ರಾಮಾವತಾರದಲ್ಲಿ ಜ್ಯೂನಿಯರ್ ಒಡೆಯರ್….! ಪವನ್ ಹಂಚಿಕೊಂಡ್ರು ಕ್ಯೂಟ್ ಪೋಟೋ….!!


ಮನೆಯಲ್ಲಿರೋ ಮಕ್ಕಳು ದೇವರ ರೂಪ ಅಂತಾರೆ. ಶ್ರೀಕೃಷ್ಣ,ಶ್ರೀರಾಮ ಎಲ್ಲರ ಅವತಾರದಲ್ಲಿ ಕಾಣೋ ಮಕ್ಕಳಿಗೆ ನಿಮ್ಮಾಸೆಯ ವೇಷ ಹಾಕಿ ಖುಷಿಪಡ ಬಹುದು. ಇದಕ್ಕೆ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಿರ್ದೇಶಕ ಪವನ್ ಒಡೆಯರ್ ಕೂಡ ಹೊರತಲ್ಲ.

ಇತ್ತೀಚೆಗಷ್ಟೇ ಜನಿಸಿರುವ ಮಗನಿಗೆ ಶ್ರೀರಾಮನವಮಿ ಯ ಪ್ರಯುಕ್ತ ರಾಮನ ವೇಷ ಹಾಕಿರುವ ಪವನ್ ಒಡೆಯರ್ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಕೌಸಲ್ಯೆಯಂತೆ ಸಿದ್ಧವಾಗಿದ್ದರೇ, ಮಗನಿಗೆ ಪಂಜೆ ಉಡಿಸಿ ಬಾಲರಾಮನಂತೆ  ಶೃಂಗಾರ ಮಾಡಿದ್ದಾರೆ. ಮುದ್ದಾದ ಮಗನು ಥೇಟ್ ರಾಮನಂತೆ ಕಂಗೊಳಿಸಿದ್ದಾನೆ.

ಈ ಪೋಟೋ ಜೊತೆ ಟ್ವೀಟ್ ಮಾಡಿರುವ ಪವನ್ ಒಡೆಯರ್ ಕೌಸಲ್ಯಸುಖವರ್ಧನ ರಾಮ ಎಂದು ಕ್ಯಾಪ್ಸನ್ ನೀಡಿದ್ದಾರೆ. ಅಲ್ಲದೇ ಶ್ರೀರಾಮ ನವಮಿಯ ಶುಭಾಶಯಗಳು ಎಂದು ಎಲ್ಲರಿಗೂ ವಿಶ್ ಮಾಡಿದ್ದಾರೆ. ಈ ಪೋಟೋ ಸಖತ್ ವೈರಲ್ ಆಗಿದ್ದು ಸಿನಿಮಾ ಸ್ಟಾರ್ ಗಳು, ಅಭಿಮಾನಿಗಳು ಮುದ್ದಾದ ಬಾಲರಾಮನನ್ನು ಕಂಡು ಮುದಗೊಂಡಿದ್ದಲ್ಲೇ ಕಮೆಂಟ್ ಮಾಡಿ ಖುಷಿ ಪಟ್ಟಿದ್ದಾರೆ.

2018 ರಲ್ಲಿ ನಟಿ ಅಪೇಕ್ಷಾ ಪುರೋಹಿತ್ ಜೊತೆ ಸಪ್ತಪದಿ ತುಳಿದಿದ್ದ ಪವನ್ ಒಡೆಯರ್ ಕೆಲ ತಿಂಗಳ ಹಿಂದೆ ಪತ್ನಿಗೆ ಅದ್ದೂರಿ ಸೀಮಂತ್ ಮಾಡಿ ಪೋಟೋಸ್ ಹಂಚಿಕೊಂಡಿದ್ದರು. 2019 ರಲ್ಲಿ ಗೋವಿಂದಾಯ್ ನಮಃ ನಿರ್ದೇಶನದ ಬಳಿಕ ಪವನ್ ಒಡೆಯರ್ ಪ್ರಸಿದ್ಧಿ ಗಳಿಸಿದ್ದರು.

Comments are closed.