Bigg Boss 9:ದುಡ್ಡು ಇಸ್ಕೊಂಡು ನಗುವುದಕ್ಕೆ ಬರಲ್ಲ; ಆರ್ಯವರ್ಧನ್‌ ಗುರೂಜಿ ಮಾತಿಗೆ ಕಿಚ್ಚ ಸುದೀಪ್‌ ಕ್ಲಾಸ್

(Bigg Boss 9)ಆರ್ಯವರ್ಧನ್‌ ಗುರೂಜಿಯ ನೇರವಾದ ಮಾತು, ಜೊತೆಗೆ ತಮ್ಮ ಮಾತಿನ ಶೈಲಿಯ ಮೂಲಕ ಬಿಗ್ ಬಾಸ್ ವೀಕ್ಷಕರ ಮನಗೆದ್ದಿದ್ದಾರೆ. ಆದರೆ ಕೆಲವೊಮ್ಮೆ ಅವರ ಮಾತು, ಇತರರ ಪ್ರಶ್ನೆಗೆ ಉತ್ತರ ತಾಳೆಯಾಗದೆ ಕೋಪಕ್ಕೆ ಗುರಿಯಾಗುತ್ತಿದ್ದಾರೆ. ಮೊದಲ ವಾರದ ಎಲಿಮಿನೇಷನ್ ವೇಳೆಯಲ್ಲೂ ಸುದೀಪ್‌ ಅವರು ಮಾತಿನ ಶೈಲಿ ಬದಲಾಯಿಸಿಕೊಳ್ಳುವಂತೆ ಬುದ್ದಿ ಮಾತು ಹೇಳಿದ್ದರು. ಆದರೆ ಆ ಕ್ಷಣಕ್ಕೆ ಬದಲಾಗುತ್ತೆನೆ ಎಂದು ಗುರೂಜಿ ಇದೀಗ ಮತ್ತದೇ ಚಾಳಿ ಮುಂದುವರಿಸಿದ್ದು, ಕಿಚ್ಚನ ಕೈಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

(Bigg Boss 9)ಬಿಗ್ ಬಾಸ್ ಅಡುಗೆ ಮನೆಯಲ್ಲಿ ಶೆಫ್ ಬದಲಾಯಿಸಿದ್ದಾರೆ. ಆರ್ಯವರ್ಧನ್‌ ಗುರೂಜಿ ಅವರನ್ನು ಅಡುಗೆ ಮಾಡುವುದು ಬೇಡವೆಂದು ಮನೆಯವರೆಲ್ಲ ಆ ಜಾಗಕ್ಕೆ ಬೇರೆಯವರನ್ನು ತಂದಿದ್ದರು. ಆದರೂ ಗುರೂಜಿ ಅವರಿಗಾಗಿ ಬೇರೆ ಅಡುಗೆಯನ್ನು ಮಾಡಿ ಬಡಿಸಲಾಗುತ್ತಿತ್ತು. ದಿವ್ಯ ಉರುಡುಗ ಊಟವನ್ನು ಬಡಿಸಿಕೊಂಡು ಬಂದು ಗುರೂಜಿಯ ಮುಂದೆ ಇಟ್ಟು ಅದ್ಯಾಕೆ ಮುಖವನ್ನು ಗಂಟು ಹಾಕಿಕೊಂಡಿದ್ದಿರಾ ಸ್ವಲ್ಫ ನಗುತ್ತಾ ಊಟ ಮಾಡಿ ಎಂದಾಗ. ಆರ್ಯವರ್ಧನ್‌ ಅವರು ದುಡ್ಡು ಇಸ್ಕೊಂಡು ನಗಕ್ಕೆ ಬರಲ್ಲ ಎಂದಿದ್ದರು.

