ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್ : ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ

ಮುಂಬೈ: ವೆಸ್ಟ್ಇಂಡಿಸ್ ದೈತ್ಯ, ಮುಂಬೈ ಇಂಡಿಯನ್ಸ್ ತಂಡದ ಖ್ಯಾತ ಆಲ್ ರೌಂಡರ್ ಕಿರಾನ್ ಪೊಲಾರ್ಡ್ (Kieron Pollard retirement) ಐಪಿಎಲ್ ಗೆ (IPL 2023) ಗುಡ್ ಬೈ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಅವರನ್ನು ತಂಡದಿಂದ ಕೈ ಬಿಟ್ಟ ಬೆನ್ನಲ್ಲೇ ಕ್ರಿಕೆಟ್ ನಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಈ ನಡುವಲ್ಲೇ ಮುಂಬೈ ತಂಡ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲು ಮುಂದಾಗಿದೆ.

2010ರಲ್ಲಿ ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದ ಕಿರಾನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಪರ ಕಾಣಿಸಿಕೊಂಡಿದ್ದರು. ಮುಂಬೈ ತಂಡದ ಪರವಾಗಿ ಸುಮಾರು ಹನ್ನೆರಡು ವರ್ಷಗಳ ಕಾಲ ಆಡಿದ್ದಾರೆ. 5 ಬಾರಿ ಐಪಿಎಲ್ ಹಾಗೂ 2 ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನು ಮುಂಬೈ ಇಂಡಿಯನ್ಸ್ ತಂಡ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಐಪಿಎಲ್ ಇತಿಹಾಸದಲ್ಲಿಯೇ 100ಕ್ಕೂ ಅಧಿಕ ಪಂದ್ಯಗಳನ್ನು ಆಡಿರುವ ಕೆಲವೇ ಕೆಲವು ಆಟಗಾರರಲ್ಲಿ ಪೊಲಾರ್ಡ್ ಕೂಡ ಒಬ್ಬರಾಗಿದ್ದಾರೆ.

ಐಪಿಲ್ ಪಂದ್ಯಾವಳಿಯ ಕಠಿಣ ಸಂದರ್ಭಗಳಲ್ಲಿಯೂ ಕೂಡ ಕಿರಾನ್ ಪೊಲಾರ್ಡ್ ಹಲವು ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಕಳೆದ ಋತುವಿನಲ್ಲಿ 11 ಪಂದ್ಯಗಳನ್ನು ಆಡಿರುವ ಕಿರಾನ್ ಪೊಲಾರ್ಡ್ ಕೇವಲ 144 ರನ್ ಗಳಿಸಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ಕಾರಣಕ್ಕೆ ಪೊಲಾರ್ಡ್ ಅವರನ್ನು ಐಪಿಎಲ್ ತಂಡದಿಂದ ಮುಂಬೈ ಬಿಟ್ಟಿದೆ.

ಮುಂಬೈ ತಂಡದಿಂದ ಪೊಲಾರ್ಡ್ ಅವರನ್ನು ಕೈಬಿಟ್ಟ ಬೆನ್ನಲ್ಲೇ ನಿವೃತ್ತಿಯ ನಿರ್ಧಾರವನ್ನು ಘೋಷಿಸಿದ್ದಾರೆ. ನಾನು ಇನ್ನೂ ಕೆಲವು ವರ್ಷಗಳವರೆಗೆ ಆಡುವುದನ್ನು ಮುಂದುವರಿಸಲು ಸಾಧ್ಯ. ಆದರೆ ತಾನು ಕೈಗೊಂಡಿರುವ ನಿರ್ಧಾರ ಸುಲಭ ಸಾಧ್ಯವಲ್ಲ. ತುಂಬಾ ಸಾಧಿಸಿದ ನಂತರ ನನ್ನನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಮುಂಬೈ ತಂಡದ ಪರವಾಗಿ ಮುಂದೆ ಆಡಲು ನನ್ನಿಂದ ಸಾಧ್ಯವಿಲ್ಲ. ಅಲ್ಲದೇ ಮುಂಬೈ ವಿರುದ್ದವಾಗಿ ಆಡುವುದು ಕೂಡ ಸಾಧ್ಯಿಲ್ಲ. ಮುಂಬೈ ತಂಡ ಯಾವಾಗಲ್ಲೂ ಮುಂಬೈ ತಂಡವೇ ಆಗಿರುತ್ತದೆ. ಕಳೆದ 13 ಋತುಗಳಲ್ಲಿ IPL ನಲ್ಲಿ ದೊಡ್ಡ ಮತ್ತು ಅತ್ಯಂತ ಯಶಸ್ವಿ ತಂಡವನ್ನು ಪ್ರತಿನಿಧಿಸಿರುವುದರ ಕುರಿತು ನನಗೆ ಹೆಮ್ಮೆಯಿದೆ. ಮುಂಬೈ ಇಂಡಿಯನ್ಸ್ ತಂಡದ ಮಾಲಕರಾದ ಮುಕೇಶ್, ನೀತಾ ಮತ್ತು ಆಕಾಶ್ ಅಂಬಾನಿ ಅವರ ಅಪಾರ ಪ್ರೀತಿ, ಬೆಂಬಲ ಮತ್ತು ಗೌರವಕ್ಕಾಗಿ ನಾನು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ ಎಂದು ಅವರು ಕಿರಾನ್ ಪೊಲಾರ್ಡ್ ಹೇಳಿಕೊಂಡಿದ್ದಾರೆ.

