ಹೃದಯಾಘಾತದಿಂದ ಅಶ್ಚಿನಿ ಪುನೀತ್‌ ರಾಜ್‌ ಕುಮಾರ್‌ ತಂದೆ ರೇವನಾಥ ನಿಧನ

ಬೆಂಗಳೂರು : ಪುನೀತ್‌ ರಾಜ್‌ ಕುಮಾರ್‌ ಅವರು ಬಾರದ ಲೋಕಕ್ಕೆ ಪಯಣಿಸಿದ ಕೆಲವೇ ತಿಂಗಳಲ್ಲಿಯೇ ಪುನೀತ್‌ ರಾಜ್‌ ಕುಮಾರ್‌ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ (Ashwini Puneeth Rajkumar Father) ಅವರ ತಂದೆ ರೇವನಾಥ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

78 ವರ್ಷ ಪ್ರಾಯದ ರೇವನಾಥ್‌ ಅವರು ಪುನೀತ್‌ ರಾಜ್‌ ಕುಮಾರ್‌ ಅವರ ನಿಧನದ ನಂತರ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಅವರು ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆ ಗ್ರಾಮದವರಾಗಿರುವ ರೇವನಾಥ್‌ ಅವರು ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ.

20 ವರ್ಷಗಳ ಹಿಂದೆ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಆರೋಗ್ಯವಾಗಿಯೇ ಇದ್ದ ರೇವನಾಥ್ ಅವರಿಗೆ ಪುನೀತ್‌ ರಾಜ್‌ ಕುಮಾರ್‌ ಅವರ ನಿಧನ ಶಾಕ್‌ ಕೊಟ್ಟಿತ್ತು.‌ ಚಿಕ್ಕಮಗಳೂರು ಮೂಲದ ರೇವನಾಥ್‌ ಅವರ ಪತ್ನಿ ಬೆಂಗಳೂರಿನ ಕಾಲೇಜೊಂದರಲ್ಲಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ರೇವನಾಥ ಹಾಗೂ ಅಶ್ವಿನಿ ದಂಪತಿಗಳಿಗೆ ಒಟ್ಟು ಮೂವರು ಮಕ್ಕಳು. ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಅವರು ಮೊದಲ ಮಗಳಾದ್ರೆ ಡಿಂಪಲ್‌ ಹಾಗೂ ವಿನಯ್‌ ಎಂಬ ಮಕ್ಕಳಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ನಿಧನದ ಸುದ್ದಿ ಕೇಳುತ್ತಲೇ ರೇವನಾಥ್‌ ಅವರು ಕುಸಿದು ಹೋಗಿದ್ದರು. ದೊಡ್ಮನೆ ಮಗ ಪುನೀತ್‌ ರಾಜ್‌ ಕುಮಾರ್‌ ಅವರ ನಿಧನದ ಕೆಲವೇ ತಿಂಗಳಲ್ಲಿ ಇದೀಗ ಕುಟುಂಬ ನೋವನ್ನು ಮರೆಯುವ ಮೊದಲೇ ಮತ್ತೊಂದು ನೋವಿನಲ್ಲಿ ನೂಕಿದೆ. ಪತಿಯ ಅಗಲಿಕೆಯ ನಂತರ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಅವರು ಪತಿಯ ಕನಸುಗಳನ್ನು ಸಾಕಾರಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಆದ್ರೀಗ ತಂದೆಯ ಸಾವು ಅವರಿಗೆ ಆಘಾತವನ್ನು ಮೂಡಿಸಿದೆ.

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್‌ಗೆ ಕರ್ನಾಟಕ ರತ್ನ : ಸಿಎಂ ಬಸವರಾಜ್‌ ಬೊಮ್ಮಾಯಿ ಘೋಷಣೆ

ಇದನ್ನೂ ಓದಿ : ಬೆಳ್ಳಿ ತೆರೆಗೆ ಬಾಲನಟನ‌ ಬದುಕು: ಪುನೀತ್‌ ರಾಜ್‌ ಕುಮಾರ್‌ ಬಯೋಪಿಕ್ ರೂಪದಲ್ಲಿ ಪವರ್ ಚರಿತ್ರೆ

(Puneeth Raj Kumar wife Ashwini Puneeth Rajkumar Father Reva Nath Death MS Ramaiah Hospital in Bangalore)

Comments are closed.