Singer mangli : ಕನ್ನಡ ನನ್ನ ಎರಡನೇ ಮನೆ ಎಂದ ಗಾಯಕಿ ಮಂಗ್ಲಿ

ಖ್ಯಾತ ಗಾಯಕಿ ಮಂಗ್ಲಿ(Singer Mangli) ತಮ್ಮ ಹಾಡುಗಳ ಮೂಲಕ ತೆಲುಗು ಮಾತ್ರವಲ್ಲದೇ ಅನೇಕ ಭಾಷೆಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಡಿ ಬಾಸ್‌ ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾದ ಕಣ್ಣು ಹೊಡಿಯಾಕ ಹಾಡಿನ ಮೂಲಕ ಹವಾ ಸೃಷ್ಟಿಸಿದ್ದಾರೆ. ತೆಲುಗಿನಲ್ಲಿ ಹಲವಾರು ಸೂಪರ್‌ ಹಿಟ್‌ ಹಾಡುಗಳನ್ನು ನೀಡಿದ್ದ ಮಂಗ್ಲಿ ಅರ್ಜುನ್‌ ಜನ್ಯ ಸಂಗೀತದ ಮೂಲಕ ಕಣ್ಣೇ ಅದಿರಿಂದಿ ಎನ್ನುತ್ತಾ ಕನ್ನಡ ಹಾಗೂ ತೆಲುಗು ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ಏಕ್‌ ಲವ್‌ ಯಾ ಸಿನಿಮಾದ ಎಣ್ಣೆಗೂ ಹೆಣ್ಣಿಗೂ, ವಿಕ್ರಾಂತ್‌ ರೋಣದ ರಾ ರಾ ರಕ್ಕಮ್ಮ ಹೀಗೆ ಹಲವಾರು ಹಿಟ್‌ ಗೀತೆಯನ್ನು ನೀಡುವ ಮೂಲಕ ಕನ್ನಡ ಪ್ರೇಕ್ಷಕರಿಗೆ ತನ್ನ ವಾಯ್ಸ್‌ ನ ಮೂಲಕವಾಗಿ ಹತ್ತಿರವಾದ ಗಾಯಕಿ ಮಂಗ್ಲಿ ಇದೀಗ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಗಾಯಕಿ ಮಂಗ್ಲಿ ಕನ್ನಡ ನನ್ನ ಎರಡನೇ ಮನೆ ಎಂದು ಹೇಳಿಕೊಂಡಿದ್ದಾರೆ. ಹೌದು, ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಾಯಕಿ ಮಂಗ್ಲಿ(singer mangi) ಇದು ನನ್ನ ಮೊದಲ ದಸರಾ, ತೆಲುಗು ನನ್ನ ಮೊದಲ ಮನೆಯಾದರೆ, ಕನ್ನಡ ನನ್ನ ಎರಡನೆಯ ಮನೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡವನ್ನು ಕಲಿಯುವುದಾಗಿಯೂ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ :Rachita Ram : ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಬರ್ತಡೆ : ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು

ಇದನ್ನೂ ಓದಿ : Aishwarya Pise was eliminated :ಮೊದಲವಾರವೇ ಬಿಗ್​ಬಾಸ್​ ಮನೆಯಿಂದ ಹೊರಬಿದ್ದ ಲೇಡಿ ಬೈಕರ್​ ಐಶ್ವರ್ಯಾ ಪಿಸೆ

ಇದನ್ನೂ ಓದಿ : Sarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ

ತನ್ನ ಧ್ವನಿಯ ಮೂಲಕವಾಗಿ ಕನ್ನಡಿಗರ ಮನ ಗೆದ್ದಿರುವ ಗಾಯಕಿ ಮಂಗ್ಲಿ(singermangi), ಕನ್ನಡದ ಕುರಿತು ಮಾತಾಡಿ ಕನ್ನಡಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಒಟ್ಟಿನಲ್ಲಿ ಹಲವಾರು ಭಾಷೆಗಳಲ್ಲಿ ಗಾಯನವನ್ನು ಮಾಡಿ ಸೈ ಎನಿಸಿಕೊಂಡ ಮಂಗ್ಲಿ ಕನ್ನಡವನ್ನು ತನ್ನ ಎರಡನೇ ಮನೆ ಎಂದಿರುವುದು ಕನ್ನಡಿಗರಿಗೆ ಸಖತ್‌ ಖುಷಿಕೊಟ್ಟಿದೆ

mysore yuva dasara singer mangli says kannada is my second house.

Comments are closed.