ಅವರ ಮಾತನ್ನು ಮನೆಯವರೂ ಯಾರೂ ಕೂಡ ಗಂಭೀರವಾಗಿ ತೆಗೆದುಕೊಂಡಿಲ್ಲ. ಯಾವಾಗಲು ಇಂತಹ ಮಾತುಗಳನ್ನು ಆಡುತ್ತಾರೆ ಎಂದು ಸುಮ್ಮನಾದರು. ಆದರೆ ವೀಕೆಂಡ್‌ ಕಾರ್ಯಕ್ರಮದಲ್ಲಿ ಸುದೀಪ್‌ ಆರ್ಯವರ್ಧನ್‌ ಗುರೂಜಿ ಆಡಿದ ಮಾತು,”ದುಡ್ಡು ಇಸ್ಕೊಂಡು ನಗಕ್ಕೆ ಬರಲ್ಲ” ಇದನ್ನು ಯಾವ ಕಾರಣಕ್ಕಾಗಿ ಹೇಳಿದ್ದೀರಿ ಎಂದು ಪ್ರಶ್ನಿಸಿದ್ದಾರೆ.ಇದಕ್ಕೆ ಗುರೂಜಿ ಅವರು ನೀಡಿದ ಉತ್ತರ ಅಸ್ಪಷ್ಟವಾಗಿತ್ತು. ಮತ್ತೊಮ್ಮೆ ಸುದೀಪ್‌ ಅವರು ಆ ಸ್ಟೆಟ್ ಮೆಂಟ್‌ ಯಾಕೆ ಹೇಳಿದ್ದು ಅಷ್ಟಕ್ಕೆ ಉತ್ತರವಿರಲಿ ಎಂದಾಗ. ಸ್ವಾಮೀಜಿಯವರ ಉತ್ತರ ಅವಳಿಗೆ ನನ್ನ ಮಗಳ ಸ್ಥಾನ ಕೊಟ್ಟಿದ್ದೆನೆ. ಅವಳಂತೆ ನನ್ನನ್ನು ಕೆಣಕುತ್ತಾ ಮಾತನಾಡುತ್ತಾಳೆ.ಆ ಮಾತಿನ ಬರದಲ್ಲಿ ಶಬ್ಧ ಆಚೆ ಬಂದಿದೆ ಎಂದರು.

ಇದನ್ನೂ ಓದಿ : Nirmala Sitharaman: ಎಷ್ಟಮ್ಮ ಆಲೂಗಡ್ಡೆ..? ಮಾರ್ಕೆಟ್ ನಲ್ಲಿ ಖುದ್ದು ತರಕಾರಿ ಖರೀದಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಇದನ್ನೂ ಓದಿ : Nirmala Sitharaman: ಎಷ್ಟಮ್ಮ ಆಲೂಗಡ್ಡೆ..? ಮಾರ್ಕೆಟ್ ನಲ್ಲಿ ಖುದ್ದು ತರಕಾರಿ ಖರೀದಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಇದಕ್ಕೆ ಸುದೀಪ್‌ ಅವರ ಉತ್ತರ ಹೀಗಿತ್ತು, ಪ್ರತಿ ಭಾರಿಯು ಕೂಡ ನಿಮ್ಮ ಸಂಬಂಧದ ಎಳೆಯನ್ನು ಅಸ್ತ್ರವನ್ನಾಗಿ ಮದ್ಯ ತರಬೇಡಿ. ಮಾತುಗಳನ್ನು ಆಡಬೇಕಾದರೆ ಗಮನವಿರಲಿ ಈ ಹೇಳಿಕೆಯನ್ನು ಬೇರೆಯವರ ಬಾಯಲ್ಲಿ ಬಂದಿದ್ದರೆ ಬೇರೆನೆ ನಡಿಯುತ್ತಿತ್ತು.ಅವರು ನಿಮ್ಮನ್ನು ಮತ್ತು ನಿಮ್ಮ ಮಾತನ್ನು ಗೌರವಿಸುತ್ತಾರೆ. ನಿಮ್ಮನ್ನು ಪ್ರೀತಿಸುತ್ತಾರೆ ಅದಕ್ಕೆ ನಿವೂ ಊಟ ಮಾಡುವ ಸಮಯದಲ್ಲಿ ನಿಮ್ಮ ಅಕ್ಕ ಪಕ್ಕದಲ್ಲಿ ಕುಳಿತ್ತಿದ್ದರು ಎಂದು ಹೇಳಿದರು.

ಈ ಹಿಂದೆ ಕೂಡ ಗ್ರಹ,ಆರನೆ ಮನೆಯಲ್ಲಿದೆ ಇದರಿಂದಾಗಿ ನಾನು ಹೀಗೆಲ್ಲ ಆಡುತ್ತಿದ್ದೇನೆ. ಈ ಕಾರಣದಿಂದಾಗಿ ನನ್ನ ಬಾಯಿಯಿಂದ ಕೆಟ್ಟ ಭಾಷೆ ಬರುತ್ತಿದೆ ಎಂದು ಎಲ್ಲರ ನಗೆಪಾಟಲಿಗೆ ಕಾರಣವಾದರು. ಸುದೀಪ್‌ ಅವರು ಕೂಡ ಎಲ್ಲ ಕಾರಣಕ್ಕು ಗ್ರಹ ಗತಿ ಮದ್ಯೆ ತರಬೇಡಿ ಎಂದು ಹೇಳಿ ಬುದ್ದಿವಾದ ಹೇಳಿದ್ದರು. ಇದನ್ನು ತಿದ್ದಿಕೊಳ್ಳುತ್ತೇನೆ ಎಂಬ ಮಾತನ್ನು ಗುರೂಜಿ ಹೇಳಿದ್ದಾರೆ ಅಷ್ಟೇ ಅದರಂತೆ ನಡೆದುಕೊಳ್ಳುತ್ತಿಲ್ಲ.

Kiccha Sudeep reaction to Aryavardhan Guruji statement

Comments are closed.