niveditha gowda : ಮಿಸೆಸ್​ ಇಂಡಿಯಾ ಸ್ಫರ್ಧೆಯಲ್ಲಿ ಸಾಧನೆ : ವಿಶೇಷ ಟೈಟಲ್​ ಮುಡಿಗೇರಿಸಿಕೊಂಡ ನಿವೇದಿತಾ ಗೌಡ

niveditha gowda : ನಿವೇದಿತಾ ಗೌಡ.. ಕಲರ್ಸ್ ಕನ್ನಡದ ಬಿಗ್​ ಬಾಸ್​ ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಈ ಚೆಲುವೆ ಬಳಿಕ ಹಿಂತಿರುಗಿ ನೋಡಲಿಲ್ಲ. ಕಲರ್ಸ್ ಕನ್ನಡದ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಈ ಮಾತಿನ ಮಲ್ಲಿ ಇದೀಗ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದ ಮೂಲಕ ಕನ್ನಡಿಗರನ್ನು ರಂಜಿಸುವ ಕೆಲಸವನ್ನು ಮಾಡ್ತಿದ್ದಾರೆ. ರ್ಯಾಪರ್​ ಚಂದನ್​ ಶೆಟ್ಟಿ ಪತ್ನಿಯಾಗಿರುವ ನಿವೇದಿತಾ ಗೌಡ ತಮ್ಮ ವಿಭಿನ್ನ ಕನ್ನಡದಿಂದಲೇ ಸುದ್ದಿಯಾಗುತ್ತಿರುತ್ತಾರೆ. ಇನ್​ಸ್ಟಾಗ್ರಾಂನಲ್ಲಿಯೂ ಸಖತ್​ ಆ್ಯಕ್ಟಿವ್​ ಆಗಿರುವ ನಿವೇದಿತಾ ಗೌಡ ಯುಟ್ಯೂಬ್​ ಚಾನೆಲ್​ ಕೂಡ ಹೊಂದಿದ್ದಾರೆ.


ನಿವೇದಿತಾ ಗೌಡ ಮಕ್ಕಳಂತೆ ಮಾಡ್ತಾರೆ, ದಡ್ಡಿ ರೀತಿ ವರ್ತಿಸುತ್ತಾರೆ ಎಂಬ ನೆಗೆಟಿವ್​ ಕಮೆಂಟ್​ ಕೂಡ ಮಾಡುವವರಿದ್ದಾರೆ. ಆದರೆ ಎಲ್ಲಾ ಕೊಂಕುಗಳನ್ನು ಮೆಟ್ಟಿ ನಿಂತು ನಿವೇದಿತಾ ಗೌಡ ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆಯನ್ನು ನೀಡ್ತಿದ್ದಾರೆ. ನಿವೇದಿತಾ ಗೌಡ ಇದೀಗ ಮತ್ತೊಂದು ಸಾಧನೆಯನ್ನು ಮಾಡಿದ್ದು ಮಿಸೆಸ್​ ಇಂಡಿಯಾ ಇಂಕ್​ ಸ್ಫರ್ಧೆಯಲ್ಲಿ ವಿಶೇಷ ಟೈಟಲ್​ ಒಂದನ್ನು ಮುಡಿಗೇರಿಸಿಕೊಂಡಿದ್ದಾರೆ.


ನಿವೇದಿತಾ ಗೌಡ ತಾವು ಮಿಸೆಸ್​ ಇಂಡಿಯಾ ಇಂಕ್​ ಸ್ಫರ್ಧೆಯಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಕ್ಕಾಗಿ ಅವರು ಸಣ್ಣ ಕೂಡ ಆಗಿದ್ದರು. ಇದೀಗ ಇವರ ಕಾರ್ಯಕ್ಕೆ ಮಿಸ್​ ಇಂಡಿಯಾ ‌Inc ವಿಶೇಷ ಟೈಟಲ್​ ಒಂದನ್ನು ನೀಡಿ ಗೌರವಿಸಿದೆ. ಮಿಸೆಸ್​ ಇಂಡಿಯಾ ‌Inc ನ ಅಧಿಕೃತ ಪೇಜ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.


ಮಿಸಸ್​ ಇಂಡಿಯಾ ‌Inc ಸ್ಫರ್ಧೆಯಲ್ಲಿ ಪೀಪಲ್ಸ್​ ಚಾಯ್ಸ್​ 2022 ಆಫ್​ ಮಿಸ್​ ಇಂಡಿಯಾ ‌Inc ಎಂಬ ಟೈಟಲ್​ ನಿವೇದಿತಾ ಗೌಡರ ಮುಡಿಗೇರಿದೆ. ಈ ಪ್ರಶಸ್ತಿಯನ್ನು ನಿವೇದಿತಾ ಗೌಡ ಟೀಂ ಇಂಡಿಯಾ ಮಾಜಿ ನಾಯಕ ಅಜರುದ್ದೀನ್​​ರಿಂದ ಸ್ವೀಕರಿಸುತ್ತಿರುವ ಫೋಟೋವನ್ನು ‌ಮಿಸಸ್​ ಇಂಡಿಯಾ ‌Inc ಅಧಿಕೃತ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನು ಓದಿ : Dinesh Gunawardena : ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್​ ಗುಣವರ್ದೆನಾ ಪ್ರಮಾಣ ವಚನ

ಇದನ್ನೂ ಓದಿ : Akasa Air : ನೂತನ ಆಕಾಸ ಏರ್​ಲೈನ್​​ನಿಂದ ಬುಕ್ಕಿಂಗ್​ ಆರಂಭ : ಆ.7ರಂದು ಮೊದಲ ವಿಮಾನ ಹಾರಾಟ

mrs niveditha gowda winner of people s choice 2022 of mrs india inc

Comments are closed.