sai pallavi birthday : ಬರ್ತಡೇಯಂದು ಹೊಸ ಸಿನಿಮಾ ಘೋಷಿಸಿದ ಸಾಯಿ ಪಲ್ಲವಿ: ಕನ್ನಡದಲ್ಲಿ ಡಬ್ಬಿಂಗ್​ ಮಾಡಿದ ನಟಿ

sai pallavi birthday :ನಟಿ ಸಾಯಿ ಪಲ್ಲವಿಗೆ ತೆಲುಗು, ತಮಿಳು ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿ ಬಳಗವಿದೆ. ಸಾಯಿ ಪಲ್ಲವಿ ಕನ್ನಡದಲ್ಲಿಯೂ ಒಂದು ಸಿನಿಮಾ ಮಾಡಬೇಕು ಎಂಬ ಕೂಗು ಕರ್ನಾಟಕದಲ್ಲಿರುವ ಸಾಯಿ ಅಭಿಮಾನಿಗಳಿಂದ ಕೇಳಿ ಬರುತ್ತಲೇ ಇತ್ತು. ಇದೇ ಮಾತಿಗೆ ಪುಷ್ಠಿ ಎಂಬಂತೆ ಮಂಸೋರೆ ನಿರ್ದೇಶನದ ಸಿನಿಮಾ ಮೂಲಕ ಸಾಯಿ ಪಲ್ಲವಿ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಾರೆ ಅಂತೆಲ್ಲ ಹೇಳಲಾಗಿತ್ತು. ಆದರೆ ಇದೀಗ ತಮ್ಮ ಜನ್ಮ ದಿನದ ಪ್ರಯುಕ್ತ ನಟಿ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ. ಅದರಲ್ಲೂ ಕನ್ನಡದ ಅಭಿಮಾನಿಗಳಿಗೆ ಡಬಲ್​ ಗುಡ್​ ನ್ಯೂಸ್​ ನೀಡಿದ್ದಾರೆ.


ಬಿಡುಗಡೆಗೆ ಸಿದ್ಧವಾಗಿರುವ ಸಾಯಿ ಪಲ್ಲವಿಯವರ ವಿರಾಟ ಪರ್ವಂ ಸಿನಿಮಾದ ಬಳಿಕ ಸಾಯಿ ಪಲ್ಲವಿ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ ಎಂಬ ಮಾತು ಸಿನಿ ವಲಯದಲ್ಲಿ ಹರಿದಾಡುತ್ತಿತ್ತು. ಕೆಲವರಂತೂ ಮದುವೆಯಾಗುವ ಕಾರಣಕ್ಕೆ ನಟಿ ಸಾಯಿ ಪಲ್ಲವಿ ಸದ್ಯ ಯಾವುದೇ ಮೂವಿಯನ್ನು ಒಪ್ಪಿಕೊಂಡಿಲ್ಲ ಅಂತಲೂ ಹೇಳಿದ್ದರು. ಆದರೆ ಇದೆಲ್ಲ ವದಂತಿಗಳಿಗೆ ಫುಲ್​ ಸ್ಟಾಪ್​ ಇಟ್ಟಿರುವ ನಟಿ ಸಾಯಿ ಪಲ್ಲವಿ ತಮ್ಮ ಜನ್ಮ ದಿನವಾದ ಇಂದು ತಮ್ಮ ಹೊಸ ಸಿನಿಮಾ ‘ಗಾರ್ಗಿ’ಯ ಫಸ್ಟ್ ಲುಕ್​ನ್ನು ಬಹಿರಂಗಗೊಳಿಸಿದ್ದಾರೆ. ಇನ್ನೊಂದು ವಿಶೇಷ ಅಂದರೆ ಈ ಸಿನಿಮಾ ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಮೂಡಿ ಬರುತ್ತಿದೆ.


ತೆಲಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ನ್ಯಾಯಕ್ಕಾಗಿ ಹೋರಾಟ ಮಾಡುವ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ನ್ಯಾಯ ದೇವತೆಯ ಮುಂದೆ ಸಾಯಿ ಪಲ್ಲವಿ ನಿಂತುಕೊಂಡಿರುವ ಫಸ್ಟ್​ ಲುಕ್​ ಇದಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡುವ ಮೂಲಕ ಹೊಸ ಸಿನಿಮಾಗೆ ಹಾರೈಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ವಿಶೇಷ ಅಂದರೆ ಈ ಸಿನಿಮಾದ ಕನ್ನಡ ಆವೃತ್ತಿಗೂ ಸಾಯಿ ಪಲ್ಲವಿ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಡಬ್ಬಿಂಗ್​ ಮಾಡಲು ಸಾಯಿ ಪಲ್ಲವಿ ಕಷ್ಟ ಪಡುತ್ತಿರುವ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಸಾಕಷ್ಟು ಟೇಕ್​ಗಳನ್ನು ತೆಗೆದುಕೊಂಡ ನಟಿ ಸಾಯಿ ಪಲ್ಲವಿ ಕೊನೆಗೂ ಕನ್ನಡದಲ್ಲಿ ಡೈಲಾಗ್​ ಹೇಳುವಲ್ಲಿ ಯಶಸ್ವಿಯಾಗುತ್ತಾರೆ. ಈ ವಿಡಿಯೋ ನೋಡಿದ ಕನ್ನಡದ ಸಾಯಿ ಪಲ್ಲವಿ ಅಭಿಮಾನಿಗಳು ಸಖತ್​​ ಖುಷ್​ ಆಗಿದ್ದಾರೆ.

ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್

ಇದನ್ನೂ ಓದಿ : School Open Postpone : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್‌ ಹೊರಟ್ಟಿ

sai pallavi birthday sai pallavi dubs herself in kannada for her role in gargi movie

Comments are closed.