Miracle about Babiya : ಬ್ರಿಟಿಷ್ ಅಧಿಕಾರಿಗಳಿಗೆ ಪವಾಡ ತೋರಿಸಿತ್ತು ಬಬಿಯಾ ಮೊಸಳೆ

ಮಂಗಳೂರು : (Miracle about Babiya ) ಮಂಗಳೂರು ಗಡಿಭಾಗದ ಕುಂಬಳೆಯ ಅನಂತಪದ್ಮನಾಭ ದೇವಸ್ಥಾನದ ʼಬಬಿಯಾ ʼಮೊಸಳೆ ಇನ್ನಿಲ್ಲ. ಕಳೆದ ಎಪ್ಪತ್ತು ವರ್ಷಗಳಿಂದ ಕುಂಬಳೆ ಅನಂತಪದ್ಮನಾಭ ದೇವಸ್ಥಾನದ ಕೆರೆಯಲ್ಲಿತ್ತು ಎಂಬ ನಂಬಿಕೆಯಿತ್ತು.ಆದರೆ ಇದೀಗ ʼಬಬಿಯಾʼ ಮೊಸಳೆ ಸಾವನ್ನಪ್ಪಿದೆ.ಈ ಹಿಂದೆ ಬ್ರಿಟಿಷರು ಮೊಸಳೆಯನ್ನು ಕೊಂದಾಗ ಮತ್ತೊಂದು ಮೊಸಳೆ ಕೆರೆಯಲ್ಲಿ ಜನ್ಮತಾಳಿತ್ತು. ಅಷ್ಟಕ್ಕೂ ಬ್ರಿಟಿಷ್ ಅಧಿಕಾರಿಗಳಿಗೆ ಪವಾಡ ತೋರಿಸಿದ್ದ ಬಬಿಯಾ ಮೊಸಳೆ(Miracle about Babiya)ಯ ರೋಚಕ ಸ್ಟೋರಿ ಇಲ್ಲಿದೆ.

ಕೇರಳದ ತಿರುವನಂತಪುರಂ ನಲ್ಲಿರುವ ಅನಂತಪದ್ಮನಾಭ ಸ್ವಾಮೀಯ ಮೂಲ ಕ್ಷೇತ್ರ ಎನ್ನಲಾದ, ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಅನಂತಪದ್ಮನಾಭ ದೇವಸ್ಥಾನದಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ಈ ಮೊಸಳೆ ವಾಸವಾಗಿತ್ತು. ದೇವರ ಮೊಸಳೆ ಎಂದೇ ಕರೆಸಿಕೊಳ್ಳುತ್ತಿದ್ದಲ್ಲದೆ, ಸಸ್ಯಹಾರಿ ಮೊಸಳೆ ಎಂದು ಪ್ರಖ್ಯಾತಿಯನ್ನು ಪಡೆದಿತ್ತು.

ಸಾಮಾನ್ಯವಾಗಿ ಮೊಸಳೆಗಳು ಮಾಂಸವನ್ನು ಸೇವಿಸುವುದು ರೂಢಿ.ಆದರೆ ಅನಂತಪದ್ಮನಾಭ ಕೆರೆಯಲ್ಲಿ ವಾಸವಾಗಿರುವ ಬಬಿಯಾ ಬರೀ ಸಸ್ಯಹಾರಿಯಾಗಿತ್ತು.ಯಾವುದೇ ಜೀವಗಳಿಗೂ ಹಾನಿಯುಂಟು ಮಾಡಿದ್ದಿಲ್ಲ. ದಿನಕ್ಕೆ ಎರಡು ಬಾರಿ ಅನಂತಪದ್ಮನಾಭನ ಪೂಜೆಯಾದ ಬಳಿಕ ದೇವರಿಗೆ ಮಾಡಿರುವ ನೈವೇದ್ಯವನ್ನು ಸ್ವೀಕರಿಸುತ್ತಿತ್ತು.

ಇದನ್ನೂ ಓದಿ : Babiya crocodile died : ಅನಂತಪದ್ಮನಾಭ ದೇವಸ್ಥಾನದ ದೇವರ ಮೊಸಳೆ ಬಬಿಯಾ ಇನ್ನಿಲ್ಲ

ಇದನ್ನೂ ಓದಿ : Imandar: ‘ಕಾಂತಾರ’ದ ಮಾದರಿಯಲ್ಲೇ ರೋಮಾಂಚನ ಸೃಷ್ಟಿಸಿದ ‘ಇನಾಮ್ದಾರ್​​’ ಸಿನಿಮಾ ಪೋಸ್ಟರ್​​

ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಕ್ಷೇತ್ರ ಕುಂಬಳೆಯ ಅನಂತಪದ್ಮನಾಭ ಕ್ಷೇತ್ರ.ಇದು ವಿಶಾಲವಾದ ಕೆರೆಯ ನಡುವೆ ಇರುವ ಕಾರಣ,ಇದನ್ನು ಜನರು ಸರೋವರ ಕ್ಷೇತ್ರ ಅನಂತಪುರ ಎಂದೂ ಜನರು ಕರೆಯುತ್ತಾರೆ. ಅದೇ ವಿಶಾಲವಾದ ಕೆರೆಯಲ್ಲಿ ಬಾಬಿಯಾ ಮೊಸಳೆ ಎಪ್ಪತ್ತು ವರ್ಷಗಳಿಂದ ವಾಸವಾಗಿತ್ತು. ಹಿಂದೆ ಬ್ರಿಟಿಷರು ಈ ಜಾಗದಲ್ಲಿ ಟೆಂಟ್ ಹಾಕಿದ್ದಾಗ ಕೆರೆಯಲ್ಲಿ ಮೊಸಳೆಯನ್ನು ಕೊಲ್ಲಲು ಸಂಚು ರೂಪಿಸಿದ್ದು, ಬಬಿಯಾ ಎಂದು ಕರೆದಾಗ ಮೊಸಳೆ ಹೊರ ಬಂದಿತ್ತು.ಆಗ ಗುಂಡು ಹಾರಿಸಿ,ಮೊಸಳೆಯನ್ನು ಕೊಂದಿದ್ದರು. ಆ ಮೊಸಳೆ ಕೊಂದ ಬ್ರಿಟಿಷ್ ಅಧಿಕಾರಿ ಸ್ವಲ್ಪ ದಿವಸಗಳಲ್ಲಿಯೇ ವಿಷ ಹಾವು ಕಚ್ಚಿ ಅಸುನೀಗಿದ ಎಂದು ಹೇಳಲಾಗಿದೆ.

ಇದನ್ನೂ ಓದಿ : Nayanthara Vignesh Shivan : ಮದುವೆಯಾದ ನಾಲ್ಕು ತಿಂಗಳಿಗೆ ಅವಳಿ ಮಕ್ಕಳು : ಸಿಹಿಸುದ್ದಿಕೊಟ್ಟ ನಯನತಾರಾ- ವಿಘ್ನೇಶ್

ಅಚ್ಚರಿ ಎಂಬಂತೆ ಆ ಕೆರೆಯಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಂಡಿದ್ದು,ಅದಕ್ಕೆ ಅಲ್ಲಿಯ ಪೂಜಾರಿ ಬಬಿಯಾ ಎಂಬ ಹೆಸರನ್ನಿಟ್ಟು ಕರೆಯುತ್ತಾರೆ.ಬಬಿಯಾ ಎಂದು ಕರೆದರೆ ಸಾಕು ಬಂದು ನೈವೇದ್ಯದ ಪ್ರಸಾದವನ್ನು ತಿಂದು ಹೋಗುತ್ತಿತ್ತು.

ಕಳೆದ ಎರಡು ವರ್ಷಗಳ ಹಿಂದೆ ಬಬಿಯಾ ಮೊಸಳೆ ನೀರಿನಿಂದ ಹೊರಗೆ ಬಂದು ದೇಗುಲವನ್ನು ಪ್ರವೇಷಿಸಿತ್ತಂತೆ. ಮೊದಲ ಬಾರಿಗೆ ದೇವರ ಆವರಣಕ್ಕೆ ಬಂದ ಮೊಸಳೆ, ದೇವರ ಮೊಸಳೆ ಎಂದೇ ಪ್ರಖ್ಯಾತಿಯಾಗಿತ್ತು. ಇಲ್ಲಿ ಇದಕ್ಕೆ ಹರಕೆಯ ರೂಪದಲ್ಲಿ ಜನರು ನೈವೇದ್ಯವನ್ನು ಕೊಡುವ ಸಂಪ್ರದಾಯವಿದೆ. ಆದರೆ ಇದೀಗ ಬಾಬಿಯ ಅಸುನೀಗಿದ್ದು, ಇದರ ವಿಧಿ,ವಿಧಾನಗಳನ್ನು ಅನಂತಪದ್ಮನಾಭ ದೇವರ ಸನ್ನಿಧಿಯ ಆವರಣದಲ್ಲಿ ಸಡೆಸಲಾಗುವುದು .

Mangalore: (Miracle about Babiya) The crocodile Babiya of Anantapadmanabha temple in Kumbale on the border of Mangalore is no more. It was believed that Kumbale was in the lake of Anantapadmanabha temple for the last seventy years. But now the ‘Babiya’ crocodile has died. Earlier, when the British killed a crocodile, another crocodile was born in the lake. After all, here is the exciting story of Babiya the crocodile who showed a miracle to the British authorities (Miracle about Babiya).

Comments are closed.