ಐಪಿಎಲ್ ಗೆ ಕಿರಾನ್ ಪೊಲಾರ್ಡ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ತಂಡದ ಮಾಲಕಿ ನೀತಾ ಅಂಬಾನಿ ಪ್ರತಿಕ್ರಿಯಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಪೊಲಾರ್ಡ್ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಮುಂಬೈ ತಂಡದ ತರಬೇತುದಾರರಾಗಿ ಯುವ ಆಟಗಾರಿಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಮಾಡಲಿದ್ದಾರೆ. ಅವರು ಮುಂಬೈ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.ಆದರೆ ಮೈದಾನದಲ್ಲಿ ಅವರ ಆಟವನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಪೈಕಿ ಕಿರಾನ್ ಪೊಲಾರ್ಡ್ ಅವರು ಮೈದಾನಕ್ಕೆ ಹೋದಾಗೆಲ್ಲಾ ಅಭಿಮಾನಿಗಳು ಘರ್ಜಸುತ್ತಿದ್ದರು. MI ಕುಟುಂಬದ ಮೌಲ್ಯಯುತ ಸದಸ್ಯ ಮತ್ತು ಉತ್ತಮ ಸ್ನೇಹಿತ. ಪೊಲಾರ್ಡ್ ಐಪಿಎಲ್ ವೃತ್ತಿ ಜೀವನದುದ್ದಕ್ಕೂ ಅತ್ಯಂತ ಬದ್ದತೆ ಮತ್ತು ಉತ್ಸಾಹದಿಂದ ಕ್ರಿಕೆಟ್ ಆಟವನ್ನು ಆಡಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್ ಕೋಚ್ ಆಗಿ ಹಾಗೂ ಮುಂಬೈ ಎಮಿರೇಟ್ಸ್ ತಂಡದ ಆಟಗಾರರಾಗಿ ಮುಂದುವರಿಯಲಿದ್ದಾರೆ ಎಂದು ಮುಂಬೈ ತಂಡ ಸಹ ಮಾಲೀಕ ಆಕಾಶ್ ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ : Ben Stokes : ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್ ಮೇಲೆ ಐಪಿಎಲ್ ಫ್ರಾಂಚೈಸಿಗಳ ಕಣ್ಣು, ಯಾರ ಪಾಲಾಗ್ತಾರೆ ಇಂಗ್ಲೆಂಡ್ ಆಲ್ರೌಂಡರ್?

ಇದನ್ನೂ ಓದಿ : IPL Mini Auction : ಐಪಿಎಲ್-2023ರಿಂದ ಪ್ಯಾಟ್ ಕಮಿನ್ಸ್ ಔಟ್, ಕೇನ್ ವಿಲಿಯಮ್ಸನ್ ಮೇಲೆ CSK ಕಣ್ಣು

Mumbai Indians top player Kieron Pollard announced retirement from IPL 2023

Comments are closed.