ಮೇಘನಾ ರಾಜ್ ಮನೆಯಲ್ಲಿ ತೊಟ್ಟಿಲ ಸಂಭ್ರಮ…! ನಾಳೆ ಜ್ಯೂನಿಯರ್ ಚಿರು ನಾಮಕರಣ..!!


ಪತಿ ಕಳೆದುಕೊಂಡ ದುಃಖದಲ್ಲಿರೋ ನಟಿ ಮೇಘನಾ ರಾಜ್ ಮುಖದಲ್ಲಿ ನಗು ಅರಳಿಸೋದಿಕ್ಕೆ ಹಾಗೂ ಆಕೆಯ ಬದುಕಿನ ಅಂದ ಹೆಚ್ಚಿಸೋದಿಕ್ಕೆ ಈಗಾಗಲೇ ಜ್ಯೂನಿಯರ್ ಚಿರು ಬಂದಾಗಿದೆ.

ಅಕ್ಟೋಬರ್ 22ರಂದು ಮೇಘನಾ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಚಿರು ಆಸೆಯಂತೆ ಗಂಡುಮಗುವೇ ಸರ್ಜಾ ಮನೆಗೆ ಬಂದಿದ್ದು, ಚಿರಂಜೀವಿ ಸರ್ಜಾ ಮತ್ತೊಮ್ಮೆ ಹುಟ್ಟಿಬಂದಿದ್ದಾನೆ ಅಂತ ಕುಟುಂಬ ಸಂಭ್ರಮ ಪಡ್ತಿದೆ.

ಸುಂದರ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಮತ್ತು ಸರ್ಜಾ ಕುಟುಂಬ ಹೀಗೆ ಎರಡು ಮನೆಗೂ ಮಗನಂತಿದ್ದ ಚಿರು ಕಳೆದುಕೊಂಡು ಎರಡು ಕುಟುಂಬಗಳು ಅಪಾರ ನೋವು ಉಂಡಿವೆ.

ಈಗ ಬಂದಿರೋ ಕಂದ ಪ್ರತ್ಯಕ್ಷ ಚಿರುವೇ ಅಂತ ನಂಬಿರೋ ಕುಟುಂಬ ಆತನಲ್ಲೇ ಮಗನನ್ನು ಕಾಣುತ್ತಿದೆ. ಈಗ ಈ ಪುಟ್ಟ ಕಂದನಿಗೆ ನಾಮಕರಣ ನಡೆಸಲು ಎರಡು ಕುಟುಂಬ ನಿರ್ಧರಿಸಿದೆ.

ಜೆಪಿನಗರದಲ್ಲಿರೋ ಸುಂದರ ರಾಜ್ ನಿವಾಸದಲ್ಲಿ ನಾಳೆ ಸರಳ ಸಮಾರಂಭದಲ್ಲಿ ಮೇಘನಾ ರಾಜ್ ಪುತ್ರನ ನಾಮಕರಣ ಹಾಗೂ ತೊಟ್ಟಿಲ ಶಾಸ್ತ್ರ ನಡೆಯಲಿದೆ. ಸಂಪ್ರದಾಯದ ಪ್ರಕಾರ ನಡೆಯುವ ಈ ಸಮಾರಂಭದಲ್ಲಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಹೆಸರಿಡಲಾಗುತ್ತದೆ.

ಮೂಲಗಳ ಪ್ರಕಾರ ಚಿರಂಜೀವಿ ಹಾಗೂ ಮೇಘನಾ ಪುತ್ರನಿಗೆ ಸಿ ಯಿಂದ ಆರಂಭವಾಗೋ ಅಂದ್ರೇ ಕನ್ನಡದ ಚ.. ಚಾ.. ಚಿ.. ಚೀ ಯಿಂದ ಆರಂಭವಾಗೋ ಹೆಸರಿಡುವ ಸಾಧ್ಯತೆ ಇದೆ. ಇನ್ನೊಂದೆಡೆ ಚಿರಂಜೀವಿ,ಚಿರಾಗ್ ಎಂದೇ ಕರೆಯಲು ಕೂಡ ಕುಟುಂಬ ಸದಸ್ಯರಿಗೆ ಮನಸ್ಸಿದೆ ಎನ್ನಲಾಗಿದೆ.

ಇನ್ನು ಮಗುವಿಗೆ ಜನ್ಮನೀಡಿದ ಬಳಿಕ ನಾಳೆಯೇ ಮೊದಲ ಬಾರಿಗೆ ಮೇಘನಾ ಮಾಧ್ಯಮಗಳ ಎದುರು ಬರಲಿದ್ದು ನಾಮಕರಣದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಿದ್ದತೆ ನಡೆದಿದ್ದು, ನವೆಂಬರ್ 12 ರಂದು ಗುರುವಾರ ಮೊಮ್ಮಗನ ನಾಮಕರಣ ನಡೆಸುತ್ತಿದ್ದೇವೆ ಎಂದು ಸುಂದರ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿ ಮಾಹಿತಿ ನೀಡಿದ್ದಾರೆ.

ಚಿರು ಬದುಕಿದ್ದರೇ ನಾಮಕರಣ ವನ್ನು ಅದ್ದೂರಿಯಾಗಿ ನಡೆಸುತ್ತಿದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ಚಿಕ್ಕಪ್ಪ ಧ್ರುವ ಸರ್ಜಾ ತಮ್ಮ ಕರ್ತವ್ಯ ನಿರ್ವಹಿಸಿದ್ದು ಅಣ್ಣನ ಮಗನಿಗಾಗಿ ಬೆಳ್ಳಿಯ ತೊಟ್ಟಿಲು ತಂದಿದ್ದಾರೆ

Comments are closed.