿಳಿಯದ ವಯಸ್ಸಿನಲ್ಲಿ ಸಿಹಿತಿಂಡಿ ಹಾಗೂ ಆಟಿಕೆಗಳ ಆಸೆಗೊಸ್ಕರ ಮದುವೆ ಆಗಿ ಬರುವ ಸಣ್ಣ ಹುಡುಗಿಯ ಕಥೆಯಿಂದ ಹಿಡಿದು ದೊಡ್ಡ ಹುಡುಗಿ ಆಗುವರೆಗಿನ ಕಥೆಯನ್ನು ಮುಂದುವರಿಸಿಕೊಂಡು ಬಂದು ನಂತರ ಅಜ್ಜಮ್ಮನ ಎರಡನೆಯ ಮಗನ ಮಗಳಿನ ಮಗಳು ಮಂಗಳಗೌರಿಯ ವರೆಗೂ ಅದ್ಭುತ ಕಥೆಯನ್ನು ಸೀರಿಯಲ್‌ನಲ್ಲಿ ಹೆಣೆದಿದ್ದಾರೆ.

ಇದನ್ನೂ ಓದಿ : Rashmika Mandanna : ‘ಶೂಟಿಂಗ್​ ಸೆಟ್​ನಲ್ಲಿ ರಣಬೀರ್​ ಕಪೂರ್​ ನನ್ನನ್ನು ಅಳುವಂತೆ ಮಾಡಿದ್ದರು’ : ರಶ್ಮಿಕಾ ಮಂದಣ್ಣ

ಇದನ್ನೂ ಓದಿ : Anna Rajan : ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ

ಒಟ್ಟಾರೆ ಕಲರ್ಸ್‌ ಕನ್ನಡದಲ್ಲಿ ಹೊಸ ಸಂಚನಲವನ್ನು ಸೃಷ್ಟಿಸಿದ ಸೀರಿಯಲ್‌ ಆಗಿದೆ. ಪುಟ್ಟಗೌರಿ ಮದುವೆ ಹಾಗೂ ಮಂಗಳಗೌರಿ ಮದುವೆ(Mangala Gowari Maduve) ಎರಡು ಸೇರಿ ಸುಮಾರು ಮೂರು ಸಾವಿರಕ್ಕೂ ಎಪಿಸೋಡ್‌ಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಅನುಬಂಧ ಅವಾರ್ಡ್‌ನಲ್ಲಿ ಸಂಭ್ರಮಿಸಿಕೊಂಡಿದ್ದಾರೆ. ಈ ಧಾರಾವಾಹಿಯೂ ದಶಕಗಳ ಕಾಲ ಪ್ರಸಾರವಾಗಿದ್ದು, ತನ್ನೆಲ್ಲಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಉತ್ತಮ ಟಿಆರ್‌ಪಿ ಪಡೆದುಕೊಂಡಿದೆ.

Mangala Gowari Maduve is ending after 3000 episodes

Comments are closed.