ಬಿಗ್ ಬಾಸ್ ಮನೆಯಲ್ಲಿ ಆಲೂಗಡ್ಡೆ ಜಗಳ, ಕಿಚ್ಚನ ಕ್ಲಾಸ್ ಯಾರಿಗೆ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರು ಬಿಗ್ ಬಾಸ್ ಶೋನಲ್ಲಿ ಇಂದು ಆಲೂಗಡ್ಡೆ ಜಗಳ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸಾರಿ ಊಟದ ವಿಚಾರವಾಗಿ ಗೊಂದಲಗಳು ಕ್ರಿಯೇಟ್ ಆಗ್ತಾನೆ ಇರ್ತಾವೆ. ಅದೇ ರೀತಿ ಈ ಬಾರಿಯೂ ಆಲೂಗಡ್ಡೆ ವಿಚಾರಾಗಿ ಜಗಳ ನಡೆದಿದೆ. ರಘು, ಅಶ್ವಿನಿ ಗೌಡ, ರಜತ್ ಕಿಶನ್ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಅಲ್ಲದೇ ಇವತ್ತು ಕಿಚ್ಚನ ಪಂಚಾಯಿತಿ ಇದ್ದು, ಯಾರಿಗೆ ಕ್ಲಾಸ್ ತೆಗೆದುಕೊಳ್ತಾರೆ ನೋಡಬೇಕು.
ರಘು ಹೇಳಿದ್ದೇನು
ರಘು ಅವರು ಹೆಚ್ಚಿನ ಸಮಯ ಅಡುಗೆ ಮನೆಯಲ್ಲೇ ಕಾಲ ಕಳೆಯುತ್ತಾರೆ. ಅಡುಗೆ ಮಾಡಿ ಕೊಡ್ತಾರೆ. ಇಂದು ಏನೋ ಅಡುಗೆ ಮಾಡುತ್ತಾ, ಆಲೂಗಡ್ಡೆಯನ್ನೂ ಶೇರ್ ಮಾಡಿಕೊಳ್ಳಬೇಕು. ಅವರಿಗೆ ಬಂದ ಆಲೂವನ್ನು ಅವರೇ ತಿನ್ನಬೇಕು ಎಂದು ಹೇಳ್ತಾರೆ.
ಅಕ್ಕಿಯನ್ನೂ ಹಂಚಿಬಿಡಿ ಎಂದ ರಜತ್
ರಘು ಅವರು ಆಲೂಗಡ್ಡೆ ಹಂಚಬೇಕು ಎಂದ ತಕ್ಷಣ ರಜತ್ ಕಿಶನ್ ಅಕ್ಕಿಯ ಒಂದೊಂದು ಕಾಳನ್ನು ಹಂಚಿಬಿಡಿ. ಆಗ ಸರಿ ಹೋಗುತ್ತೆ ಎಂದು ಹೇಳ್ತಾರೆ. ಆಗ ಮಾತಿಗೆ ಮಾತು ಬೆಳೆಯುತ್ತೆ.
ನಿಮಗೆ ಆಗಲ್ಲ ಎಂದ್ರೆ ಬಿಡಿ
ನಿಮಗೆ ಆಗಲ್ಲ ಎಂದ್ರೆ ಬಿಡಿ ಸರ್ ಅಡುಗೆ ಮಾಡುವುದನ್ನು ಎಂದು ಅಶ್ವಿನಿ ಗೌಡ ರಘು ಅವರಿಗೆ ಹೇಳ್ತಾರೆ. ಅದಕ್ಕೆ ರಘು ನೀವು ಎಲ್ಲಾ ಮಾತಿಗೂ ಏಕೆ ಬರ್ತಿರಾ ಎಂದು ಕೇಳ್ತಾರೆ. ಅದಕ್ಕೆ ಅಶ್ವಿನಿ ನೀವು ಯಾರಿಗೆ ಆ ಮಾತು ಹೇಳಿದ್ರಿ ಎಂದು ಕೇಳ್ತಾರೆ. ರಘು ಅವರು ಹೇಳಿದ ಆ ಪದ ಯಾರಿಗೂ ಇಷ್ಟ ಆಗಿಲ್ಲ.
ಮೂವರ ನಡುವೆ ಮಾತಿನ ಚಕಮಕಿ
ಇನ್ನು ರಘು, ಅಶ್ವಿನಿ ಗೌಡ, ರಜತ್ ಕಿಶನ್ ಮಧ್ಯೆ ಆಲೂಗಡ್ಡೆ ವಿಚಾರವಾಗಿ ಮಾತಿಗೆ ಮಾತು ಬೆಳೆದು ಮನೆಯಲ್ಲಿ ಗಲಾಟೆ ನಡೆದಿದೆ. ಎಲ್ಲರೂ ಸುಮ್ಮನೆ ಮಾತಿನ ಮಲ್ಲರೇ ಎಂದು ವೀಕ್ಷಕರು ಹೇಳಿದ್ದಾರೆ.
ಇದನ್ನೂ ಓದಿ: https://kannada.newsnext.live/cinema/other-contestants-argue-that-rakshita-is-not-capable-of-making-decisions/
ಕಿಚ್ಚನ ಕ್ಲಾಸ್ ಯಾರಿಗೆ?
ಇನ್ನು ಇಂದು ಕಿಚ್ಚನ ಪಂಚಾಯಿತಿ ನಡೆಯಲಿದೆ. ಎಷ್ಟೋ ವಿಚಾರಗಳ ಬಗ್ಗೆ ಸುದೀಪ್ ಅವರ ಮಾತನಾಡಲಿದ್ದಾರೆ. ಸರಿ-ತಪ್ಪುಗಳನ್ನು ತಿದ್ದಲಿದ್ದಾರೆ. ಆ ಪಂಚಾಯಿತಿಯಲ್ಲಿ ಆಲೂಗಡ್ಡೆ ವಿಚಾರವೂ ಬರುತ್ತಾ ನೋಡಬೇಕಿದೆ.



