ಮತ್ತೆ ಸದ್ದು ಮಾಡಿದ ಮೀಟೂ….! ಚಿತ್ರ ಸಾಹಿತಿಯ ವಿರುದ್ಧ ಗಾಯಕಿ ಆರೋಪ…!!

0

ತಮಿಳುನಾಡು: ಕಳೆದ ರಡು ವರ್ಷದಿಂದ ಬಹುತೇಕ ತಣ್ಣಗಾಗಿದ್ದ ಮೀಟೂ ಗಲಾಟೆ ಮತ್ತೆ ಗರಿಗೆದರಿದ್ದು, ಮತ್ತೊಮ್ಮೆ ಚಿತ್ರರಂಗದಲ್ಲಿ  ಈ ಸುದ್ದಿ ಸದ್ದು ಮಾಡಲಾರಂಭಿಸಿದೆ. ಈ ಬಾರಿ ಸ್ಯಾಂಡಲ್ ವುಡ್ ಬದಲಿಗೆ ತಮಿಳು ಚಿತ್ರರಂಗದಲ್ಲಿ ಮೀಟೂ ಆರೋಪ ಕೇಳಿಬಂದಿದ್ದು, ಚಿತ್ರಸಾಹಿತಿ ಹಾಗೂ ಕಾದಂಬರಿಕಾರ ವೈರ್ ಮುತ್ತು ವಿರುದ್ಧ ಗಾಯಕಿ ಚಿನ್ಮಯಿ ಶ್ರೀಪಾದ್ ಧ್ವನಿ ಎತ್ತಿದ್ದಾರೆ.

ತಮ್ಮ ಮೇಲೆ ನಡೆದ  ದೌರ್ಜನ್ಯದ ವಿಚಾರವನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಚಿನ್ಮಯೀ, ಮೀಟೂ ಅಭಿಯಾನಕ್ಕೆ ಎರಡು ವರ್ಷ ತುಂಬಿತು. ಆದರೆ ಅವಳು ಈ ವಿಚಾರ ಹಂಚಿಕೊಳ್ಳಲು ಎರಡು ವರ್ಷ ತೆಗೆದುಕೊಂಡಳು. ಯಾಕೆಂದರೆ ಆಕೆಗೆ ಕುಟುಂಬ ಅಥವಾ ಸಮಾಜದ ಬೆಂಬಲ ಇರಲಿಲ್ಲ. ಅಷ್ಟೇ ಅಲ್ಲ  ಆ ವಿಚಾರ ಆಕೆಯನ್ನು ಹೊರತುಪಡಿಸಿ ಇನ್ಯಾರಿಗೂ ಅಷ್ಟು ಮುಖ್ಯವೂ ಎನ್ನಿಸಿಲ್ಲ ಎಂದಿದ್ದಾರೆ.

ಘಟನೆಯ ವಿವರವನ್ನು ಚಿನ್ಮಯಿ ಹಂಚಿಕೊಂಡಿದ್ದು, ನಾನು ಕಾಲೇಜಿನಲ್ಲಿದ್ದಾಗ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ಸಾಹಿತಿ ವೈರ್ ಮುತ್ತು ಅವರ ಅಟೋಗ್ರಾಫ್ ಪಡೆದುಕೊಂಡೆ. ಅವರು ಅಟೋಗ್ರಾಫ್ ಜೊತೆ ತಮ್ಮ ದೂರವಾಣಿ ಸಂಖ್ಯೆ ನೀಡಿದ್ದರು. ಆದರೆ ನಾನು ಅದನ್ನು ಪರಿಗಣಿಸಿರಲಿಲ್ಲ. ಇದಾದ ಎರಡು ವರ್ಷದ ಬಳಿಕನಾನು ಕೆಲಸ ಮಾಡುತ್ತಿದ್ದ ಚಾನೆಲ್ ಗೆ ವೈರ್ ಮುತ್ತು ಭೇಟಿ ನೀಡಿದ್ದರು. ಆಗ ನನ್ನ ನಂಬರ ಕೇಳಿದರು. ನಂಬರ್ ನೀಡಿದ್ದೆ.

ನಂಬರ್ ಪಡೆದುಕೊಂಡ ಮೇಲೆ ದಿನಕ್ಕೆ 50-60 ಪೋನ್ ಕರೆ ಮಾಡಿ ತನ್ನನ್ನು ಮೀಟ್ ಮಾಡಲು ಅವರು ಒತ್ತಾಯಿಸುತ್ತಿದ್ದರು. ಅದನ್ನು ಕಂಡು ನಾನು ಕಂಗಲಾದೆ. ಮೌಂಟ್ ರೋಡ್ ನ ಒಂದು ಸ್ಥಳಕ್ಕೆ ಬರುವಂತೆ ಅವರು ನನ್ನನ್ನು ಒತ್ತಾಯಿಸಿದರು. ಆದರೆ ನಾನು ನಿರಾಕರಿಸಿದೆ. ಗಂಟೆಗೆ 50-60 ಕಾಲ್ ಗಳು ಬರುತ್ತಿದ್ದವು. ಅವರಿಗೆ ನಾನು ದೇವತೆಯಂತೆ ಕಾಣಿಸುತ್ತಿದ್ದೆ ಎಂದು ಅವರು ಹೇಳುತ್ತಿದ್ದರು.

ಕೊನೆಗೆ ಅವರ ಕಾಟ ತಡೆಯಲಾರದೇ ನಾನು ಕೆಲಸ ಮಾಡುತ್ತಿದ್ದ ಮಾಧ್ಯಮ ಸಂಸ್ಥೆಯ ಸಹಾಯ ಕೋರಿದೆ. ಬಳಿಕ ಅವರ ಪತ್ನಿಗೆ ವಿಷಯ ತಿಳಿಸಲಾಯಿತು ಎಂದು ಚಿನ್ಮಯಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿನ್ಮಯಿ ಹಂಚಿಕೊಂಡ ಈ ವಿಚಾರಕ್ಕೆ ಹಲವರ ಬೆಂಬಲ ವ್ಯಕ್ತವಾಗಿದ್ದು, ಕೆಲವರು ಇಂಥ ವರ್ತನೆ ತೋರಿದ ಸಾಹಿತಿ ವೈರ್ ಮುತ್ತು ವಿರುದ್ಧ ಕ್ರಮವಾಗಬೇಕೆಂದು ಒತ್ತಾಯಿಸಿದ್ದಾರೆ.

2002 ರಿಂದ ಗಾಯಕಿಯಾಗಿ, ಆರ್.ಜೆಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳಿನಲ್ಲಿ ಹೆಸರು ಗಳಿಸಿದ್ದಾರೆ. ಗೀತಗೋವಿಂದಂ ಸೇರಿದಂತೆ ಹಲವು ಪ್ರಸಿದ್ಧ ಸಿನಿಮಾ ಗೀತೆಗಳು ಇವರ ಕಂಠದಲ್ಲಿ ಮೂಡಿಬಂದಿದೆ. ಕಳೆದ ಎರಡು ವರ್ಷದಲ್ಲಿ ಸ್ಯಾಂಡಲ್ ವುಡ್ ನಲ್ಲೂ ಮೀಟೂ ಸದ್ದು ಮಾಡಿದ್ದು, ನಟ ಸರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದರು. ಈ ಹಿಂದೆಯೂ ಚಿನ್ಮಯಿ ಈ ವಿಚಾರ ಪ್ರಸ್ತಾಪಿಸಿದ್ದರು. ಆದರೆ ಇದುವರೆಗೂ ಅವರು ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ.

Leave A Reply

Your email address will not be published.