ಅಪ್ಪು ಅಭಿಮಾನಿಗಳಿಗೆ ಗುಡ್​ ನ್ಯೂಸ್​ : ಶಾಲಾ ಮಕ್ಕಳಿಗೆ ಪಾಠವಾಗಲಿದೆ ಪುನೀತ್​ ಜೀವನಗಾಥೆ

ಅಭಿಮಾನಿಗಳ ಪಾಲಿನ ಪವರ್​ ಸ್ಟಾರ್​, ಕರ್ನಾಟಕ ರತ್ನ ಪುನೀತ್​ ರಾಜ್​ಕುಮಾರ್​ ನಿಧನರಾಗಿ 4 ವರ್ಷಗಳು ಕಳೆದಿದೆ. ಪುನೀತ್​ ರಾಜ್​ಕುಮಾರ್​ ಅವರ ಬದುಕನ್ನು ಆದರ್ಶ ಮಾಡಿಕೊಳ್ಳಬೇಕು ಎಂದು ಹೇಳುವವರಿಗೆ ಇದೀಗ ಸಿಹಿಸುದ್ದಿಯೊಂದು ದೊರಕಿದೆ. ಇನ್ಮುಂದೆ ಪುನೀತ್​ ಜೀವನಗಾಥೆ ಶಾಲಾ ಪಾಠವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಮಕ್ಕಳಿಗೆ ಅಪ್ಪು ಪಾಠ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
4 ವರ್ಷಗಳಿಂದ ರಾಜ್ಯಾದಂತ ಪ್ರವಾಸ ಮಾಡಿ ಈ ಬಗ್ಗೆ ಜನಜಾಗೃತಿ ಮೂಡಿಸಿದ್ದ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿ ದೇವರಾಜ ಅರಸು ಹೋರಾಟಕ್ಕೆ ಫಲ ಸಿಕ್ಕಿದೆ. ಕನ್ನಡ ಪಠ್ಯ ಪರಿಷ್ಕರಣಾ ಸಮಿತಿಯಿಂದ ಈ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮುಡುಕೊತೊರೆ ಗ್ರಾಮದ ದೇವರಾಜ ಅರಸು ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್ ಸೇರಿದಂತೆ ಹಲವರನ್ನ ಭೇಟಿಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದರು. ಅಪ್ಪುವಿನ ಜೀವನಗಾಥೆ ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸಂಭವಿಸುತ್ತಿರುವ ಹೃದಯಾಘಾತದ ಬಗ್ಗೆ ಅರಿವು ಮೂಡಿಸಲು ಪಠ್ಯ ಕ್ರಮ ಬದಲಿಸಬೇಕು ಎಂಬುದು ಇವರ ಕಳಕಳಿಯಾಗಿತ್ತು. ಅಂತೆಯೇ 2025-2026ನೇ ಶೈಕ್ಷಣಿಕ ವರ್ಷಕ್ಕೆ ಡಾ.ಪುನೀತ್ ರಾಜಕುಮಾರ್ ರವರ ಜೀವನ ಕಥೆಯನ್ನು ಪಠ್ಯಪುಸ್ತಕಕ್ಕೆ ಸೇರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ವಿಚಾರ ಅಪ್ಪು ಅಭಿಮಾನಿಗಳಿಗೆ ಅತೀವ ಸಂತಸವನ್ನುಂಟು ಮಾಡಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories