Meghana Raj : ಅಮ್ಮಾ ಅನ್ನೋ ಮೇಘನಾಗೆ ಅಪ್ಪಾ ಎಂದ ಮಗ : ವೈರಲ್ ವಿಡಿಯೋ ಕಣ್ಣಿರಿಟ್ಟ ಅಭಿಮಾನಿಗಳು

ಮೇಘನಾ ಸರ್ಜಾ ( Meghana Raj) ಸ್ಯಾಂಡಲ್ ವುಡ್ ನ ಗಟ್ಟಿಗಿತ್ತಿ ಹೆಣ್ಣುಮಗಳು.‌ಬದುಕಿನ ಎಲ್ಲ ನೋವುಗಳನ್ನು ಹಿಮ್ಮೆಟಿಸಿದ ಮೇಘನಾ ರಾಜ್ ಮತ್ತೆ ಆಕ್ಟಿಂಗ್, ಜಾಹೀರಾತು ಅಂತೆಲ್ಲ ಬ್ಯುಸಿಯಾಗಿದ್ದಾರೆ. ಆದರೆ ಈ ಬ್ಯುಸಿ ಶೆಡ್ಯೂಲ್ ನಲ್ಲೂ ಪ್ಯಾಂಪರಿಂಗ್ ಮಮ್ಮಿಯಾಗಿರೋ ಮೇಘನಾ ಮಗನ ವಿಡಿಯೋ,ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದನ್ನು ಮರೆಯೋಲ್ಲ. ಈಗಲೂ ಅಂತಹುದೇ ವಿಡಿಯೋವೊಂದನ್ನು ಮೇಘನಾ ಶೇರ್ ಮಾಡಿದ್ದು, ವಿಡಿಯೋ ನೋಡಿದವರ ಕಣ್ಣುತುಂಬಿ ಬಂದಿದೆ.

ಸುಖೀ ಸಂಸಾರ ನಡೆಸೋ ಹೊತ್ತಲ್ಲಿ ದಿಢೀರ್ ಎದ್ದು ಹೋದ ನಟ ಚಿರಂಜೀವಿ ಸರ್ಜಾ, ತಮ್ಮ ಪ್ರತಿ ರೂಪದಂತಹ ಮಗುವೊಂದನ್ನು ಗಿಫ್ಟ್ ನಂತೆ ಮೇಘನಾ ಪಾಲಿಗೆ ಬಿಟ್ಟು ಹೋಗಿದ್ದಾರೆ. ಪುತ್ರ ರಾಯನ್ ರಾಜ್ ಸರ್ಜಾ ಬೆಳೆಸೋದರಲ್ಲೇ ಖುಷಿ ಕಾಣ್ತಿರೋ ಮೇಘನಾ ಮಗ ಪ್ರೀತಿಯಿಂದ ಅಮ್ಮ ಎನ್ನುವ ವಿಡಿಯೋ ಶೇರ್ ಮಾಡಿದ್ದಾರೆ.

ಆದರೆ ಈ ವಿಡಿಯೋದಲ್ಲಿ ಮೇಘನಾರನ್ನು ರಾಯನ್ ರಾಜ್ ಸರ್ಜಾ ಪ್ರೀತಿಯಿಂದ ಅಮ್ಮ ಅಮ್ಮ ಎನ್ನುವ ವಿಡಿಯೋ ಮಾತ್ರವಿಲ್ಲ ಬದಲಾಗಿ, ಆಗಾಗ ಅಮ್ಮ ಎಂದು ಮೇಘನಾ ಎಂದು ಹೇಳಿದ್ರೂ ರಾಯನ್ ಅಪ್ಪಾ ಎಂದು ಉಚ್ಛರಿಸುವ ವಿಡಿಯೋ ಕೂಡ ಇದೆ. ಮಗನನ್ನು ಮುದ್ದಿಸುವ ಮೇಘನಾ ಬೇರೆ ಬೇರೆ ರೀತಿಯಲ್ಲಿ ಅಮ್ಮಾ ಎಂದು ಕರೆಯುವಂತೆ ಹೇಳಿಕೊಡುತ್ತಾರೆ. ಅಮ್ಮ ಹೇಳಿಕೊಟ್ಟಂತೆ ವಿವಿಧ ಸ್ವರದಲ್ಲಿ ಅಮ್ಮಾ ಎಂದು ಕರೆಯುವ ರಾಯನ್ ರಾಜ್ ಸರ್ಜಾ, ಬಳಿಕ ಮಧ್ಯದಲ್ಲಿ ಅಪ್ಪಾ ಎಂದು ಕರೆಯುತ್ತಾನೆ.

ಮಗ ಅಪ್ಪನನ್ನು ಕರೆಯುವ ರೀತಿ ಕಂಡು ಮೇಘನಾ ಖುಷಿ ಹಾಗೂ ದುಃಖ ಮಿಶ್ರಿತವಾದ ಮುಖಭಾವದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮೇಘನಾ ಹಂಚಿಕೊಂಡಿರೋ ಈ ವಿಡಿಯೋ ಸಖತ್ ವೈರಲ್ ಅಗಿದೆ. ಬಹುತೇಕರು ರಾಯನ್ ರಾಜ್ ಸರ್ಜಾ ತಾನೆಂದೂ ನೋಡಿರದ ತಂದೆಯನ್ನು ನಲ್ಮೆಯಿಂದ ನೆನೆಸಿಕೊಂಡು ಕರೆಯೋದನ್ನು ನೋಡಿ ಕರುಳು‌ ಕತ್ತರಿಸಿದಂತಾ ಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಕೆಲವರು ಚಿರು ಎಲ್ಲೂ ಹೋಗಿಲ್ಲ ರಾಯನ್ ಮೂಲಕ ನಮ್ಮ ಬಳಿಯೇ ಇದ್ದಾರೆ ಎಂದಿದ್ದಾರೆ. ಸದ್ಯ ಸಿನಿಮಾ ಕ್ಷೇತ್ರಕ್ಕೂ ರಾಯನ್ ರಾಜ್ ಸರ್ಜಾ ಸಾಂಕೇತಿಕ ಎಂಟ್ರಿ ಕೊಟ್ಟಿದ್ದಾರೆ. ಹೌದು ಚಿರಂಜೀವಿ ಸರ್ಜಾ ನಟನೆಯ ರಾಜಾಮಾರ್ತಾಂಡ ಸಿನಿಮಾದ ದೃಶ್ಯವೊಂದರಲ್ಲಿ ಚಿರು ಜೊತೆ ರಾಯನ್ ಕೂಡ ನಟಿಸಲಿದ್ದಾರಂತೆ. ಒಟ್ಟಿನಲ್ಲಿ ಚಿರುವನ್ನು ರಾಯನ್ ಮೂಲಕ ನೋಡಿ ಅಭಿಮಾನಿಗಳು ಖುಷಿ ಪಡೋ ಪ್ರಯತ್ನ ಮಾಡ್ತಿದ್ದಾರೆ.

ಇದನ್ನೂ ಓದಿ : magalu janaki : ಮತ್ತೆ ಬರ್ತಿದ್ದಾಳೆ ‘ಮಗಳು ಜಾನಕಿ ’ : ಸಿಹಿ ಸುದ್ದಿ ಹಂಚಿಕೊಂಡ ಟಿ.ಎನ್​ ಸೀತಾರಾಮ್​

ಇದನ್ನೂ ಓದಿ : ನಗುವಿನ ಹೂಗಳ ಮೇಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ : ಅಭಿಷೇಕ್ ಗೆ ಜೋಡಿಯಾಗಿ ಮಿಂಚಿದ ಶರಣ್ಯಾ

Meghana Raj drops video of Chiranjeevi Sarja son Raayan Raj Sarja saying appa

Comments are closed.