Hide and Seek Dies : ಲಿಫ್ಟ್‌ನಲ್ಲಿ ಕಣ್ಣಾಮುಚ್ಚಾಲೆ ಆಟ : 16 ವರ್ಷದ ಬಾಲಕಿ ಸಾವು

ಮುಂಬೈ : Hide and Seek Dies : ಲಿಫ್ಟ್‌ನಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ವೇಳೆಯಲ್ಲಿ 16 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮುಂಬೈನ ಮನ್‌ಖುರ್ದ್‌ ನ್ಯೂ ಸಾಯಿ ಧಾಮ್ ಅಪಾರ್ಟ್‌ಮೆಂಟ್ ನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ರೇಷ್ಮಾ ಖಾರವಿ ಎಂದು ಗುರುತಿಸಲಾಗಿದೆ. ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಇದೀಗ ಸೊಸೈಟಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಮನ್‌ಖುರ್ದ್‌ ನ್ಯೂ ಸಾಯಿ ಧಾಮ್ ಅಪಾರ್ಟ್‌ಮೆಂಟ್ ನಲ್ಲಿ ಬಾಲಕಿ ತನ್ನ ಸಹೋದರ ಮತ್ತು ಸಂಬಂಧಿಕರ ಜೊತೆಯಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಳು. ಈ ವೇಳೆಯಲ್ಲಿ 7 ನೇ ಮಹಡಿಯಿಂದ ಬಂದ ಮತ್ತೊಂದು ಲಿಫ್ಟ್ ಢಿಕ್ಕಿಯಾಗಿತ್ತು. ಈ ವೇಳೆಯಲ್ಲಿ ಬಾಲಕಿ ತನ್ನ ತಲೆಯನ್ನು ಹೊರಗೆ ತೆಗೆಯುವ ವೇಳೆಯಲ್ಲಿ ಆಕೆಯ ತಲೆಗೆ ಗಾಯವಾಗಿದ್ದು, ತೀವ್ರ ರಕ್ತಶ್ರಾವದಿಂದಾಗಿ ಬಾಲಕಿ ಸಾವನ್ನಪ್ಪಿದ್ದಾಳೆ.

ಮರಣೋತ್ತರ ಪರೀಕ್ಷೆಯನ್ನು ನಡೆಸಿದ ನಂತರದಲ್ಲಿ ನಂತರ ಆಕೆಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಲಿಫ್ಟ್‌ ಕಿಟಕಿಗೆ ಗಾಜು ಅಳವಡಿಕೆ ಮಾಡದ ಹಿನ್ನೆಲೆಯಲ್ಲಿ ಈ ಘಟನೆ ಸಂಬಂಧಿಸಿದ್ದು, ಹೌಸಿಂಗ್ ಸೊಸೈಟಿಯ ಅಧಿಕಾರಿಗಳು ಲಿಫ್ಟ್‌ ಕಿಟಕಿಗೆ ಗಾಜು ಅಳವಡಿಸುವಂತೆ ಮೃತ ಬಾಲಕಿಯ ತಂದೆ ರವಿ ಖಾರವಿ ಅವರು ಮನವಿ ಮಾಡಿಕೊಂಡಿದ್ದಾರೆ.

ಬಾಲಕಿ ಸಾವಿನ ಬೆನ್ನಲ್ಲೇ ಮುಂಬೈ ಪೊಲೀಸರು ಸೊಸೈಟಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ ಮತ್ತು ರೆಸಿಡೆನ್ಶಿಯಲ್ ಸೊಸೈಟಿಯ ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 304 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಹೋಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ : ಇಬ್ಬರು ಅರೆಸ್ಟ್‌, ಮೂವರು ಎಸ್ಕೇಪ್ ‌

ಗುರುಗ್ರಾಮ : ಹೋಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಐವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಗುರ್‌ಗಾವಂನ ಗುರುಗ್ರಾಮದಲ್ಲಿ ನಡೆದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

