Actor Prabhas : ಪ್ರಭಾಸ್‌ “ಆದಿಪುರುಷ” ಟೀಸರ್‌ ರಿಲೀಸ್‌ ರಿಲೀಸ್‌ : ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ

ಓಂ ರೌತ್‌ ನಿರ್ದೇಶನದ ಬಹುಭಾಷಾ ನಟ ಪ್ರಭಾಸ್‌(Actor Prabhas) ಅಭಿನಯದ ಆದಿಪುರುಷ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಲಂನಲ್ಲಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ ನೋಡಿದ ಪ್ರೇಕ್ಷಕ ಮಿಶ್ರ ಪ್ರತಿಕ್ರಿಯೆಯನ್ನು ನೀಡಿದ್ದಾನೆ. ಟೀಸರ್‌ ನಲ್ಲಿ ತೋರಿಸಿರುವಂತೆ ನಟ ಪ್ರಭಾಸ್‌ ಶ್ರೀ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಸೈಫ್‌ ಅಲಿ ಖಾನ್‌ ರಾವಣನಾಗಿ ನಟಿಸುತ್ತಿದ್ದೂ, ರಾಮ ಬಂಟನಾಗಿ ಮರಾಠಿ ನಟ ದೇವದತ್ತ ನಾಗೆ ನಟಿಸುತ್ತಿದ್ದಾರೆ. ಪ್ರಭಾಸ್‌ ಜೊತೆಗೆ ಕೃತಿ ಸನೊನ್‌, ಸನ್ನಿ ಸಿಂಗ್‌, ಸೈಫ್‌ ಅಲಿಕಾನ್‌ ಹೀಗೆ ಬಹುದೊಡ್ಡ ತಾರಾಗಣ ಸಿನಿಮಾಕ್ಕಿದೆ.

ಇನ್ನೂ ಚಿತ್ರಕಥೆಯೂ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದು ಲಹರಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಅಯೋಧ್ಯೆಯಲ್ಲಿ ಚಿತ್ರತಂಡ ಟೀಸರ್‌ ಬಿಡುಗಡೆಮಾಡಿದೆ. ಚಿತ್ರದ ಗ್ರಾಫಿಕ್ಸ್‌ ನ ಕುರಿತಂತೆ ಅಭಿಮಾನಿಗಳು ನೀರಸ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಟೀಸರ್‌ ನೋಡಿದ ಅಭಿಮಾನಿಗಳು ಚಿತ್ರವನ್ನು ಕಾರ್ಟೂನ್‌ ಗೆ ಹೋಲಿಸುತ್ತಿದ್ದಾರೆ. ಚಿತ್ರದ ಗ್ರಾಫಿಕ್ಸ್‌ ಹಾಗೂ ಬ್ಯಾಗ್ರೌಂಡ್‌ ಕುರಿತಂತೆ ಸಿನಿಪ್ರಿಯರಿಗೆ ಚಿತ್ರ ತಂಡ ನಿರಾಸೆಯನ್ನು ಮೂಡಿಸಿದೆ. ಬಾಹುಬಲಿಯ ನಂತರ ಪ್ರಭಾಸ್‌(Actor Prabhas) ನಟಿಸಿದ್ದ ಸಿನಿಮಾಗಳೆಲ್ಲ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿತ್ತು. ಇತ್ತೀಚೆಗೆ ರಲೀಸ್‌ ಆದ ಪ್ರಭಾಸ್‌ ಅಭಿನಯದ ರಾಧೇ ಶ್ಯಾಮ್‌ ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿತ್ತು, ಈ ಚಿತ್ರವಾದರೂ ಹಿಟ್‌ ಆಗಲಿ ಎಂದು ಪ್ರಬಾಸ್‌ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇದನ್ನೂ ಓದಿ : Rachita Ram : ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಬರ್ತಡೆ : ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು

ಇದನ್ನೂ ಓದಿ : Aishwarya Pise was eliminated :ಮೊದಲವಾರವೇ ಬಿಗ್​ಬಾಸ್​ ಮನೆಯಿಂದ ಹೊರಬಿದ್ದ ಲೇಡಿ ಬೈಕರ್​ ಐಶ್ವರ್ಯಾ ಪಿಸೆ

ಇದನ್ನೂ ಓದಿ : Sarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ

ಮುಂದಿನ ಸಿನಿಮಾದಲ್ಲಿ ಕೆ.ಜಿ.ಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ರೊಂದಿಗೆ ಹೊಂಬಾಳೆ ಫಿಲಂಸ್‌ ನಿರ್ಮಾಣದ ಸಲಾರ್‌ ನಲ್ಲಿ ಪ್ರಭಾಸ್‌(Actor Prabhas) ಕಾಣಿಸಿಕೊಳ್ಳಲಿದ್ದಾರೆ. ಆದಿಪುರುಷ ಸಿನಿಮಾ ಹಿಟ್‌ ಕೊಟ್ಟರೆ ಪ್ಯಾನ್‌ ಇಂಡಿಯಾ ಸ್ಟಾರ್‌ ಪ್ರಭಾಸ್‌ ಗೆ ಕೊಂಚ ರಿಲೀಫ್‌ ಸಿಕ್ಕಂತಾಗುತ್ತದೆ.

Prabhas “Aadipurusha” Teaser Release: Mixed Response from Audience

Comments are closed.