ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಕಾವು, ಧೃವಂತ್-ಅಶ್ವಿನಿ ಗೌಡ ವಾರ್!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ನಲ್ಲಿ ಜಗಳ ಇಲ್ಲ ಅಂದ್ರೆ ಆಗೋದೇ ಇಲ್ಲ ಅನ್ನುವ ರೀತಿ ಆಗಿದೆ. ವೀಕೆಂಡ್ ನಲ್ಲಿ ಸುದೀಪ್ ಎಷ್ಟೇ ಬುದ್ದಿ ಹೇಳಿ ಹೋದ್ರು ಸೋಮವಾರ ಮತ್ತೆ ಅದೇ ಕಥೆ. ಸ್ಪರ್ಧಿಗಳ ಜಗಳ ಮುಂದುವರೆದಿದೆ. ಅದು ನಾಮಿನೇಷನ್ ವಿಚಾರವಾಗಿ. ಆದ್ರೆ ಈ ಸಲ ಜಗಳವಾಡಿದ್ದು ಅಶ್ವಿನಿ ಗೌಡ ಮತ್ತು ಧ್ರುವಂತ್. ಏನಾಯ್ತು ನೋಡೋಣ ಬನ್ನಿ.
ಫೇಕ್ ಯಾರು?
ಬಿಗ್ ಬಾಸ್ ಸೀಸನ್ 12 ರಲ್ಲಿ ಫೇಕ್ ಯಾರು? ಮುಖವಾಡ ಹಾಕಿಕೊಂಡು ಇರುವವರು ಯಾರು ಎಣದು ಸುದೀಪ್ ಕೇಳದಾಗ, ಎಲ್ಲರೂ ಧ್ರುವಂತ್ ಅವರ ಹೆಸರನ್ನು ತೆಗೆದುಕೊಂಡಿದ್ದರು. ಆದ್ರೆ ಧ್ರುವಂತ್ ನಾನು ಆ ರೀತಿ ಅಲ್ಲ ಎಂದಿದ್ದಾರೆ. ಅಶ್ವಿನಿ ಫೇಕ್ ಎಂದು ಇಂದು ನಾಮಿನೇಟ್ ಮಾಡಿದ್ದಾರೆ.
ನಾಮಿನೇಷನ್ ವಾರ್
ಗಿಲ್ಲಿ ನಟನ ಜೊತೆ ಕ್ಲೋಸ್ ಆಗಿದ್ದ ರಕ್ಷಿತಾ ಗಿಲ್ಲಿ ನಟನನ್ನು ನಾಮಿನೇಷನ್ ಮಾಡಿರುವುದು ಆಶ್ಚರ್ಯ ತಂದಿದೆ. ಇನ್ನು ಧೃವಂತ್ ಈ ಮನೆಯಲ್ಲಿ ಫೇಕ್ ಮುಖವಾಡ ಹಾಕಿಕೊಂಡಿರುವವರು ಅಶ್ವಿನಿ ಮೇಡಂ ಎಂದಿದ್ದಾರೆ. ಈ ಮನೆಯಲ್ಲಿ ಮಿಸ್ ಲೀಡ್ ಮಾಡಿರುವವಷ್ಟು ಯಾರು ಮಾಡಿಲ್ಲ ಎಂದು ಅಶ್ವಿನಿ ಗೌಡ ಮತ್ತು ಜಾನ್ವಿ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಅಶ್ವಿನಿ ಗರಂ
ನೀನು ಪೇಕ್. ನಮ್ಮಿಬ್ಬರನ್ನು ನಿಮ್ಮ ತೆಕ್ಕೆಗೆ ತೆಗೆದುಕೊಳ್ಳೋಕೆ ನೋಡಿದ್ರಿ. ಅದು ಆಗಲಿಲ್ಲ. ನಾವು ಮಲ್ಲಮ್ಮ ಅಲ್ಲ. ತೆಕ್ಕೆಗೆ ಬೀಳೋಕೆ. ಫೇಕ್ ಮಾಡೋ ನಿಮಗೆ ಅಷ್ಟು ಇರಬೇಕಾದ್ರೆ, ತಾಕತ್ ಆಗಿ ಮಾತನಾಡುವ ನನಗೆ ಎಷ್ಟು ಇರಲ್ಲ ಎಂದು ಧೃವಂತ್ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಇದನ್ನೂ ಓದಿ: https://kannada.newsnext.live/cinema/the-women-s-card-does-not-work-here-ashwini-gowda-has-a-sudeep-class/
ಧೃವಂತ್ ಫೇಕ್
ಪ್ರೇಕ್ಷಕರ ಅಭಿಪ್ರಾಯದ ಪ್ರಕಾರ ಧೃವಂತ್ ಫೇಕ್ ಎಂದು ಅನ್ನಿಸುತ್ತೆ. ಯಾಕಂದ್ರೆ ವಾರ ವಾರವೂ ಒಬ್ಬಬ್ಬರ ಜೊತೆಗೆ ಇರ್ತಾರೆ. ಕ್ಲೋಸ್ ಆಗಿದ್ದವರ ವಿರುದ್ಧವೇ ಬೇರೆಯವರ ಜೊತೆ ಮಾತನಾಡುತ್ತಾರೆ. ಇಲ್ಲ ಸಲ್ಲದ ಆರೋಪ ಮಾಡ್ತಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಇಷ್ಟು ದಿನ ಅಶ್ವಿನಿ ಗೌಡ, ಜಾನ್ವಿ ಜೊತೆಗೆ ಇದ್ದ ಧೃವಂತ್ ಈಗ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದು ಮುಂದುವರೆಯುತ್ತಾ? ನಾಮಿನೇಷನ್ ಗೆ ಮಾತ್ರ ಈ ಸಿಟ್ಟು ಮಾತ್ರನಾ ನೋಡಬೇಕು.



