ರಶ್ಮಿಕಾ-ವಿಜಯ್ ದೇವರಕೊಂಡಗೆ ಪ್ರಧಾನಿಯಿಂದ ವಿಶ್, ಹೊಸ ಅಧ್ಯಾಯಕ್ಕೆ ಪ್ರೀತಿಯಿಂದ ಶುಭಾಶಯ ತಿಳಿಸಿದ ಮೋದಿ!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯ ತಿಳಿಸಿದ್ದಾರೆ.

PM wishes Rashmika-Vijay Deverakonda, Modi extends warm wishes for new chapter

2026 ರ ಬಹು ನಿರೀಕ್ಷಿತ ಹೈಪ್ರೊಫೈಲ್ ವಿವಾಹಗಳಲ್ಲಿ ಒಂದಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ಭರದಿಂದ ಸಾಗುತ್ತಿದೆ. ನಾಳೆ ಇಬ್ಬರು ಹಸಮಣೆ ಏರಲಿದ್ದಾರೆ. ಈ ಜೋಡಿ ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿವಾಹಕ್ಕೂ ಮುನ್ನ ದಂಪತಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಶ್
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ವಿಜಯ್ ದೇವರಕೊಂಡ ಅವರ ಪೋಷಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವಾಹ ಆಮಂತ್ರಣ ಪತ್ರವನ್ನು ಕಳುಹಿಸಿದ್ದಾರೆ. ಈಗ, ಪ್ರಧಾನಿ ಪತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ.

ಹೃತ್ಪೂರ್ವಕ ಅಭಿನಂದನೆ
ಅದರಲ್ಲಿ “ಫೆಬ್ರವರಿ 26, 2026 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ನಿಮ್ಮನ್ನು ಆಹ್ವಾನಿಸಲು ಸಂತೋಷವಾಗಿದೆ. ಈ ನಿಜವಾಗಿಯೂ ಸಂತೋಷದಾಯಕ ಮತ್ತು ಶುಭ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಇದು ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಹೊಸ ಸುಂದರ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಸಾತ್ ಪವಿತ್ರ ಫೇರೆ ಎಂಬ ಉತ್ಸಾಹದೊಂದಿಗೆ, ಅಂದರೆ ಒಟ್ಟಿಗೆ ಏಳು ಹೆಜ್ಜೆಗಳನ್ನು ಇಟ್ಟ ನಂತರ, ದಂಪತಿಗಳು ಜೀವನಪಯರ್ಂತ ಸ್ನೇಹಿತರಾಗುತ್ತಾರೆ.” ಎಂದು ಇದೆ.

ಇದನ್ನೂ ಓದಿ: https://kannada.newsnext.live/cinema/rashmika-mandanna-says-wedding-video-is-not-for-sale/#google_vignette

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಭಾನುವಾರ (ಫೆಬ್ರವರಿ 22) ತಮ್ಮ ಮದುವೆಯನ್ನು ಘೋಷಿಸಿದರು. ದಂಪತಿ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿ ಮೂಲಕ ಲಕ್ಷಾಂತರ ಅಭಿಮಾನಿಗಳೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡರು. ಅವರ ಮದುವೆಯನ್ನು ಅಧಿಕೃತವಾಗಿ “ದಿ ವೆಡ್ಡಿಂಗ್ ಆಫ್ ವಿರೋಶ್” ಎಂದು ಕರೆಯಲಾಗುತ್ತದೆ ಎಂದು ಬಹಿರಂಗಪಡಿಸಿದರು.

About The Author

Scroll to Top