ಬಿಗ್ ಬಾಸ್ ಮನೆಯೊಳಗೆ ಬಂದ್ರು ಜನ, ಕ್ಯಾಪ್ಟನ್ ಆಯ್ಕೆ ಮಾಡ್ತಾರೆ ಅಭಿಮಾನಿಗಳು, ಮಾಳು ಮುತ್ತಿನಂತ ಮಾತು ಕೇಳಿ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮನೆಗೆ ಇಂದು ಜನಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಯೊಳಗೆ ಸ್ಪರ್ಧಿಗಳ ಅಭಿಮಾನಿಗಳ ಕೂಗು ಜೋರಾಗಿದೆ. ಇವರು ಈ ಸಲ ಬಂದಿರೋದು ಮನೆಯ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲು. ಹೌದು ಈ ಬಾರಿ ಅಭಿಮಾನಿಗಳಿಂದ ಮನೆಯ ಕ್ಯಾಪ್ಟನ್ ಆಯ್ಕೆ ನಡೆಯಲಿದೆ. ಜನ ಯಾರಿಗೆ ಹೆಚ್ಚು ಮತ ಹಾಕ್ತಾರೋ ಅವರು ಮನೆಯ ಮುಂದಿನ ಕ್ಯಾಪ್ಟನ್ ಆಗಲಿದ್ದಾರೆ. ಈ ಬಾರಿ ಅಭಿಷೇಕ್, ಜಾನ್ವಿ, ರಘು, ರಿಷಾ, ಮಾಳು ಹಾಗೂ ಕಾವ್ಯ ಕ್ಯಾಪ್ಟನ್ ರೇಸ್‍ನಲ್ಲಿದ್ದಾರೆ. ಮಾಳು ಸಖತ್ ಆಗಿ ಮಾತನಾಡಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಹಾಗಾದ್ರೆ ಜನರಿಗೆ ಯಾರು ಇಷ್ಟ ಆಗ್ತಾರೆ ಅಂತ ನೋಡಬೇಕು.

ಸ್ಪರ್ಧಿಗಳನ್ನು ನೋಡಲು ಬಂದ್ರು ಜನ
ಬಿಗ್ ಬಾಸ್ ಮನೆಯಲ್ಲಿ ಇವತ್ತು ಜನವೋ ಜನ ಇದ್ದಾರೆ. ಸ್ಪರ್ಧಿಗಳನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡುವ ಜವಾಬ್ದಾರಿ ಜನರ ಕೈನಲ್ಲಿದೆ. ಸ್ಪರ್ಧಿಗಳು ತಮ್ಮ ಬಗ್ಗೆ ತಾವು ಹೇಳಿಕೊಂಡು ಮತ ಹಾಕಿಸಿಕೊಳ್ಳಬೇಕು. ಯಾರಿಗೆ ಹೆಚ್ಚು ಮತ ಬೀಳುತ್ತೋ ಅವರು ಗೆದ್ದು ಮನೆಯ ಚುಕ್ಕಾಣಿ ಹಿಡಿಯುತ್ತಾರೆ.

ಮನೆ ಪತ್ರ ಪಡೆದ ಸೇವ್ ಆದ ಅಭ್ಯರ್ಥಿಗಳು
ಇನ್ನು ಈ ಬಾರಿ ಯಾವುದೇ ಟಾಸ್ಕ್ ಇರಲಿಲ್ಲ. ಆದ್ರೆ ಮನೆಯವರ ಪತ್ರ ಸಿಕ್ಕವರು ನಾಮಿನೇಷನ್ ನಿಂದ ಪಾರಾಗಿ ಕ್ಯಾಪ್ಟನ್ ಆಗಲು ಅರ್ಹತೆ ಪಡೆದಿದ್ದಾರೆ. ಈಗ ಈ ರೇಸ್‍ನಲ್ಲಿ ಅಭಿಷೇಕ್, ಜಾನ್ವಿ, ರಘು, ರಿಷಾ, ಮಾಳು ಹಾಗೂ ಕಾವ್ಯ ಇದ್ದಾರೆ. ಇವರಿಗೆ ಮನೆ ಪತ್ರ ಸಿಕ್ಕಿದ್ದು ನಾಯಕನ ಓಟದಲ್ಲಿ ಇದ್ದಾರೆ.

ಮಾಳು ಮಾತು ಬೆಂಕಿ
ಜನರ ಮುಂದೆ ಮಾಳು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಬಂದ ದಿನದಿಂದ ಮಾಳು ಸ್ಟ್ಯಾಂಡ್ ತಗೋಳಲ್ಲ ಅಂತಾರೆ. ಇಲ್ಲಿ ಜಗಳ ಏಕೆ ಆಗುತ್ತೆ ಅಂತಾನೇ ಗೊತ್ತಿಲ್ಲ. ಇಲ್ಲಿ ಯಾವುದರ ಸಲುವಾಗಿ ಜಗಳ ಆಡ್ತಾರೆ ಅಂತ ಅವರಿಗೆ ಗೊತ್ತಿರಲ್ಲ. ಜಗಳಕ್ಕೆ ಸ್ಟ್ಯಾಂಡ್ ತಗೋಳೋಕೆ ಹೋದ್ರೆ ಹುಚ್ಚರಾಗ್ತೀವಿ. ಅವರಷ್ಟು ಹುಚ್ಚರಿಲ್ಲ. ನಾನು ಕ್ಯಾಪ್ಟನ್ ಆಗ್ತೀನಿ. ಹಳ್ಳಿ ಹುಡುಗನ ಗತ್ತು, ಗಮತ್ತು, ತಾಖತ್ತು ತೋರಿಸುತ್ತೇನೆ ಎಂದು ಮಾಳು ಹೇಳಿದ್ದಾರೆ.

ಮಾಳು ಮಾತು ಜನರಿಗೆ ಇಷ್ಟ ಆಗಿದೆ ಎಂದು ಅನ್ನಿಸುತ್ತೆ. ಹಾಗಾದ್ರೆ ಯಾರು ಜನರ ಮನಸ್ಸು ಗೆದ್ದು ಕ್ಯಾಪ್ಟನ್ ಆಗ್ತಾರೆ ಅಂತ ನೋಡಬೇಕು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories