ಮದುವೆ ವಿಡಿಯೋ ಮಾರಾಟಕ್ಕಿಲ್ಲ ಎಂದ ರಶ್ಮಿಕಾ ಮಂದಣ್ಣ : ಅಭಿಮಾನಿಗಳಿಂದ ಕಿರಿಕ್​ ಬೆಡಗಿ ನಿರ್ಧಾರಕ್ಕೆ ಮೆಚ್ಚುಗೆ

ಇತ್ತೀಚಿನ ದಿನಗಳಲ್ಲಿ ಖಾಸಗಿಯಾಗಿ ಮದುವೆಯಾಗುವ ಸೆಲೆಬ್ರಿಟಿ ಜೋಡಿಗಳು ತಮ್ಮ ಮದುವೆಯ ವಿಡಿಯೋಗಳನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡುವುದು ಟ್ರೆಂಡ್​ ಆಗಿದೆ. ಕೋಟಿಗಟ್ಟಲೇ ಆಫರ್​ ನೀಡಿ ಈ ವಿಡಿಯೋವನ್ನು ಖರೀದಿಸುವ ಆನ್​ಲೈನ್​ ವೇದಿಕಗಳಿಗೂ ತಾವೂ ಬಿಲಿಯನ್​ಗಟ್ಟಲೇ ಹಣ ಸಂಪಾದಿಸುತ್ತವೆ. ಆದರೆ ಈ ಸಂಪ್ರದಾಯಕ್ಕೆ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್​ ದೇವರಕೊಂಡ ಬ್ರೇಕ್​ ಹಾಕಿದ್ದಾರೆ.

ಹೌದು..! ಗೀತ ಗೋವಿಂದಂ ಖ್ಯಾತಿಯ ಈ ಜೋಡಿ ಹಸೆಮಣೆ ಏರಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಉದಯ್​ಪುರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು ಈಗಾಗಲೇ ಅದ್ಧೂರಿ ತಯಾರಿ ಕೂಡ ನಡೆಯುತ್ತಿದೆ.

ಈ ಎಲ್ಲದರ ನಡುವೆ ನೆಟ್​ಫ್ಲಿಕ್ಸ್​ ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡ ಮದುವೆ ವಿಡಿಯೋ ಪ್ರಸಾರದ ಹಕ್ಕನ್ನು ಪಡೆಯಲು 60 ಕೋಟಿ ರೂಪಾಯಿಗಳ ಆಫರ್​ ನೀಡಿತ್ತು ಎನ್ನಲಾಗಿದೆ. ಆದರೆ ಈ ಆಫರ್​ ನಿರಾಕರಿಸಿರುವ ರಶ್ಮಿಕಾ ಮಂದಣ್ಣ ನಮ್ಮ ಮದುವೆಯ ಕ್ಷಣಗಳು ಮಾರಾಟಕ್ಕಿಲ್ಲ ಎಂದಿದ್ದಾರಂತೆ.

ಹಣಕ್ಕಾಗಿ ತಮ್ಮ ಮದುವೆಯ ವಿಡಿಯೋ ವ್ಯಾಪಾರ ಮಾಡಲು ಇಚ್ಛಿಸದ ರಶ್ಮಿಕಾ ಮಂದಣ್ಣ ನಿರ್ಧಾರ ಅಭಿಮಾನಿಗಳಿಗೆ ಖುಷಿ ತಂದಿದೆ.ಮದುವೆಯನ್ನೂ ವ್ಯಾಪಾರದ ಕೇಂದ್ರ ಮಾಡಲು ಇಚ್ಛಿಸದ ರಶ್ಮಿಕಾಗೆ ಫ್ಯಾನ್ಸ್ ಭೇಷ್​ ಎಂದಿದ್ದಾರೆ. ಸದಾ ವಿವಾದಗಳ ಮೂಲಕವೇ ಸುದ್ದಿ ಮಾಡೋ ಈ ಕಿರಿಕ್​ ಬೆಡಗಿ ಇದೇ ಮೊದಲ ಬಾರಿಗೆ ಪ್ರಶಂಸೆ ಪಡೆದುಕೊಳ್ತಿದ್ದಾರೆ.

ಇದನ್ನೂ ಓದಿ: ವಲವಾರ ಸಿನಿಮಾದಲ್ಲಿ ಸಕಲೇಶಪುರದ ಹಳ್ಳಿಯ ಚಿತ್ರಣ: ಸ್ಟಾರ್‌ಗಳ ಅಬ್ಬರವಿಲ್ಲದೆ ಗೆಲ್ಲುತ್ತಿದೆ ಕನ್ನಡಿಗರ ಮನ

ಮೂಲಗಳ ಪ್ರಕಾರ ಇನ್ನೊಂದು 10 ದಿನಗಳಲ್ಲಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್​ ದೇವರಕೊಂಡ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಇವರಿಬ್ಬರ ಮದುವೆಯ ಎಐ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದೆ .

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories