Jeera Soda Recipe: ಮನೆಯಲ್ಲಿಯೇ ತಯಾರಿಸಿ ಅಂಗಡಿಯಲ್ಲಿ ಸಿಗುವ ಜೀರಾ ಸೋಡ

(Jeera Soda Recipe)ಅಂಗಡಿಯಲ್ಲಿ ಜ್ಯೂಸ್‌ ಕುಡಿಯಬೇಕು ಎಂದಾಗ ಮೊದಲು ನೆನಪಿಗೆ ಬರುವುದು ಜೀರಾ ಸೋಡ . ಬೇರೆಲ್ಲಾ ಜ್ಯೂಸಗಳಿಗಿಂತ ಜೀರಾ ಸೋಡ ಆರೋಗ್ಯಕ್ಕೆ ಉತ್ತಮ ಹಾಗಾಗಿ ಹಲವರು ಅಂಗಡಿಗಳಲ್ಲಿ ಇದನ್ನು ಕೊಳ್ಳಲು ಬಯಸುತ್ತಾರೆ. ಅಂಗಡಿಯಲ್ಲಿ ಸಿಗುವ ಜೀರಾ ಸೋಡವನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಜೀರಾ ಸೋಡ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ಮತ್ತು ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Jeera Soda Recipe)ಬೇಕಾಗುವ ಸಾಮಾಗ್ರಿಗಳು:
ಜೀರಿಗೆ
ಕಾಳು ಮೆಣಸು
ಸಕ್ಕರೆ
ಕಲ್ಲು ಉಪ್ಪು
ಪುದಿನ ಎಲೆ
ಚಾಟ್‌ ಮಸಾಲ
ಇನೋ

ಮಾಡುವ ವಿಧಾನ

ಮೊದಲಿಗೆ ಬಾಣಲೆಯಲ್ಲಿ ಜೀರಿಗೆ, ಕಾಳು ಮೆಣಸು ಹಾಕಿ ಹುರಿದುಕೊಂಡು ಈ ಪದಾರ್ಥ ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿಮಾಡಿಕೊಳ್ಳಬೇಕು. ಬಾಣಲೆಯಲ್ಲಿ ಮುಕ್ಕಾಲು ಕಪ್‌ ನೀರು ಹಾಕಿ ಪುಡಿಮಾಡಿಕೊಂಡ ಜೀರಿಗೆ, ಕಾಳುಮೆಣಸು , ಮುಕ್ಕಾಲು ಸಕ್ಕರೆ(ನೀರಿರುವ ಪ್ರಮಾಣದಷ್ಟೇ ಸಕ್ಕರೆ ಹಾಕಿಕೊಳ್ಳಬೇಕು) ಹಾಕಿಕೊಂಡು ದೊಡ್ಡ್‌ ಉರಿಯಲ್ಲಿ ಬಿಸಿಮಾಡಿಕೊಳ್ಳಬೇಕು. ಕುದಿಯುತ್ತಿದ್ದ ಹಾಗೆ ಕಾಲು ಚಮಚ ಕಲ್ಲುಉಪ್ಪು ಹಾಕಿಕೊಂಡು ಐದರಿಂದ ಆರು ಪುದಿನ ಎಲೆ ಹಾಕಿಕೊಂಡು ಪಾಕ ಬರುವರೆಗೆ ಸೌಟು ಆಡಿಸಬೇಕು. ನಂತರ ಒಂದು ಚಮಚ ಚಾಟ್‌ ಮಸಾಲ ಹಾಕಿ ಮಿಶ್ರಣಮಾಡಿ ಡಬ್ಬಿಯಲ್ಲಿ ಸೊಸಿಕೊಳ್ಳಬೇಕು. ಲೋಟಕ್ಕೆ ರೆಡಿ ಮಾಡಿಕೊಂಡ ಜೀರಾ ಸೋಡ ರಸ ಮೂರು ಚಮಚ , ಅರ್ಧ ಚಮಚ ಇನೋ , ನೀರು ಹಾಕಿ ಮಿಶ್ರಣ ಮಾಡಿದರೆ ಅಂಗಡಿ ರುಚಿ ಸಿಗುವ ಜೀರಾ ಸೋಡ ಕುಡಿಯಲು ರೆಡಿ.

ಇದನ್ನೂ ಓದಿ:PunarPuli Juice Health Tips:ಪುನರ್‌ ಪುಳಿ ಜ್ಯೂಸ್ ಕುಡಿದ್ರೆ ತಲೆನೋವು ಹತ್ತಿರಕ್ಕೂ ಸುಳಿಯುವುದಿಲ್ಲ

ಇದನ್ನೂ ಓದಿ:Get Healthy Thick Hair :ಆರೋಗ್ಯಕರ ದಟ್ಟ ಕೂದಲು ಪಡೆಯಲು ರುಚಿಯಾದ ಜ್ಯೂಸ್‌ ಕುಡಿಯಿರಿ

ಇದನ್ನೂ ಓದಿ:Chinese Pakoda: ಫ್ರೀ ಟೈಂನಲ್ಲಿ ಮಾಡಿ ನೋಡಿ ಚೈನೀಸ್ ಪಕೋಡಾ

ಜೀರಿಗೆ
ಜೀರಿಗೆಯಲ್ಲಿ ಪೋಷಕಾಂಶ, ಮೆಗ್ನಿಶಿಯಂ, ಸೋಡಿಯಂ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ. ಜೀರಿಗೆಯನ್ನು ಸೇವನೆ ಮಾಡುವುದರಿಂದ ಅಸಿಡಿಟಿ, ಹೊಟ್ಟೆಯ ಗ್ಯಾಸ್‌ ಮತ್ತು ವಾಕರಿಕೆ ನಿವಾರಣೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಪೋಟ್ಯಾಸಿಯಮ್‌ ಮತ್ತು ಕಬ್ಬಿಣದ ಅಂಶ ಹೇರಳವಾಗಿ ಇರುವುದರಿಂದ ಇದನ್ನು ಸೇವನೆ ಮಾಡಿದರೆ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ರಾತ್ರಿ ವೇಳೆ ಜೀರಿಗೆ ನೆನೆಹಾಕಿ, ಬೆಳಗ್ಗೆ ಅದೇ ನೀರಿನಲ್ಲಿ ಮತ್ತಷ್ಟು ನೀರು ಸೇರಿಸಿ ಕುದಿಸಿಕೊಂಡು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

ಇದನ್ನೂ ಓದಿ:Dates Health Tips:ಖರ್ಜೂರ ಉಂಡೆ ತಿಂದು ಆರೋಗ್ಯ ಕಾಪಾಡಿಕೊಳ್ಳಿ

Jeera Soda Recipe jeera soda available in the store prepare in home

Comments are closed.