14 ವರ್ಷದ ಸಂತ್ರಸ್ತೆಯ ತಾಯಿಯ ದೂರಿನ ಪ್ರಕಾರ, ಆಕೆಯ ಮಗಳು 12.30 ರ ಸುಮಾರಿಗೆ ಮನೆಯಿಂದ ಹೊರಟು ಹೋಗಿದ್ದಾಳೆ. ಮನೆಯ ಪಕ್ಕದಲ್ಲಿರುವ ಉದ್ಯಾನವನಕ್ಕೆ ತೆರಳುವುದಾಗಿ ಹೇಳಿದ್ದ ಮಗಳು ತುಂಬಾ ಸಮಯವಾದ್ರೂ ಮನೆಗೆ ವಾಪಾಸ್‌ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ರೂ ಮಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಒಂದಿಡೀ ದಿನ ಮಗಳಿಲ್ಲದೇ ಕಳೆದಿದ್ದರು. ಮರು ದಿನ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಗಳು ಮನೆಗೆ ವಾಪಾಸ್‌ ಬಂದಿದ್ದಳು. ಈ ವೇಳೆಯಲ್ಲಿ ತಾಯಿ ಮಗಳನ್ನು ವಿಚಾರಣೆ ನಡೆಸಿದ್ದಾರೆ.

ತಾನು ಉದ್ಯಾನವನದಲ್ಲಿ ಇದ್ದ ವೇಳೆಯಲ್ಲಿ ಅಲ್ಲಿಗೆ ಬಂದ ಇಬ್ಬರು ಅಪ್ರಾಪ್ತ ಬಾಲಕರು ನನ್ನನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಟೆಲ್‌ಗೆ ತೆರಳಿದ್ದಾರೆ. ಅಲ್ಲಿದ್ದ ಮತ್ತೆ ಮೂವರು ಸೇರಿಕೊಂಡು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವಿಚಾರವನ್ನು ಯಾರ ಬಳಿಯಲ್ಲಾದ್ರೂ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಇದೀಗ ಆರೋಪಿಗಳ ವಿರುದ್ದ ಪೊಲೀಸರು ಐಪಿಸಿ ಸೆಕ್ಷನ್ 376-ಡಿ (ಗ್ಯಾಂಗ್ ರೇಪ್), 506 (ಕ್ರಿಮಿನಲ್ ಬೆದರಿಕೆ), ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ ಅಡಿಯಲ್ಲಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ ಎಂದು ಪಶ್ಚಿಮ ಡಿಸಿಪಿ ದೀಪಕ್ ಸಹರನ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ಭಾರತದಲ್ಲಿ 2021 ರಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿ ದಿನ ಸರಾಸರಿ 86, ಆದರೆ ಪ್ರತಿ ಗಂಟೆಗೆ ಸರಿಸುಮಾರು 49 ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) ‘ಕ್ರೈಮ್ ಇನ್ ಇಂಡಿಯಾ 2021’ ವರದಿಯ ಪ್ರಕಾರ, 2020 ರಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ 28,046, ಆದರೆ 2019 ರಲ್ಲಿ 32,033.

ಇದನ್ನೂ ಓದಿ : Maharashtra car Accident : ಪಂಡರಾಪುರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಹರಿದ ಕಾರು : 7 ಸಾವು, ಹಲವರು ಗಂಭೀರ

ಇದನ್ನೂ ಓದಿ : Man Shoots Girlfriend:ಪ್ರೀತಿಸಿದ ಮಹಿಳೆ ಬ್ರೇಕಪ್​ ಮಾಡಿಕೊಂಡಿದ್ದಕ್ಕೆ ಗುಂಡಿಟ್ಟು ಕೊಂದ ಭೂಪ ಅಂದರ್​

16 years Old Dies Playing hide and seek in Lift Mumbai

Comments are closed.